ಸುಭಾಷಿತ :

Tuesday, January 28 , 2020 2:09 PM

ಜಿಯೋ ಗ್ರಾಹಕರೇ ಗಮನಿಸಿ : ಇನ್ನು ಮುಂದೆ ಜಿಯೋ ಕರೆ ಉಚಿತವಲ್ಲ!


Thursday, October 10th, 2019 8:20 am

ನವದೆಹಲಿ: ಜಿಯೋ ಗ್ರಾಹಕರು ಇದನ್ನು ಓದಲೇಬೇಕು. ಯಾಕೆಂದರೆ ಇನ್ನು ಮುಂದೆ ಫ್ರೀ ಕಾಲ್ ಮಾಡಲು ಸಾಧ್ಯವಿಲ್ಲ. ಇಷ್ಟು ದಿನ ಉಚಿತವಾಗಿ ಕರೆ ಸೌಲಭ್ಯವನ್ನು ಒದಗಿಸಿದ ಟೆಲಿಕಾಂ ಸಂಸ್ಥೆ ರಿಲಯನ್ಸ್‌ ಜಿಯೋ ಈಗ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಲು ನಿರ್ಧರಿಸಿದೆ.

ಆದರೆ ಇದು ಜಿಯೋದಿಂದ ಇತರ ನೆಟ್‌ವರ್ಕ್‌ಗಳಿಗೆ ಮಾಡಿದ ಕರೆಗಳಿಗೆ ಮಾತ್ರ ಅನ್ವಯಿಸಲಿದೆ. ಜಿಯೋದಿಂದ ಬಿಎಸ್‌ಎನ್‌ಎಲ್‌, ಏರ್‌ಟೆಲ್‌, ವೋಡಾಫೋನ್‌ಗೆ ಕರೆ ಮಾಡಿದರೆ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಲಾಗುತ್ತಿದ್ದು, ಜಿಯೋದಿಂದ ಜಿಯೋ ಸಂಖ್ಯೆಗೇ ಕರೆ ಮಾಡಿದರೆ ಯಾವುದೇ ಶುಲ್ಕವಿಲ್ಲ.

ಹೊಸ ಆಫರ್ ಅನ್ವಯ ನೀವು 124 ನಿಮಿಷದವರೆಗೆ ಇತರ ಟೆಲಿಕಾಂ ಕಂಪನಿಗಳ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಮಾತನಾಡಿದರೆ 1 ಜಿಬಿ ಡೇಟಾವನ್ನು ಜಿಯೋ ಒದಗಿಸಲಿದೆ. ಬೇರೆ ಕಂಪನಿಗಳ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದಾಗ ಆ ಕಂಪನಿಗೆ ಜಿಯೋ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕವನ್ನು ಪಾವತಿಸಬೇಕಿದ್ದು, ಈವರೆಗೆ ಜಿಯೋ ತಾನೇ ಈ ಮೊತ್ತವನ್ನು ಭರಿಸುತ್ತಿತ್ತು. ಆದರೆ ಅದನ್ನು ಈಗ ಗ್ರಾಹಕರೇ ನೀಡಬೇಕು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions