ಲಡಾಖ್ : ರಿಲಯನ್ಸ್ ಜಿಯೋ ತನ್ನ 5 ಜಿ ಸೇವೆಯನ್ನು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಪ್ರಾರಂಭಿಸಿದೆ. ಭಾರತೀಯ ಸೇನೆಯ ‘ಫೈರ್ ಅಂಡ್ ಫ್ಯೂರಿ ಕಾರ್ಪ್ಸ್’ ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದೆ. ಸಿಯಾಚಿನ್ ಹಿಮನದಿಯಲ್ಲಿ ಸೇವೆಯನ್ನು ಪ್ರಾರಂಭಿಸಿದ ದೇಶದ ಮೊದಲ ಆಪರೇಟರ್ ಎಂಬ ಹೆಗ್ಗಳಿಕೆಗೆ ಜಿಯೋ ಇದೀಗ ಪಾತ್ರವಾಗಿದೆ.
ಸೇನೆಯ ಪ್ರಕಾರ, ಜಿಯೋ ಟೆಲಿಕಾಂ ಮತ್ತು ಭಾರತೀಯ ಸೇನೆಯು ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಮೊದಲ 5 ಜಿ ಮೊಬೈಲ್ ಟವರ್ ಅನ್ನು ಯಶಸ್ವಿಯಾಗಿ ಸ್ಥಾಪಿಸಿದೆ. ಹಿಮಾಲಯದ ಕಾರಕೋರಂ ಶ್ರೇಣಿಯಲ್ಲಿ 16,000 ಅಡಿ ಎತ್ತರದಲ್ಲಿ ಈ 5ಜಿ ಸಂಪರ್ಕ ಸಾಧ್ಯವಾಗಿದೆ.
ಜನವರಿ 15 ರಂದು ಸೇನಾ ದಿನಾಚರಣೆಯ ಮೊದಲು ಸಿಯಾಚಿನ್ ಗ್ಲೇಸಿಯರ್‌ನಲ್ಲಿ 4 ಜಿ ಮತ್ತು 5 ಜಿ ಸೇವೆಗಳನ್ನು ಪ್ರಾರಂಭಿಸುವ ಮೂಲಕ ಜಿಯೋ ಅಭೂತಪೂರ್ವ ಮೈಲಿಗಲ್ಲನ್ನು ಸಾಧಿಸಿದೆ. ‘ಸವಾಲಿನ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಿದ ನಮ್ಮ ಧೈರ್ಯಶಾಲಿ ಸೈನಿಕರಿಗೆ ಈ ಸಾಧನೆಯನ್ನು ಅರ್ಪಿಸಲಾಗಿದೆ’ ಎಂದು ಸೇನೆ ತಿಳಿಸಿದೆ.
ಇಷ್ಟು ಎತ್ತರದಲ್ಲಿ ಗೋಪುರವನ್ನು ಸ್ಥಾಪಿಸುವುದು ತುಂಬಾ ಕಷ್ಟಕರವಾಗಿತ್ತು. ಲಾಜಿಸ್ಟಿಕ್ಸ್ ಸೇರಿದಂತೆ ಸಿಬ್ಬಂದಿಯ ಸುರಕ್ಷತೆಯನ್ನು ಸೇನೆ ಖಚಿತಪಡಿಸಿತು. ಆದ್ದರಿಂದ ಜಿಯೋ ತನ್ನ ಸ್ಥಳೀಯ ಫುಲ್ ಸ್ಟ್ಯಾಕ್ 5 ಜಿ ತಂತ್ರಜ್ಞಾನವನ್ನು ಬಳಸಿತು. ಫೈರ್ ಅಂಡ್ ಫ್ಯೂರಿ ಸಿಗ್ನಲರ್ಸ್ ಮತ್ತು ಸಿಯಾಚಿನ್ ವಾರಿಯರ್ಸ್ ಜಿಯೋ ತಂಡದೊಂದಿಗೆ ಕೈಜೋಡಿಸಿತು. ಈ ಪ್ರದೇಶದ ತಾಪಮಾನವು -50 ಡಿಗ್ರಿ ಸೆಲ್ಸಿಯಸ್ ವರೆಗೂ ಕುಸೊಯುತ್ತದೆ. ತಂಪಾದ ಗಾಳಿ ಮತ್ತು ಹಿಮಪಾತಗಳು ಆಗಾಗ್ಗೆ ಇಲ್ಲಿ ಸಂಭವಿಸುತ್ತವೆ.
ತೆರಿಗೆ ಹಂಚಿಕೆಯ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಾದ ಬಿಜೆಪಿಗರು ‘ದೆಹಲಿ ಗುಲಾಮ’ರಾಗಿದ್ದಾರೆ: ಸಿಎಂ ಸಿದ್ಧರಾಮಯ್ಯ
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ಮುಚ್ಚಿಹಾಕುವ ಯತ್ನ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ