Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ `SC-ST’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 10ನೇ ತರಗತಿವರೆಗೂ `RTE’ ಉಚಿತ ಶಿಕ್ಷಣೆ ವಿಸ್ತರಣೆ

ಕೈಬರಹದಲ್ಲಿದೆ ನಿಮ್ಮ ಮೆದುಳಿನ ಆರೋಗ್ಯದ ರಹಸ್ಯ: ಬುದ್ಧಿಮಾಂದ್ಯತೆಯ ಮುನ್ಸೂಚನೆ ನೀಡುತ್ತೆ ನಿಮ್ಮ ಬರವಣಿಗೆ ಶೈಲಿ!

SHOCKING : 33 ವರ್ಷಗಳಲ್ಲಿ ದುಪ್ಪಟ್ಟಾದ ಮಾನಸಿಕ ಆರೋಗ್ಯ ಸಮಸ್ಯೆಗಳು; 120 ಕೋಟಿಗೂ ಹೆಚ್ಚು ಜನ ಸಂಕಷ್ಟದಲ್ಲಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಿಯೋ ಫೈನಾನ್ಸ್ ಪೂರ್ಣ ಪ್ರಮಾಣದ ಅಪ್ಲಿಕೇಷನ್ ಬಿಡುಗಡೆ: 60 ಲಕ್ಷ ಬಳಕೆದಾರರಿಂದ ಡೌನ್ ಲೋಡ್
BUSINESS

ಜಿಯೋ ಫೈನಾನ್ಸ್ ಪೂರ್ಣ ಪ್ರಮಾಣದ ಅಪ್ಲಿಕೇಷನ್ ಬಿಡುಗಡೆ: 60 ಲಕ್ಷ ಬಳಕೆದಾರರಿಂದ ಡೌನ್ ಲೋಡ್

By ವಸಂತ ಬಿ ಈಶ್ವರಗೆರೆ

ಮುಂಬೈ : ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಜೆಎಫ್‌ಎಸ್‌ಎಲ್) ತನ್ನ ಪೂರ್ಣ ಪ್ರಮಾಣದ ಜಿಯೋ ಫೈನಾನ್ಸ್ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಹಿಂದೆಂದಿಗಿಂತಲೂ ಉತ್ತಮ ಹಣಕಾಸು ಸೇವೆಗಳನ್ನು ಒದಗಿಸಲು ಸಾಧ್ಯವಾಗಲಿದೆ.

ಜಿಯೋಫೈನಾನ್ಸ್ (JioFinance) ಅಪ್ಲಿಕೇಷನ್‌ನ ಬೀಟಾ ಆವೃತ್ತಿಯನ್ನು ಸುಮಾರು 4 ತಿಂಗಳ ಹಿಂದೆ, ಅಂದರೆ ಮೇ 30, 2024ರಂದು ಆರಂಭಿಸಲಾಯಿತು. ಅಂದಿನಿಂದ 60 ಲಕ್ಷ ಬಳಕೆದಾರರು ಇದನ್ನು ಡೌನ್‌ಲೋಡ್ ಮಾಡಿದ್ದಾರೆ. ಗ್ರಾಹಕರ ಪ್ರತಿಕ್ರಿಯೆಯನ್ನು ಆಧರಿಸಿ ಹೊಸ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಹೊಸ ಅಪ್ಲಿಕೇಷನ್ ಅನ್ನು ಗೂಗಲ್ ಪ್ಲೇ ಸ್ಟೋರ್, ಆಪಲ್ ಆಪ್ ಸ್ಟೋರ್ ಮತ್ತು ಮೈಜಿಯೋ (MyJio)ನಿಂದ ಡೌನ್‌ಲೋಡ್ ಮಾಡಬಹುದು.

ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಕಂಪನಿಯು ತನ್ನ ಹಣಕಾಸಿನ ಉತ್ಪನ್ನ ಸರಪಳಿಗೆ ಅನೇಕ ಹೊಸ ಸೇವೆಗಳನ್ನು ಸೇರಿಸಿದೆ. ಇವುಗಳಲ್ಲಿ ಮ್ಯೂಚುವಲ್ ಫಂಡ್‌ಗಳ ಮೇಲಿನ ಸಾಲ, ಆಸ್ತಿಯ ಮೇಲಿನ ಸಾಲ, ಗೃಹ ಸಾಲ ಮತ್ತು ಗೃಹ ಸಾಲದ ಬಾಕಿಯ ವರ್ಗಾವಣೆಯೂ ಸೇರಿವೆ. ಹಣಕಾಸು ಮಾರುಕಟ್ಟೆಯಲ್ಲಿ ನೆಲೆಯನ್ನು ಸ್ಥಾಪಿಸಲು ಕಂಪನಿಯು ಸ್ಪರ್ಧಾತ್ಮಕ ದರಗಳಲ್ಲಿ ಸಾಲವನ್ನು ನೀಡುತ್ತದೆ.

ಕಂಪನಿಯ ಪ್ರಕಾರ, ಸುಮಾರು 15 ಲಕ್ಷ ಗ್ರಾಹಕರು ಜಿಯೋ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಜೆಪಿಬಿಎಲ್) ನಲ್ಲಿ ಉಳಿತಾಯ ಖಾತೆಗಳನ್ನು ತೆರೆದಿದ್ದಾರೆ. ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಕೇವಲ 5 ನಿಮಿಷಗಳಲ್ಲಿ ಡಿಜಿಟಲ್ ಆಗಿ ತೆರೆಯಬಹುದು. ಖಾತೆಯೊಂದಿಗೆ ಡೆಬಿಟ್ ಕಾರ್ಡ್ ಸಹ ಲಭ್ಯವಿರುತ್ತದೆ ಮತ್ತು ಬಯೋಮೆಟ್ರಿಕ್ ದೃಢೀಕರಣದಿಂದಾಗಿ, ಉಳಿತಾಯ ಖಾತೆಯು ಹೆಚ್ಚು ಸುರಕ್ಷಿತವಾಗಿರುತ್ತದೆ. ಇದರ ಜತೆಗೆ, ಯುಪಿಐ ಪಾವತಿ, ಮೊಬೈಲ್ ರೀಚಾರ್ಜ್ ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳ ಪಾವತಿಯಂತಹ ಸೇವೆಗಳು ಸಹ ಗ್ರಾಹಕರಿಗೆ ಲಭ್ಯವಿರುತ್ತವೆ.

ಜಿಯೋ ಫೈನಾನ್ಸ್ ಅಪ್ಲಿಕೇಷನ್‌ನಲ್ಲಿ ಗ್ರಾಹಕರ ವಿವಿಧ ಬ್ಯಾಂಕ್ ಖಾತೆಗಳು ಮತ್ತು ಮ್ಯೂಚುವಲ್ ಫಂಡ್ ಹೋಲ್ಡಿಂಗ್‌ಗಳನ್ನು ಸಹ ಜೋಡಣೆ ಮಾಡಬಹುದು. ಅಲ್ಲದೆ ಜಿಯೋಫೈನಾನ್ಸ್ ಅಪ್ಲಿಕೇಷನ್ ಜೀವ ವಿಮೆ, ದ್ವಿಚಕ್ರ ವಾಹನ ಮತ್ತು ಮೋಟಾರು ವಿಮೆ ಕ್ಷೇತ್ರದಲ್ಲಿ ಅನೇಕ ಸೇವೆಗಳನ್ನು ಸಹ ನೀಡುತ್ತದೆ. ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (JFSL) ಸಹ ಗ್ರಾಹಕರಿಗೆ ವಿಶ್ವ ದರ್ಜೆಯ, ನವೀನ ಹೂಡಿಕೆ ಪರಿಹಾರಗಳನ್ನು ತರಲು ಅಂತಾರಾಷ್ಟ್ರೀಯ ಫಂಡ್ ಬ್ಲ್ಯಾಕ್ ರಾಕ್ (BlackRock) ಜೊತೆ ಕೆಲಸ ಮಾಡುತ್ತಿದೆ.

ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಹಿತೇಶ್ ಸೇಥಿಯಾ ಮಾತನಾಡಿ, “ಜೆಎಫ್ಎಸ್ಎಲ್ ನಲ್ಲಿ ಹೊಸ ಜಿಯೋ ಫೈನಾನ್ಸ್ ಅಪ್ಲಿಕೇಷನ್ ಅನ್ನು ಭಾರತದಲ್ಲಿ ರೂಪಿಸಲಾಗಿದ್ದು, ಅನೇಕ ಹೊಸ ವೈಶಿಷ್ಟ್ಯಗಳೊಂದಿಗೆ ಜನರಿಗೆ ಅಡೆತಡೆ ಇಲ್ಲದ ಮತ್ತು ಅನುಕೂಲಕರ ಹಣಕಾಸು ಸೇವೆಗಳನ್ನು ಒದಗಿಸುವುದು. ನಾವು ಭಾರತದ ಜನರಿಗೆ ವಿಶ್ವಾಸಾರ್ಹ ಆರ್ಥಿಕ ಪಾಲುದಾರರಾಗುವತ್ತ ಸಾಗುತ್ತಿದ್ದೇವೆ,” ಎಂದಿದ್ದಾರೆ.

‘BBMP ಮುಖ್ಯ ಆಯುಕ್ತ’ರ ಹೆಸರಲ್ಲಿ ‘ನಕಲಿ ಫೇಸ್ ಬುಕ್ ಖಾತೆ’ ತೆರದವರ ವಿರುದ್ಧ ‘FIR’ ದಾಖಲು

ಲಾವೋಸ್’ನಲ್ಲಿ ಕೆನಡಾದ ಪ್ರಧಾನಿ ‘ಜಸ್ಟಿನ್ ಟ್ರುಡೋ’ ಭೇಟಿಯಾದ ‘ಪ್ರಧಾನಿ ಮೋದಿ’

BREAKING : ‘ಜಮ್ಮು-ಕಾಶ್ಮೀರ ಸರ್ಕಾರ’ ರಚನೆಗೆ ‘ಒಮರ್ ಅಬ್ದುಲ್ಲಾ’ ಹಕ್ಕು ಮಂಡನೆ, ’55 ಶಾಸಕರ ಬೆಂಬಲ ಪತ್ರ’ ಹಸ್ತಾಂತರ

Share. Facebook Twitter LinkedIn WhatsApp Email

Related Posts

ಕೈಬರಹದಲ್ಲಿದೆ ನಿಮ್ಮ ಮೆದುಳಿನ ಆರೋಗ್ಯದ ರಹಸ್ಯ: ಬುದ್ಧಿಮಾಂದ್ಯತೆಯ ಮುನ್ಸೂಚನೆ ನೀಡುತ್ತೆ ನಿಮ್ಮ ಬರವಣಿಗೆ ಶೈಲಿ!

1 Min Read

SHOCKING : 33 ವರ್ಷಗಳಲ್ಲಿ ದುಪ್ಪಟ್ಟಾದ ಮಾನಸಿಕ ಆರೋಗ್ಯ ಸಮಸ್ಯೆಗಳು; 120 ಕೋಟಿಗೂ ಹೆಚ್ಚು ಜನ ಸಂಕಷ್ಟದಲ್ಲಿ!

3 Mins Read

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ತೀವ್ರ ನಿಗಾ: ಕಣ್ಗಾವಲು ನಡುವೆಯೂ 25ಕ್ಕೂ ಹೆಚ್ಚು ಹಡಗುಗಳ ಸುರಕ್ಷಿತ ಸಂಚಾರ; ಐಆರ್‌ಜಿಸಿ ನೌಕಾಪಡೆ ಘೋಷಣೆ!

2 Mins Read
Recent News

ರಾಜ್ಯದ `SC-ST’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 10ನೇ ತರಗತಿವರೆಗೂ `RTE’ ಉಚಿತ ಶಿಕ್ಷಣೆ ವಿಸ್ತರಣೆ

ಕೈಬರಹದಲ್ಲಿದೆ ನಿಮ್ಮ ಮೆದುಳಿನ ಆರೋಗ್ಯದ ರಹಸ್ಯ: ಬುದ್ಧಿಮಾಂದ್ಯತೆಯ ಮುನ್ಸೂಚನೆ ನೀಡುತ್ತೆ ನಿಮ್ಮ ಬರವಣಿಗೆ ಶೈಲಿ!

SHOCKING : 33 ವರ್ಷಗಳಲ್ಲಿ ದುಪ್ಪಟ್ಟಾದ ಮಾನಸಿಕ ಆರೋಗ್ಯ ಸಮಸ್ಯೆಗಳು; 120 ಕೋಟಿಗೂ ಹೆಚ್ಚು ಜನ ಸಂಕಷ್ಟದಲ್ಲಿ!

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ತೀವ್ರ ನಿಗಾ: ಕಣ್ಗಾವಲು ನಡುವೆಯೂ 25ಕ್ಕೂ ಹೆಚ್ಚು ಹಡಗುಗಳ ಸುರಕ್ಷಿತ ಸಂಚಾರ; ಐಆರ್‌ಜಿಸಿ ನೌಕಾಪಡೆ ಘೋಷಣೆ!

State News
KARNATAKA

ರಾಜ್ಯದ `SC-ST’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 10ನೇ ತರಗತಿವರೆಗೂ `RTE’ ಉಚಿತ ಶಿಕ್ಷಣೆ ವಿಸ್ತರಣೆ

By kannadanewsnow57 KARNATAKA 1 Min Read

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ (RTE) ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಜಾತಿ (SC) ಹಾಗೂ…

BIG NEWS : ಅನುಕಂಪದ ಆಧಾರದ ನೇಮಕಾತಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ | Government of Karnataka

ALERT : ಪಬ್ಲಿಕ್ ನಲ್ಲಿ ಮೊಬೈಲ್ ಚಾರ್ಜ್ ಬೇಡ: ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ!

BIG NEWS : ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಕೇಂದ್ರ ಮಾದರಿ ವೇತನ, ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.