ಬೆಂಗಳೂರು: ವರಾಹಿ ಜ್ಯುವೆಲ್ಲರ್ ಮಾಲಕಿ ವನಿತಾಗೆ ವಂಚನೆ ಆರೋಪದ ಪ್ರಕರಣದಲ್ಲಿ ಆರೋಪಿ ಐಶ್ವರ್ಯ ಹಾಗೂ ಪತಿ ಹರೀಶ್ ಅವರಿಗೆ ಜನವರಿ 6ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಇಂದು ಈ ಪ್ರಕರಣ ಸಂಬಂಧ ಬೆಂಗಳೂರಿನ 4ನೇ ಎಸಿಎಂಎಂ ನ್ಯಾಯಾಲಯವು ವಿಚಾರಣೆ ನಡೆಸಿತು. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲು ತಮ್ಮ ವಶಕ್ಕೆ ನೀಡುವಂತೆ ಕೋರಿದ್ದರು. ಈ ಹಿನ್ನಲೆಯಲ್ಲಿ ವಂಚಕಿ ಐಶ್ವರ್ಯ ಹಾಗೂ ಅವರ ಪತಿ ಹರೀಶ್ ಗೆ ಜನವರಿ 6ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಅಂದಹಾಗೇ ವರಾಹಿ ಜ್ಯುವೆಲ್ಲರಿ ಮಾಲಕಿ ವನಿತಾ ಅವರು ವಂಚನೆ ಪ್ರಕರಣವನ್ನು ದಾಖಲಿಸಿದ್ದರು. ಈ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇಬ್ಬರು ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆಯ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದರು. ಇಂದು ಇಬ್ಬರಿಗೆ ಜನವರಿ.6ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
BIG NEWS: ಕರ್ನಾಟಕದಲ್ಲಿ ನಾಲ್ಕು ತಿಂಗಳಲ್ಲಿ 217 ತಾಯಂದಿರ ಸಾವು: ವರದಿ | Maternal Deaths In Karnataka
GOOD NEWS: ಹೊಸ ವರ್ಷಕ್ಕೆ ಮುರ್ಡೇಶ್ವರ ಕಡಲ ತೀರ ಪ್ರವಾಸಿಗರಿಗೆ ಓಪನ್: DC ಮಾಹಿತಿ | Murudeshwar Beach