ಬೆಂಗಳೂರು: ಈಗಾಗಲೇ ಹಲವು ಜೆಡಿಎಸ್ ನಾಯಕರು ಪಕ್ಷ ಬಿಟ್ಟು ಹೊರ ನಡೆದು ಶಾಕ್ ನೀಡಿದ್ದರು. ಈ ಬೆನ್ನಲ್ಲೇ ಮತ್ತೊಂದು ಜೆಡಿಎಸ್ ವಿಕೆಟ್ ಪತನಗೊಂಡಿದೆ. ಇಂದು ಮಾಜಿ ಪರಿಷತ್ ಸದಸ್ಯ ಹೆಚ್ ಆರ್ ಶ್ರೀನಾಥ್ ಅವರು, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ಹೌದು.. ಇಂದು ಮಾಜಿ ಪರಿಷತ್ ಸದಸ್ಯ ಹೆಚ್.ಆರ್ ಶ್ರೀನಾಥ್ ತೆನೆ ಇಳಿಸಿ ಕೈಹಿಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗೆ  ಕೊಪ್ಪಳದ ಶ್ರೀನಾಥ್ ಸೇರ್ಪಡೆಯಾಗಿದ್ದಾರೆ.

BIG NEWS: ಒಂದೇ ರೂಂನಲ್ಲಿ ನಟ ನರೇಶ್-ನಟಿ ಪವಿತ್ರಾ ಲೋಕೇಶ್: ಸಿಡಿದೆದ್ದು ಹೋಟೆಲ್ ಬಳಿ ರಮ್ಯಾ ರಘುಪತಿ ಗಲಾಟೆ

ಅವರನ್ನು ಕಾಂಗ್ರೆಸ್ ಶಾಲು, ಭಾವುಟ ನೀಡಿ ಪಕ್ಷಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬರಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದಂತ ಹೆಚ್ ಆರ್ ಶ್ರೀನಾಥ್ ಅವರು, ನಾನು ಮೂರು ವರ್ಷ ವನವಾಸದಲ್ಲಿ ಇದ್ದೆ. ಇಂದು ಮತ್ತೆ ಪಕ್ಷಕ್ಕೆ ವಾಪಸ್ಸಾಗಿದ್ದೇನೆ. ಡಿ.ಕೆ ಶಿವಕುಮಾರ್, ಬಿ.ಕೆ ಹರಿಪ್ರಸಾದ್ ಮಾರ್ಗದರ್ಶನದಲ್ಲಿ ಪಕ್ಷಕ್ಕೆ ವಾಪಸ್ ಬಂದಿದ್ದೇನೆ ಎಂದರು.

ನನಗೆ ಬಿಜೆಪಿಯವರು ಆಹ್ವಾನ ನೀಡಿದ್ದರು. ಖುದ್ದು ಅಮಿತ್ ಶಾ ಕಚೇರಿಯಿಂದಲೇ ಆಹ್ವಾನ ಬಂದಿತ್ತು. ಜಾತ್ಯಾತೀತತೆಯ ಕಾರಣ ಮತ್ತೆ ಕಾಂಗ್ರೆಸ್ ಗೆ ವಾಪಸ್ಸಾಗಿದ್ದೇನೆ. ಬಿಜೆಪಿ ಕೋಮುದ್ವೇಷ ಸೃಷ್ಟಿಸಲು ಹೊರಟಿದೆ. ಅಂಜನಾದ್ರಿ ವಿಚಾರವನ್ನ ಮುಂದಿಟ್ಟುಕೊಂಡು ಹೊರಟಿದ್ದಾರೆ. ಅದು ಕೇವಲ ಹಿಂದೂಗಳಿಗೆ ಮಾತ್ರವಲ್ಲ. ಎಲ್ಲಾ ಧರ್ಮಗಳಿಗೆ ಸೇರಿರುವ ಇತಿಹಾಸ ಇದೆ. ಪವಿತ್ರ ಕ್ಷೇತ್ರವನ್ನ ರಕ್ಷಿಸುವ ಕೆಲಸ ಮಾಡುತ್ತೇವೆ. ಯಾವುದೇ ಷರತ್ತು ಇಲ್ಲದಂತೆ ಬರುವಂತೆ ಹೇಳಿದ್ದರು. ಅದರಂತೆ ಯಾವುದೇ ಅಧಿಕಾರದ ಆಸೆಯಿಂದ ವಾಪಸ್ ಬಂದಿಲ್ಲ ಎಂದರು.

BIG NEWS: ದೇಶಕ್ಕೆ ಮೌನಿಯಾಗಿರುವ ರಾಷ್ಟ್ರಪತಿ ಅಥವಾ ರಬ್ಬರ್ ಸ್ಟಾಂನ್ ರಾಷ್ಟ್ರಪತಿಯಾಗಲ್ಲ – ಯಶವಂತ್ ಸಿನ್ಹಾ

Share.
Exit mobile version