ಬೆಂಗಳೂರು: ರಾಜ್ಯ ಜೆಡಿಎಸ್ ನಲ್ಲಿ ಲೋಕಸಭಾ ಚುನಾವಣೆಗೆ ಸಿದ್ಧತೆ ಗರಿಗೆದರಿದೆ. ಲೋಕಸಭಾ ಚುನಾವಣೆ ಸಂಬಂಧ ಈಗಾಗಲೇ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವಂತ ಜೆಡಿಎಸ್, ಕ್ಷೇತ್ರಗಳಲ್ಲಿ ಈಗಿನಿಂದಲೇ ಗೆಲ್ಲೋದಕ್ಕೆ ಪ್ಲಾನ್ ಮಾಡುತ್ತಿದೆ. ಇದಕ್ಕಾಗಿ ಇಂದಿನಿಂದ 2 ದಿನ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ರೆಸಾರ್ಟ್ ಪಾಲಿಟಿಕ್ಸ್ ಆರಂಭಿಸುತ್ತಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದಲ್ಲಿರುವಂತ ರೆಸಾರ್ಟ್ ಒಂದರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು, ಮುಂಡರ ಸಭೆಯನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದಿನಿಂದ ಎರಡು ದಿನ ಮಾಡುತ್ತಿದ್ದಾರೆ.
ಇಂದು ಸಂಜೆಯ ವೇಳೆಗೆ ಮಂಡ್ಯ ಜಿಲ್ಲೆಯ ಜೆಡಿಎಸ್ ಮುಖಂಡರೊಂದಿಗೆ ರೆಸಾರ್ಟ್ ಗೆ ತೆರಳುತ್ತಿರೋ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು, ಅಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾವ ರೀತಿಯಾಗಿ ಚುನಾವಣೆ ಎದುರಿಸಬೇಕು. ಕಾಂಗ್ರೆಸ್ ಪೈಪೋಟಿಯ ನಡುವೆ ಕ್ಷೇತ್ರವನ್ನು ಹೇಗೆ ಕೆದ್ದುಕೊಳ್ಳಬೇಕು ಎನ್ನುವ ಬಗ್ಗೆ ಎರಡು ದಿನ ರೆಸಾರ್ಟ್ ಪಾಲಿಟಿಕ್ಸ್ ನಲ್ಲಿ ನಡೆಸಲಿದ್ದಾರೆ. ಇಲ್ಲಿನ ಸಭೆಯ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.
BREAKING : ಜಪಾನ್’ನಲ್ಲಿ ಮತ್ತೆ ಪ್ರಭಲ ಭೂಕಂಪ : 6.0 ತೀವ್ರತೆ ದಾಖಲು, ಜಪಾನೀಯರಲ್ಲಿ ಆತಂಕ
BIG Alert: ‘ವಾಹನ ಸವಾರ’ರ ಗಮನಕ್ಕೆ: ಜ.16ರಿಂದ ಮತ್ತೆ 4 ದಿನ ಬೆಂಗಳೂರಿನ ‘ಪೀಣ್ಯ ಫ್ಲೈ ಓವರ್ ಕ್ಲೋಸ್’