ಬೆಂಗಳೂರು: ಕರ್ನಾಟಕ ಪ್ರದೇಶ ಜನತಾದಳ(JDS)ದಿಂದ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರ ಸಲುವಾಗಿ ಲೋಕಸಭೆಯ ಕ್ಷೇತ್ರವಾರು ಉಸ್ತುವಾರಿ ನಾಯಕರು ಮತ್ತು ಸಹ ನಾಯಕರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಈ ಕುರಿತಂತೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ತಾಲ್ಲೂಕು ಮತ್ತು ಜಿಲ್ಲಾ ಘಟಕಗಳನ್ನು ಸಂಘಟಿಸಿ, ಬಲವರ್ಧನೆಗೊಳಿಸಲು ಮತ್ತು ಚುನಾವಣೆಗೆ ಪೂರ್ವ ಸಿದ್ಧತೆ ಕಾರ್ಯಕೈಗೊಳ್ಳಲು ಲೋಕಸಭಾವಾರು ಉಸ್ತುವಾರಿ ನಾಯಕರು ಮತ್ತು ಸಹ ನಾಯಕರನ್ನು ನೇಮಿಸುವುದು ಸೂಕ್ತ ಮತ್ತು ಅಗತ್ಯವೆಂದು ಪಕ್ಷದ ಕೋರ್ ಕಮಿಟಿಯಲ್ಲಿ ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಸೀಟುಗಳ ಹಂಚಿಕೆ ಬಗ್ಗೆ ಒಮ್ಮತವಿದ್ದು, ಉಭಯ ಪಕ್ಷಗಳ ನಡುವೆ ಪರಸ್ಪರ ಹೊಂದಾಣಿಕೆ ಮತ್ತು ಸಮನ್ವಯ ಸಾಧಿಸುವುದು ಅಗತ್ಯವಿರುತ್ತದೆ ಎಂದು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಈ ಕೆಳಕಂಡ ಮುಖಂಡರನ್ನು ಲೋಕಸಭೆವಾರು ಉಸ್ತುವಾರಿ ನಾಯಕರು ಮತ್ತು ಸಹ ನಾಯಕರನ್ನಾಗಿ ನೇಮಿಸಲಾಗಿದೆ.
ಹೀಗಿದೆ ಲೋಕಸಭೆವಾರು ಜೆಡಿಎಸ್ ಉಸ್ತುವಾರಿ ನಾಯಕರು ಮತ್ತು ಸಹನಾಯಕರ ಲೀಸ್ಟ್
BIG NEWS: ಬಿಜೆಪಿ ಸಂಸದರೆಲ್ಲ ‘ಶೋ ಪೀಸ್’ಗಳು, ಈಗಿರುವ ‘MP’ಗಳು ಯಾರು ಗಂಡಸರಲ್ಲ – ಶಾಸಕ ಹೆಚ್.ಸಿ ಬಾಲಕೃಷ್ಣ
ರಾಜ್ಯ ಸರ್ಕಾರದಿಂದ ‘ರೈತ’ರಿಗೆ ಗುಡ್ ನ್ಯೂಸ್: ‘ಪಹಣಿ ಸಮಸ್ಯೆ’ಗೆ ಮುಕ್ತಿ, ಎಲ್ಲಾ ದಾಖಲೆಗಳು ‘ಡಿಜಟಲೀಕರಣ’