ಬೆಂಗಳೂರು: ಇಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜ್ಯ ಅರಣ್ಯ ಇಲಾಖೆಯಿಂದ ಕರ್ನಾಟಕದ ನಾಲ್ಕು ಕುಮ್ಕಿ ಆನೆಗಳನ್ನು ಆಂಧ್ರಪ್ರದೇಶಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಯಹೇ ಕರ್ನಾಟಕ ಮಾತೆ ಎಂಬುದಾಗಿ ಹೇಳುವ ಮೂಲಕ ಕನ್ನಡದಲ್ಲೇ ನಟ, ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಮಾತನಾಡಿ ಗಮನ ಸೆಳೆದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದಂತ ಪವನ್ ಕಲ್ಯಾಣ್ ಅವರು ಭಾರತ ಜನನಿಯ ತನುಜಾತೆ. ಜಯಹೇ ಕರ್ನಾಟಕ ಮಾತೆ ಎಂಬುದಾಗಿ ಭಾಷಣ ಆರಂಭಿಸಿದರು. ಅಲ್ಲದೇ ಕನ್ನಡದಲ್ಲೇ ಈ ಪುಣ್ಯಭೂಮಿಗೆ ಹಾಗೂ ಕರ್ನಾಟಕ ಜನತೆಗೆ ನಮಿಸುತ್ತೇನೆ ಎಂದರು.
ಇನ್ನೂ ತಮ್ಮ ಭಾಷಣದುದ್ದಕ್ಕೂ ನಟ ಪವನ್ ಕಲ್ಯಾಣ ಅವರು ಕುವೆಂಪು ಅವರ ಸಾಲುಗಳನ್ನು ಅಲ್ಲಲ್ಲಿ ಉಲ್ಲೇಖಿಸಿದರು. ಅಲ್ಲದೇ ಸಾಧ್ಯವಾದಷ್ಟು ತಮ್ಮ ಮಾತೃಭಾಷಣೆ ತೆಲುಗು ಕಡಿಮೆ ಮಾಡಿ, ಕನ್ನಡದಲ್ಲೇ ಭಾಷಣ ಮಾಡಿದ್ದು ಗಮನ ಸೆಳೆಯಿತು.
ಕಳೆದ ವರ್ಷ ನಾನು ಇಲ್ಲಿಗೆ ಬಂದಾಗ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಕುಮ್ಕಿ ಆನೆ ಹಸ್ತಾಂತರದ ಬಗ್ಗೆ ಚರ್ಚಿಸಲಾಗಿತ್ತು. ಅಂದು ಆಡಿದ ಮಾತಿನಂತೆ ಇಂದು ಕುಮ್ಕಿ ಆನೆಗಳನ್ನು ಕರ್ನಾಟಕ ಹಸ್ತಾಂತರಿಸುತ್ತಿದೆ. ಇದಕ್ಕೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಕನ್ನಡದಲ್ಲೇ ಪವನ್ ಕಲ್ಯಾಣ್ ಧನ್ಯವಾದ ತಿಳಿಸಿದರು.
BREAKING: ತುಮಕೂರಲ್ಲಿ ಧಾರುಣ ಘಟನೆ: ಕೆಮಿಕಲ್ ಸಂಪ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು