ಡೊನಾಲ್ಡ್ ಟ್ರಂಪ್ ಏಷ್ಯಾ ಪ್ರವಾಸ ಮುಂದುವರಿಸಿದ್ದು, ನೊಬೆಲ್ ಶಾಂತಿ ಪ್ರಶಸ್ತಿಗೆ ಅಮೆರಿಕ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡುವ ದೇಶಗಳ ಪಟ್ಟಿಯಲ್ಲಿ ಜಪಾನ್ ಸೇರಲಿದೆ ಎಂದು ಶ್ವೇತಭವನ ತಿಳಿಸಿದೆ.
ಸೋಮವಾರ ಜಪಾನ್ ಭೇಟಿಯನ್ನು ಪ್ರಾರಂಭಿಸಿದ ಟ್ರಂಪ್, ಹೊಸದಾಗಿ ಆಯ್ಕೆಯಾದ ಪ್ರಧಾನಿ ಸನೆ ತಕೈಚಿ ಅವರನ್ನು ಭೇಟಿಯಾದರು. ಶ್ವೇತಭವನ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಉನ್ನತ ಬಹುಮಾನಕ್ಕಾಗಿ ಟ್ರಂಪ್ ಅವರ ನಾಮನಿರ್ದೇಶನವನ್ನು ಬೆಂಬಲಿಸುವುದಾಗಿ ಜಪಾನ್ ಪ್ರಧಾನಿ ಹೇಳಿದ್ದಾರೆ.
ಇದಕ್ಕಾಗಿ ಜಪಾನ್ ನಿಂದ ಅಧಿಕೃತ ಹೇಳಿಕೆಗಾಗಿ ಕಾಯಲಾಗುತ್ತಿದೆ.
ಟೋಕಿಯೊದ ಅಕಾಸಾಕಾ ಅರಮನೆಯಲ್ಲಿ ನಡೆದ ಸಭೆಯಲ್ಲಿ, ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಶಾಂತಿ ಒಪ್ಪಂದಗಳು ಮತ್ತು ಗಾಜಾ ಯುದ್ಧದಲ್ಲಿ ಕದನ ವಿರಾಮಕ್ಕೆ ಟ್ರಂಪ್ ನೀಡಿದ ಕೊಡುಗೆಯನ್ನು ಜಪಾನಿನ ನಾಯಕಿ ಶ್ಲಾಘಿಸಿದರು.
“ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ಕದನ ವಿರಾಮ ಒಪ್ಪಂದವನ್ನು ಪಡೆಯುವಲ್ಲಿ ಅಧ್ಯಕ್ಷರು ಯಶಸ್ವಿಯಾದರು… ಅಲ್ಲದೆ, ಮಧ್ಯಪ್ರಾಚ್ಯದಲ್ಲಿ ನೀವು ಇತ್ತೀಚೆಗೆ ಸಾಧಿಸಿದ ಒಪ್ಪಂದವು ಅಭೂತಪೂರ್ವ, ಐತಿಹಾಸಿಕ ಸಾಧನೆಯಾಗಿದೆ” ಎಂದು ಟಕೈಚಿ ಹೇಳಿದರು








