ಬೆಂಗಳೂರು: ಫೆಬ್ರವರಿ.8ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದ ಮುಂದೆ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ. ಜನರ ಬಳಿಕೆ ಸರ್ಕಾರ ತೆರಳಿ, ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಿದೆ. ಈ ಕಾರ್ಯಕ್ರಮ ಯಶಸ್ವಿಗೊಳಿಸೋದಕ್ಕೆ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ತಪ್ಪದೇ ಕೆಲ ಸೂಚನೆಗಳನ್ನು ಪಾಲಿಸುವಂತೆ ರಾಜ್ಯ ಸರ್ಕಾರ ಖಡಕ್ ಆದೇಶ ಮಾಡಿದೆ.
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವಪ್ರಸಾದ್.ಕೆ.ಹೆಚ್ ಸುತ್ತೋಲೆ ಹೊರಡಿಸಿದ್ದು, ಮುಖ್ಯಮಂತ್ರಿಯವರು ದಿನಾಂಕ 08-02-2024ರಂದು ವಿಧಾನಸೌಧದ ಮುಂಭಾಗದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಸುಸೂತ್ರ ನಿರ್ವಹಣೆಯ ದೃಷ್ಠಿಯಿಂದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಕೆಳಕಂಡ ಸೂಚನೆಗಳನ್ನು ತಪ್ಪದೇ ಪಾಲಿಸುವಂತೆ ತಿಳಿಸಿದ್ದಾರೆ.
ದಿನಾಂಕ 07-02-2024 ಮತ್ತು 08-02-2024ರಂದು ವಿಧಾನಸೌಧ ಪ್ರವೇಶಿಸುವ ಅಧಿಕಾರಿ, ಸಿಬ್ಬಂದಿಗಳು ವಿಧಾನಸೌಧ ಪಶ್ಚಿಮ ದ್ವಾರ ಹಾಗೂ ದಕ್ಷಿಣ ದ್ವಾರದಿಂದ ಮಾತ್ರ ಪ್ರವೇಶಿಸಬೇಕು. ವಾಹನಗಳನ್ನು ವಿಕಾಸಸೌಧದ ತಳಮಹಡಿ-2ರಲ್ಲಿ ಹಾಗೂ ಗೇಟ್ ನಂ.2ರ ಬಳಿಯ ವಾಹನ ನಿಲುಗಡೆ ಸ್ಥಳದಲ್ಲಿ ಮಾತ್ರ ನಿಲುಗಡೆ ಮಾಡಬೇಕು.
ವಿಧಾನಸೌಧ ಪ್ರವೇಶಿಸುವ ಅಧಿಕಾರಿ, ಸಿಬ್ಬಂದಿಗಳು ಗುರುತಿನ ಚೀಟಿಯನ್ನು ಪ್ರದರ್ಶಿಸಬೇಕು ಎಂಬುದಾಗಿ ಖಡಕ್ ಸೂಚನೆ ನೀಡಿದೆ.
BREAKING: JEE ಮೇನ್ಸ್ 2024ರ ‘ಕೀ ಉತ್ತರ’ ಬಿಡುಗಡೆ: ಹೀಗೆ ‘ಡೌನ್ ಲೋಡ್’ ಮಾಡಿ | JEE Mains Answer Key 2024