ಬಳ್ಳಾರಿ: ಈ ಹಿಂದೆ ಭರತ್ ರೆಡ್ಡಿ ತಂದೆ ಶ್ರೀರಾಮುಲು ಕೊಲೆಗೆ ಯತ್ನಿಸಿದ್ರು. ನಾರಾ ಭರತ್ ರೆಡ್ಡಿ ತಂದೆ ಬಳಿ 3 ಕೋಟಿ ಮೌಲ್ಯದ ವೆಪನ್ಸ್ ಸಿಕ್ಕಿತ್ತು. ವಾರ್ಡ್ ಗಳಲ್ಲಿ ಮಟ್ಕಾ, ಡ್ರಗ್ಸ್, ಗಾಂಜಾ ವ್ಯವಹಾರ ನಡೆಸುತ್ತಿದ್ದಾರೆ ಎಂಬುದಾಗಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಶಾಸಕ ಭರತ್ ರೆಡ್ಡಿ ಪೊಲೀಸರ ಬಳಿ ಹಫ್ತಾ ವಸೂಲಿ ಮಾಡ್ತಿದ್ದಾನೆ. ಭರತ್ ರೆಡ್ಡಿ ಮಹರ್ಷಿ ವಾಲ್ಮೀಕಿ ಬ್ಯಾನರ್ ನೆಪ ಇಟ್ಟುಕೊಂಡು ಹೀರೋ ಆಗಬಹುದು ಅಂದುಕೊಂಡಿದ್ದಾನೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಮ್ಮುಖದಲ್ಲಿ ದೂರು ನೀಡುವುದಾಗಿ ಹೇಳಿದ್ದಾರೆ.








