ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪೋಟೋ ವೈರಲ್ ಆಗುತ್ತಿದ್ದಂತೇ, ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಅವರು ಬೆನ್ನು ನೋವಿನಿಂದ ಬಳಲುತ್ತಿದ್ದು, ಅವರಿಗೆ ಸರ್ಜಿಕಲ್ ಚೇರ್ ಅವಶ್ಯಕತೆ ಇದೆ ಎಂಬುದಾಗಿ ಪತ್ನಿ ವೈದ್ಯಕೀಯ ವರದಿ ಸಲ್ಲಿಸಿದ ಕಾರಣ, ಅವರಿಗೆ ಸರ್ಜಿಕಲ್ ಚೇರ್ ನೀಡಲು ಸಮ್ಮತಿ ನೀಡಲಾಗಿದೆ.
ಬಳ್ಳಾರಿ ಜೈಲಿನಲ್ಲಿರುವಂತ ನಟ ದರ್ಶನ್ ಅವರಿಗೆ ಬೆನ್ನು ಮೂಳೆ(ಎಲ್-5) ಸಮಸ್ಯೆಯಿಂದ ಬಳಲುತ್ತಿರುವುದಾಗಿ ಪತ್ನಿ ವಿಜಯಲಕ್ಷ್ಮಿ ಅವರು ಜೈಲು ಅಧಿಕಾರಿಗಳಿಗೆ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಿದ್ದರು. ಅಲ್ಲದೇ ದರ್ಶನ್ ಅವರಿಗೆ ಸರ್ಜಿಕಲ್ ಚೇರ್ ನೀಡುವಂತೆಯೂ ಮನವಿ ಮಾಡಲಾಗಿತ್ತು.
ಈ ಮನವಿಯನ್ನು ಪರಿಶೀಲಿಸಿದಂತ ಜೈಲು ಅಧಿಕಾರಿಗಳು, ವೈದ್ಯರಿಂದ ತಾವು ತಪಾಸಣೆ ನಡೆಸಿದಾಗ ನಟ ದರ್ಶನ್ ಅವರಿಗೆ ಬೆನ್ನು ಮೂಳೆ ಸಮಸ್ಯೆ ಇರುವುದು ಖಚಿತವಾಗಿತ್ತು. ಈ ಹಿನ್ನಲೆಯಲ್ಲಿ ಶೌಟಕ್ಕೆ ಸರ್ಜಿಕಲ್ ಚೇರ್ ಒದಗಿಸುವುದಕ್ಕೆ ಅನುಮತಿ ನೀಡಿದ್ದಾರೆ.
BREAKING : ‘ಮನಿ ಲಾಂಡರಿಂಗ್’ ಕೇಸ್ : ‘ED’ ಯಿಂದ AAP ಶಾಸಕ ‘ಅಮಾನತುಲ್ಲಾ ಖಾನ್’ ಅರೆಸ್ಟ್!
ಸಾರ್ವಜನಿಕರೇ ಗಮನಿಸಿ : `ಆಧಾರ್ ಕಾರ್ಡ್’ ಉಚಿತ ಅಪ್ ಡೇಟ್ ಗೆ ಸೆ.14 ಕೊನೆಯ ದಿನ!