ದಾವಣಗೆರೆ : ಪ್ರಸಕ್ತ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ವಿಶೇಷ ಅಗತ್ಯವುಳ್ಳ ಮಕ್ಕಳ ಸಮನ್ವಯ ಶಿಕ್ಷಣ ಮಧ್ಯವರ್ತನ ಕಾರ್ಯಚಟುವಟಿಕೆಗಳ ಕಾರ್ಯ ಅನುಷ್ಠಾನಕ್ಕಾಗಿ ತೀವ್ರ ನ್ಯೂನತೆ ಹೊಂದಿರುವ ವಿಶೇಷ ಚೇತನ ಮಕ್ಕಳಲ್ಲಿ ಗುರುತಿಸಲ್ಪಟ್ಟಿರುವ ದೈಹಿಕ ನ್ಯೂನತೆ ಮತ್ತು ಬಹುನ್ಯೂನತೆ ಹೊಂದಿರುವ ಮಕ್ಕಳಿಗೆ ಫಿಜಿಯೋಥೆರಪಿ ಮೂಲಕ ನ್ಯೂನತೆಯ ಪ್ರಮಾಣವನ್ನು ತಗ್ಗಿಸುವ ದೃಷ್ಟಿಯಿಂದ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಅಗತ್ಯತೆ ಇರುವ ಮಕ್ಕಳಿಗೆ ಫಿಜಿಯೋಥೆರಪಿ ಸೇವೆ ಒದಗಿಸಲು ಡಿ.ಪಿ.ಟಿ ಅಥವಾ ಬಿ.ಪಿ.ಟಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಫಿಜಿಯೋಥೆರಪಿಸ್ಟ್ ಹುದ್ದೆಗೆ ಕೆಲಸ ಮತ್ತು ಪಾವತಿ ಆಧಾರದ ಮೇಲೆ ಸೇವೆ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜುಲೈ 27 ರೊಳಗಾಗಿ ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಕೆ.ಇ.ಬಿ ಸರ್ಕಲ್, ದಾವಣಗೆರೆ ಇಲ್ಲಿಗೆ ಸಲ್ಲಿಸಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಕೊಟ್ರೇಶ್ ತಿಳಿಸಿದ್ದಾರೆ.
BIG UPDATE: ಬಾಂಗ್ಲಾದೇಶ ವಿಮಾನ ಪತನ: 19 ಮಂದಿ ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ | Bangladesh Plane Crash