ಬೆಂಗಳೂರು: ಬಿಜೆಪಿ ಸೇರುವ ಬಗ್ಗೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, “ಈ ಹಿಂದೆ ಪಕ್ಷ ನನಗೆ ಸಾಕಷ್ಟು ಜವಾಬ್ದಾರಿಗಳನ್ನು ನೀಡಿತ್ತು. ಕೆಲವು ಸಮಸ್ಯೆಗಳಿಂದಾಗಿ ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದೆ. ಕಳೆದ 8-9 ತಿಂಗಳುಗಳಲ್ಲಿ, ಸಾಕಷ್ಟು ಚರ್ಚೆಗಳು ನಡೆದವು, ಬಿಜೆಪಿ ಕಾರ್ಯಕರ್ತರು ನನ್ನನ್ನು ಬಿಜೆಪಿಗೆ ಮರಳುವಂತೆ ಕೇಳಿಕೊಂಡರು. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೂ ನಾನು ಬಿಜೆಪಿಗೆ ಮರಳಬೇಕೆಂದು ಬಯಸಿದ್ದರು. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬ ನಂಬಿಕೆಯೊಂದಿಗೆ ನಾನು ಮತ್ತೆ ಪಕ್ಷಕ್ಕೆ ಸೇರುತ್ತಿದ್ದೇನೆ” ಎಂದು ಹೇಳಿದರು.
ಈ ನಡುವೆ ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ ನಾವು ಸೀನಿಯರ್ ಲೀಡರ್ ಅಂಥ ಅವರಿಗೆ ಸ್ಥಾನ ಮಾನ ಕೊಟ್ವಿದ್ವಿ, ನಾವು ಅವರಿಗೆ ಟಿಕೆಟ್ ಕೊಟ್ಟಿದ್ವಿ ಆದರೆ ಅವರು ಸೋತರು. ನಾವು ಅವರನ್ನು ಬಹಳ ಗೌರವದಿಂದ ನಡೆಸಿಕೊಂಡಿದ್ದೇವೆ. ಈ ನಡುವೆ ನನಗೆ ಇಲ್ಲಿ ತನಕ ರಾಜೀನಾಮೆ ಪತ್ರ ತಲುಪಿಲ್ಲ ಅಂತ ಹೇಳಿದ್ದಾರೆ.