ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಜನವರಿ 25ರಂದು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 2023 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಟಿಕೆಟ್ ನಿರಾಕರಿಸಿದ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಸೋಲುಕಂಡಿದ್ದರು,
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಗದೀಶ್ ಶೆಟ್ಟರ್ ಸ್ಪರ್ಧಿಸಿದ್ದರು. ಶೆಟ್ಟರು ಸೋಲನ್ನು ಅನುಭವಿಸಿದರು. ಬಿಜೆಪಿಯ ಮಹೇಶ್ ಟೆಂಗಿನಕಾಯಿ ವಿರುದ್ಧ 34,000 ಕ್ಕೂ ಹೆಚ್ಚು ಮತಗಳಿಂದ ಸೋಲನುಭವಿಸಿದ ನಂತರ ಬಳಿಕ ಅವರನ್ನು ಕಾಂಗ್ರೆಸ್ ಎಂಎಲ್‌ಸಿ ಸ್ಥಾನ ನೀಡಲಾಗಿತ್ತು. ಈ ನಡುವೆ ಗುರುವಾರ ಮಧ್ಯಾಹ್ನ ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿದ ಅವರನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಕೆಲವು ಸಮಸ್ಯೆಗಳಿಂದಾಗಿ ನಾನು ಕಾಂಗ್ರೆಸ್ ಪಕ್ಷಕ್ಕೆ ಹೋದೆ. ಕಳೆದ 8-9 ತಿಂಗಳುಗಳಲ್ಲಿ ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಕರ್ನಾಟಕ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ನನ್ನನ್ನು ಬಿಜೆಪಿಗೆ ಮರಳುವಂತೆ ಕೇಳಿಕೊಂಡರು. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೂ ನಾನು ಬಿಜೆಪಿಗೆ ಮರಳಬೇಕೆಂದು ಬಯಸಿದ್ದರು. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬ ನಂಬಿಕೆಯೊಂದಿಗೆ ನಾನು ಮತ್ತೆ ಪಕ್ಷಕ್ಕೆ ಸೇರುತ್ತಿದ್ದೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ ಅಂತ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ರಾಜೀನಾಮೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು. ನನಗೆ 11:45ಕ್ಕೆ ಜಗದೀಶ್ ಶೆಟ್ಟರ್ ಕಾಲ್ ಮಾಡಿದ್ದರು. ನಾನು ಬಿಜೆಪಿಗೆ ಹೋಗ್ತಿದ್ದೀನಿ ರಾಜಿನಾಮೇ ಕೊಡುತ್ತೇನೆ ಎಂದು ಹೇಳಿದರು. ಆದರೆ, ಶೆಟ್ಟರ್ ಅವರು ರಾಜೀನಾಮೆ ಪತ್ರವನ್ನು ಮೇಲ್ ಮಾಡ್ತಿನಿ ಎಂದಿದ್ದರು, ನನಗೆ ಇನ್ನೂ ನನಗೆ ಮೇಲ್ ಬಂದಿಲ್ಲ. ಮೇಲ್ ಬಂದರೂ ಸಹ ಅದು ಮಾಹಿತಿ ಅದನ್ನು ಗಣನೆ ತೆಗೆದುಕೊಳ್ಳಲು ಆಗೋದಿಲ್ಲ. ಯಾವುದೇ ಸದಸ್ಯ ನೇರವಾಗಿ ಬಂದು ರಾಜೀನಾಮೆ ಕೊಡಬೇಕು ಎಂದು ಹೊರಟ್ಟಿ ಹೇಳಿದ್ದಾರೆ. ಇನ್ನೂ ಜಗದೀಶ್ ಶೆಟ್ಟರ್ ಅವರು ಈಗಲೂ ಕಾಂಗ್ರೆಸ್ ಸದಸ್ಯರು. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆದರೂ ಆಗಬಹುದು ಎಂದು ಸಭಾಪತಿಗಳು ತಿಳಿಸಿದ್ದಾರೆ.