ಶಿವಮೊಗ್ಗ: ಅಡಿಕೆಯಿಂದ ಕ್ಯಾನ್ಸರ್ ಬರುತ್ತೆ ಎಂಬುದು ಭ್ರಾಂತಿ ಮಾತ್ರವೇ ಆಗಿದೆ. ಇದನ್ನು ತೊಡೆದು ಹಾಕಲು ಐಐಎಸ್ಸಿ, ಏಮ್ಸ್, ಸಿಸಿಎಂಬಿಯಂತಹ ರಾಷ್ಟ್ರೀಯ ಮಟ್ಟದ 17 ಸಂಶೋಧನಾ ಸಂಸ್ಥೆಗಳಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ. ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬುದನ್ನು ಸಂಶೋಧಿಸಿ, ಅದರ ಸತ್ಯಾಸತ್ಯತೆಯ ವರದಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸುವುದಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಇಂದು ಸಾಗರದಲ್ಲಿ ನಡೆದಂತ ಪ್ರಾಂತ ಅಡಿಕೆ ಬೆಳಗಾರರ ಸಂಘದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ಅಡಿಕೆ ಕ್ಯಾನ್ಸರ್ ಕಾರಕ ಎಂಬ ವಿಶ್ವಸಂಸ್ಥೆಯ ವರದಿ ಆಶ್ಚರ್ಯ ಮೂಡಿಸಿದೆ. ಅದರ ಸತ್ಯಾಸತ್ಯತೆ ಸಂಶೋಧನೆ ನಡೆಸಿ, ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸುವಂತೆ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಫಲದಲ್ಲಿ ವಿಷ ಸೇರಿಸಿ( ಗುಟ್ಕಾ) ತಿಂದಲ್ಲಿ ಅಡಿಕೆಯದ್ದು ಏನು ದೋಷ ಎಂಬುದಾಗಿ ಪ್ರಶ್ನಿಸಿದರು.
ಅಡಿಕೆಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗ, ಹಳದಿ ರೋಗ ಹಾಗೂ ಕೊಳೆ ರೋಗಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಷ್ಟ್ರಮಟ್ಟದಲ್ಲಿ ವಿಜ್ಞಾನಿಗಳ ಸಮಿತಿ ರಚಿಸಲಾಗಿದೆ. ಸಮಿತಿಯ ಶಿಫಾರಸುಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರೂ.67 ಕೋಟಿ ತೆಗೆದಿಡಲಾಗುವುದು. ವೈರಸ್ ಬಾಧಿಸದ ಅಡಿಕೆ ತಳಿಯ ಸಂಶೋಧನೆಯೂ ಪ್ರಗತಿಯಲ್ಲಿದೆ ಎಂದರು.
ಅಡಿಕೆ ಆಮದು ತಡೆಯಲು ಈ ಹಿಂದೆ ಕೆಜಿಗೆ ರೂ.251 ಇದ್ದ ಆಮದು ಶುಲ್ಕವನ್ನು ನರೇಂದ್ರ ಮೋದಿ ಸರ್ಕಾರ ರೂ.351ಕ್ಕೆ ಹೆಚ್ಚಳಗೊಳಿಸಿದೆ. ಅಗತ್ಯಬಿದ್ದರೆ ಅದನ್ನು ಇನ್ನೂ ಹೆಚ್ಚಳಗೊಳಿಸಲಾಗುವುದು ಎಂದು ಹೇಳಿದರು.
BREAKING: ಬೆಂಗಳೂರಲ್ಲಿ ಕಾಲೇಜಿನ ಕಟ್ಟಡದಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ