ಬೆಂಗಳೂರು: ಭಾರತದ ಪ್ರಮುಖ ಅಗರಬತ್ತಿ ಬ್ರಾಂಡ್‌ಗಳಲ್ಲಿ ಒಂದಾದ ITC ಮಂಗಲ್‌ದೀಪ್ ತನ್ನ ಇತ್ತೀಚಿನ ಶ್ರೇಣಿಯ ಅಗರಬತ್ತಿ, ಮಂಗಲ್‌ದೀಪ್ ಫ್ಯೂಷನ್ ಅನ್ನು ಪ್ರಾರಂಭಿಸಿದೆ.
ಈ ಹೊಸ ಕೊಡುಗೆಯು ಕ್ಲಾಸಿಕ್ ಮತ್ತು ಆಧುನಿಕ ಸುಗಂಧಗಳ ನವೀನ ಮಿಶ್ರಣವಾಗಿದ್ದು, ಗ್ರಾಹಕರ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಮಂಗಲ್‌ದೀಪ್ ಅಗರಬತ್ತಿಯು ಆಧುನಿಕತೆಯಲ್ಲಿಯೂ, ಆಧ್ಯಾತ್ಮಿಕತೆ ಅಭ್ಯಾಸವನ್ನು ಇನ್ನಷ್ಟು ಆಸಕ್ತಿದಾಯ ಹಾಗೂ ಜನರ ನಂಬಿಕೆಗಳಲ್ಲಿ ಸಾಮರಸ್ಯ ಬೆಸೆಯುವಂತೆ ವಿನ್ಯಾಸಗೊಳಿಸಲಾಗಿದೆ. ಈ ನವೀನ ಉತ್ಪನ್ನವು ನೈಸರ್ಗಿಕ ಪದಾರ್ಥ ಹಾಗೂ ಸುಗಂಧಭರಿತ ಪರಿಮಳವನ್ನು ಹೊಂದಿರುವ ಅಗರಬತ್ತಿಯ ಅನುಭವ ನೀಡಲಿದೆ.
ಫ್ಯೂಷನ್‌ನ ಪ್ರತಿಯೊಂದು ಪ್ಯಾಕ್ ಮೂರು ವಿಧದ ಸ್ಟಿಕ್‌ಗಳನ್ನು ಹೊಂದಿರುತ್ತದೆ, ಪ್ರತಿ ಪ್ಯಾಕ್‌ಗೆ ಒಂದು ಸಾಂಪ್ರದಾಯಿಕ ಮತ್ತು ಒಂದು ಆಧುನಿಕ ಪರಿಮಳವನ್ನು ಅನನ್ಯವಾಗಿ ಸಂಯೋಜಿಸುತ್ತದೆ. ಪ್ರತಿ ಇದ್ದಿಲು ರಹಿತ ಅಗರಬತ್ತಿಯು ಅದರ ವಿಶಿಷ್ಟವಾದ ಸುಗಂಧ ಸಂಯೋಜನೆಗಳೊಂದಿಗೆ ದೈನಂದಿನ ಪ್ರಾರ್ಥನೆಗಳಿಗೆ ಉಲ್ಲಾಸಕರ ತಿರುವನ್ನು ತರುತ್ತದೆ, ಉದಾಹರಣೆಗೆ ಈ ನೂತನ ಅಗರಬತ್ತಿಯು ವೆಟಿವರ್‌ನ ಮಣ್ಣಿನ ಪರಿಮಳದೊಂದಿಗೆ ಬೆಸೆಯಲಾದ ಸುಗಂಧಬರಿತ ಶ್ರೀಗಂಧದ ಪರಿಮಳ ಹೊಂದಿದೆ, ನಮ್ಮ ಮಣ್ಣಿನ ಲ್ಯಾವೆಂಡರ್‌ನ ಸುವಾಸೆ ಹೊಂದಿದೆ. ಇದು ಔಧ್‌ನ ಆಳವಾದ, ಐಷಾರಾಮಿ ಅರೇಬಿಯನ್ ಸುಗಂಧದೊಂದಿಗೆ ಸಾಂಬ್ರಾಣಿಯನ್ನು ಸಾಮರಸ್ಯದಿಂದ ಸಂಯೋಜಿಸಲ್ಪಟ್ಟಿದ್ದು ಎಂಥವರು ಈ ಸುಗಂಧಭರಿತ ಅಗರಬತ್ತಿಗೆ ಮನಸೋಲದೇ ಇರಲಾರರು.
ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಐಟಿಸಿ ಲಿಮಿಟೆಡ್‌ನ ಅಗರಬತ್ತಿ ವ್ಯಾಪಾರ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಗೌರವ್ ತಯಾಲ್, “ಮಂಗಲ್‌ದೀಪ್ ಫ್ಯೂಷನ್ ಅನ್ನು ಪ್ರಾರಂಭಿಸಲು ನಾವು ಸಂತೋಷಪಡುತ್ತೇವೆ, ಇದು ಸಂಪ್ರದಾಯವನ್ನು ಬಲಪಡಿಸುವ ಜೊತೆಗೆ ನಾವೀನ್ಯತೆಯಲ್ಲಿ ನಮ್ಮ ಶಕ್ತಿಯನ್ನು ನಿಜವಾಗಿಯೂ ಸಾಕಾರಗೊಳಿಸುತ್ತದೆ. ಮಂಗಲ್‌ದೀಪದಲ್ಲಿ ನಾವು ಈ ನವೀನ ಬಿಡುಗಡೆಯ ಬಗ್ಗೆ ಉತ್ಸುಕರಾಗಿದ್ದೇವೆ. ಗ್ರಾಹಕರು ಮತ್ತು ನಮ್ಮ ವಿತರಕರು, ಸರಕು ಮತ್ತು ಸಗಟು ವ್ಯಾಪಾರಿಗಳಿಂದ ನಾವು ನೋಡಿರುವ ಉತ್ಸಾಹವು ಅಗಾಧವಾಗಿದೆ. ಈ ಹೊಸ ಶ್ರೇಣಿಯು ಕೇವಲ ಉತ್ಪನ್ನದ ಬಿಡುಗಡೆಯಲ್ಲ, ಇದು ನಮ್ಮ ಭಕ್ತಿಯ ಆಧುನಿಕ ವ್ಯಾಖ್ಯಾನವಾಗಿದೆ, ಸಮಕಾಲೀನ ಸುಗಂಧಗಳೊಂದಿಗೆ ಉತ್ತಮವಾದ ಸಾಂಪ್ರದಾಯಿಕ ಪದಾರ್ಥಗಳನ್ನು ಮಿಶ್ರಣ ಮಾಡುತ್ತದೆ.”
ಮಂಗಲ್‌ದೀಪ್ ಫ್ಯೂಷನ್‌ನ ನವೀನ ಪರಿಮಳ ಸಂಯೋಜನೆಗಳು ಆಧುನಿಕ ಭಾರತದ ವಿಕಾಸದ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತವೆ. ಕಿರಿಯ ಗ್ರಾಹಕರಿಗಾಗಿ ಆವಿಷ್ಕರಿಸಲಾಗಿದೆ, ಈ ಸುಗಂಧವು ಜೀವನಶೈಲಿ, ಫ್ಯಾಷನ್, ಸಂಗೀತ ಮತ್ತು ಕಲೆಯಲ್ಲಿ ಸಮಕಾಲೀನ ಸಾಂಸ್ಕೃತಿಕ ಸಮ್ಮಿಳನದ ಸಾರವನ್ನು ಸೆರೆಹಿಡಿಯುತ್ತದೆ, ಸಾಂಪ್ರದಾಯಿಕ ಪರಿಮಳಗಳ ಮೇಲೆ ಆಧುನಿಕ ತಿರುವನ್ನು ನೀಡುತ್ತದೆ.
ಮಂಗಲ್‌ದೀಪ್ ಫ್ಯೂಷನ್ ಪ್ಯಾನ್ ಇಂಡಿಯನ್ ರಿಟೇಲ್ ಸ್ಟೋರ್‌ಗಳು, ಸೂಪರ್‌ಮಾರ್ಕೆಟ್‌ಗಳು ಮತ್ತು ಜನಪ್ರಿಯ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ ಮತ್ತು ಶೀಘ್ರದಲ್ಲೇ ಇ-ಕಾಮರ್ಸ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ.