ನವದೆಹಲಿ: ಇನ್ಮುಂದೆ ಪಾನ್ ಮಸಾಲಾ ಪ್ಯಾಕ್ ಗಳ ಮೇಲೆ ಕಡ್ಡಾಯವಾಗಿ ಚಿಲ್ಲರೆ ಮಾರಾಟ ಬೆಲೆ ( Retail Selling Price-RSP) ಹಾಕುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಇನ್ಮುಂದೆ ಪಾನ್ ಮಸಾಲಾ ಪ್ಯಾಕ್ ಗಳ ಮೇಲೆ ಕಡ್ಡಾಯವಾಗಿ ಚಿಲ್ಲರೆ ಮಾರಾಟ ಬೆಲೆ ಹಾಕುವಂತೆ ಆದೇಶ ಹೊರಡಿಸಿದೆ.
ಫೆಬ್ರವರಿ.1, 2026ರಿಂದ ಜಾರಿಗೆ ಹರುವಂತೆ ಪಾನ್ ಮಸಾಲಾ ಪ್ಯಾಕೇಟ್ ಮೇಲೆ ಚಿಲ್ಲರೆ ಮಾರಾಟ ಬೆಲೆ ಹಾಕುವ ಹೊಸ ಆದೇಶ ಅನ್ವಯ ಆಗಲಿದೆ ಎಂಬುದಾಗಿ ತಿಳಿಸಿದೆ.
ಗ್ರಾಹಕರಿಗೆ ಪಾರದರ್ಶಕತೆ ಹೆಚ್ಚಿಸಲು ಕೇಂದ್ರ ಸರ್ಕಾರ ಈ ಹೊಸ ಆದೇಶ ಹೊರಡಿಸಿದೆ. ಎಲ್ಲಾ ಗಾತ್ರದ ಪ್ಯಾಕ್ ಮೇಲೂ ಚಿಲ್ಲರೆ ಮಾರಾಟ ಬೆಲೆ ಹಾಕುವುದು ಕಡ್ಡಾಯವಾಗಿದೆ. ಕಾನೂನು ಮಾಪನಶಾಸ್ತ್ರ ತಿದ್ದುಪಡಿ ಅಡಿಯಲ್ಲಿ ಕೇಂದ್ರ ಸರ್ಕಾರ ಆದೇಶ ಮಾಡಿದೆ.
ಸಾಗರ ಅರಣ್ಯಾಧಿಕಾರಿಗಳ ಮಿಂಚಿನ ಕಾರ್ಯಾಚರಣೆ: ಶ್ರೀಗಂಧದ ಮರ ಕಡಿತಲೆ ಮಾಡಿದ ಆರೋಪಿ ಅರೆಸ್ಟ್








