Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಸ್ಲೀಪ್ ಡಿವೋರ್ಸ್’: ಉತ್ತಮ ಆರೋಗ್ಯಕ್ಕಾಗಿ ಪ್ರತ್ಯೇಕವಾಗಿ ಮಲಗಲು ಮುಂದಾಗುತ್ತಿರುವ ದಂಪತಿಗಳು!

21/03/2026 9:53 PM

ಬಹಾಮಾಸ್ ಬಳಿಯ ‘ಶಾರ್ಕ್’ಗಳಲ್ಲಿ ಕೊಕೇನ್ ಮತ್ತು ಕೆಫೀನ್ ಅಂಶ ಕಂಡುಬಂದಿದೆ ; ಅಧ್ಯಯನ

21/03/2026 9:53 PM

ಭಾವನಾತ್ಮಕವಾಗಿ ‘ಅಪಕ್ವ ಪೋಷಕ’ರನ್ನು ನಿಭಾಯಿಸುವುದು ಹೇಗೆ? ಮನಶ್ಶಾಸ್ತ್ರಜ್ಞರು ನೀಡಿದ 3 ಸೂತ್ರಗಳಿವು

21/03/2026 9:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈತರು ಸರ್ಕಾರದ ವಿರುದ್ಧ ಮಾತನಾಡುವ ಶಕ್ತಿ ನೀಡಿದ್ದು ದಿ.ಪ್ರೋ.ನಂಜುಂಡಸ್ವಾಮಿ- ನ.ಲಿ.ಕೃಷ್ಣ
KARNATAKA

ರೈತರು ಸರ್ಕಾರದ ವಿರುದ್ಧ ಮಾತನಾಡುವ ಶಕ್ತಿ ನೀಡಿದ್ದು ದಿ.ಪ್ರೋ.ನಂಜುಂಡಸ್ವಾಮಿ- ನ.ಲಿ.ಕೃಷ್ಣ

By kannadanewsnow0913/02/2025 8:38 PM

ಮಂಡ್ಯ : ರೈತರು ತಮ್ಮ ಪಾಲಿನ ಹಕ್ಕಗಳನ್ನು ಪಡೆದು ಕೊಳ್ಳಲು ಅವರಿಗೆ ಶಕ್ತಿ ತುಂಬುತ್ತಾ, ಜೀವಿತಾವಧಿವರೆಗೂ ರೈತರ ಅಭಿವೃದ್ಧಿಗಾಗಿ ಹೋರಾಟ ಮಾಡಿದ ಧೀಮಂತ ರೈತನಾಯಕ ದಿ.ಪ್ರೊ.ನಂಜುಂಡಸ್ವಾಮಿ ಅವರು ಎಂದು ರೈತ ಚೈತನ್ಯ ಕೇಂದ್ರದ ಅಧ್ಯಕ್ಷ ನ.ಲಿ.ಕೃಷ್ಣ ಹೇಳಿದರು.

ಮದ್ದೂರು ಪಟ್ಟಣದ ತಾಲೂಕು ರೈತ ಸಂಘ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ಕನ್ನಡ ಸಾಹಿತ್ಯ ಪರಿಷತ್, ಸಂವಿಧಾನ ಸಂರಕ್ಷಣಾ ಸಮಿತಿ, ದಲಿತ ಸಂಘರ್ಷ ಸಮಿತಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೊ.ನಂಜುಂಡಸ್ವಾಮಿ ಅವರ ಜನ್ಮ ದಿನಾಚರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತೋತ್ಸವ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯವರನ್ನು ಹೇಗೆ ನೆನಪಿಸಿಕೊಳ್ಳುತ್ತೇವೆೆಯೋ ಆದೇ ರೀತಿ ಅವಿದ್ಯಾವಂತ ರೈತ ಸಮುದಾಯದಲ್ಲಿ ಕಾನೂನು ಅರಿವುಮೂಡಿಸಿ ತಮ್ಮ ಶಾಸನ ಬದ್ಧ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ರೈತ ಸಂಘದ ಮೂಲಕ ಹೋರಾಟದ ಕಿಚ್ಚುಹೊತ್ತಿಸಿದ ಮಹಾನ್ ನಾಯಕ ಪ್ರೊ.ನಂಜುಂಡಸ್ವಾಮಿ ಅವರನ್ನು ಪ್ರತಿಯೊಬ್ಬ ರೈತರು ನೆನಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ರೈತರು ಸಾಲಗಾರರಲ್ಲ ಸರ್ಕಾರವೇ ಬಾಕೀದಾರ ಎಂಬ ಉದ್ಘೋಷದೊಂದಿಗೆ ರೈತರಿಗೆ ಸರ್ಕಾರದ ವಿರುದ್ಧ ಎದೆಯುಬ್ಬಿಸಿ ಮಾತನಾಡಲು ಕಲಿಸಿದ ವಿಶ್ವ ನಾಯಕ ನಂಜುಂಡಸ್ವಾಮಿ ಅವರು, ಸರಕಾರಗಳಿಂದ ರೈತರಿಗೆ ಅನ್ಯಾಯವಾದಾಗ ನ್ಯಾಯ ಸಿಗುವವರೆಗೂ ಒಂದಲ್ಲ ಒಂದು ರೀತಿಯ ಹೋರಾಟ ರೂಪಿಸುತ್ತಿದ್ದರು. ಜೀವನದುದ್ದಕ್ಕೂ ಚಳವಳಿಗಳನ್ನು ನಡೆಸಿ ಕೊಂಡು ಬಂದ ಅವರ ತತ್ತ್ವ, ಆದರ್ಶಗಳನ್ನು ಪ್ರತಿಯೊಬ್ಬ ರೈತರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರೊ.ನಂಜುಂಡಸ್ವಾಮಿ ಅವರು ಸ್ವಾರ್ಥಕ್ಕಾಗಿ ಎಂದು ಹೋರಾಟ ಮಾಡಿದವರಲ್ಲ. ಸರ್ಕಾರ ರೈತರ ವಿರುದ್ಧ ಕಾಯಿದೆಗಳನ್ನು ತಂದಾಗ ಚಳವಳಿಗಳನ್ನು ರೂಪಿಸಿ ಸೌಲಭ್ಯಗಳನ್ನು ದೊರಕಿಸಿ ಕೊಡುತ್ತಿದ್ದರು. ಆದರೆ, ಅಂಥ ಮಹಾನ್ ಚೇತನ ನಮ್ಮ ಕಣ್ಣಮುಂದೆ ಇಲ್ಲದಿದ್ದರು, ಅವರ ಆದರ್ಶಗಳನ್ನು ಅಳವಡಿಸಿಕೊಂಡು ರೈತರಿಗೆ ಅನ್ಯಾಯವಾದಾಗ ರೈತ ಸಮುದಾಯ ಹೋರಾಟ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಬೇಕೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಹೇಳಿದರು.

ಇದೇ ವೇಳೆ ತಾಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶಾಲಾ ಮಕ್ಕಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

BBMP ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಬೊಮ್ಮನಹಳ್ಳಿ ವಲಯದಲ್ಲಿ 21.68 ಗುಂಟೆ ಒತ್ತುವರಿ ತೆರವು

BIG NEWS: ಸೊರಬದ ಕಂತನಹಳ್ಳಿಯಲ್ಲಿ ಮರಗಳ ಮಾರಣಹೋಮ: ತನಿಖಾ ವರದಿ ಸಿದ್ಧ, ತಪ್ಪಿತಸ್ಥರ ವಿರುದ್ಧ ಕ್ರಮ ಫಿಕ್ಸ್

Share. Facebook Twitter LinkedIn WhatsApp Email

Related Posts

ಇದು ‘ಕೆಎನ್ಎನ್ ಸುದ್ದಿ’ ಫಲಶೃತಿ: ಚಾಮರಾಜನಗರದಲ್ಲಿ ವಿವಾದಕ್ಕೆ ಕಾರಣವಾಗಿದ್ದ ‘ಫ್ಲೆಕ್ಸ್’ ತೆರವು

21/03/2026 9:16 PM1 Min Read

ಮಂಡ್ಯದಲ್ಲಿ ‘IPS ಅಧಿಕಾರಿ’ಯ ‘ಫ್ಲೆಕ್ಸ್’ ಹವಾ: ರಾಜಕಾರಣಿಗಳನ್ನೇ ಮೀರಿಸಿದ ‘ಎಸ್ಪಿ ಶೋಭರಾಣಿ’!

21/03/2026 7:49 PM2 Mins Read

ಸಾಗರದ ಮಣ್ಣಿನ ಸೌಹಾರ್ದದ ಕಂಪನ್ನು ಹೆಚ್ಚಿಸಿದ ರಂಜಾನ್: ಮಾಜಿ ಸದಸ್ಯ ಜಾಕಿರ್ ನಿವಾಸಕ್ಕೆ ಶಾಸಕ ಬೇಳೂರು ಭೇಟಿ

21/03/2026 7:40 PM2 Mins Read
Recent News

‘ಸ್ಲೀಪ್ ಡಿವೋರ್ಸ್’: ಉತ್ತಮ ಆರೋಗ್ಯಕ್ಕಾಗಿ ಪ್ರತ್ಯೇಕವಾಗಿ ಮಲಗಲು ಮುಂದಾಗುತ್ತಿರುವ ದಂಪತಿಗಳು!

21/03/2026 9:53 PM

ಬಹಾಮಾಸ್ ಬಳಿಯ ‘ಶಾರ್ಕ್’ಗಳಲ್ಲಿ ಕೊಕೇನ್ ಮತ್ತು ಕೆಫೀನ್ ಅಂಶ ಕಂಡುಬಂದಿದೆ ; ಅಧ್ಯಯನ

21/03/2026 9:53 PM

ಭಾವನಾತ್ಮಕವಾಗಿ ‘ಅಪಕ್ವ ಪೋಷಕ’ರನ್ನು ನಿಭಾಯಿಸುವುದು ಹೇಗೆ? ಮನಶ್ಶಾಸ್ತ್ರಜ್ಞರು ನೀಡಿದ 3 ಸೂತ್ರಗಳಿವು

21/03/2026 9:49 PM

ಡೇಟಿಂಗ್ ಲೋಕದ ಹೊಸ ವಿಲನ್ ‘ಘೋಸ್ಟ್‌ಲೈಟಿಂಗ್’: ಇದು ‘ಘೋಸ್ಟಿಂಗ್‌’ಗಿಂತಲೂ ಹೆಚ್ಚು ಅಪಾಯಕಾರಿ ಏಕೆ?

21/03/2026 9:46 PM
State News
KARNATAKA

ಇದು ‘ಕೆಎನ್ಎನ್ ಸುದ್ದಿ’ ಫಲಶೃತಿ: ಚಾಮರಾಜನಗರದಲ್ಲಿ ವಿವಾದಕ್ಕೆ ಕಾರಣವಾಗಿದ್ದ ‘ಫ್ಲೆಕ್ಸ್’ ತೆರವು

By kannadanewsnow0921/03/2026 9:16 PM KARNATAKA 1 Min Read

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ, ಚಾಮರಾಜನಗರ ಚಾಮರಾಜನಗರ: ಮಂಡ್ಯ ಜಿಲ್ಲೆಯಲ್ಲಿ ಎಸ್ಪಿಯವರ ಫ್ಲೆಕ್ಸ್ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಚಾಮರಾಜನಗರದಲ್ಲೂ ಅಂತಹದ್ದೇ ಘಟನೆ…

ಮಂಡ್ಯದಲ್ಲಿ ‘IPS ಅಧಿಕಾರಿ’ಯ ‘ಫ್ಲೆಕ್ಸ್’ ಹವಾ: ರಾಜಕಾರಣಿಗಳನ್ನೇ ಮೀರಿಸಿದ ‘ಎಸ್ಪಿ ಶೋಭರಾಣಿ’!

21/03/2026 7:49 PM

ಸಾಗರದ ಮಣ್ಣಿನ ಸೌಹಾರ್ದದ ಕಂಪನ್ನು ಹೆಚ್ಚಿಸಿದ ರಂಜಾನ್: ಮಾಜಿ ಸದಸ್ಯ ಜಾಕಿರ್ ನಿವಾಸಕ್ಕೆ ಶಾಸಕ ಬೇಳೂರು ಭೇಟಿ

21/03/2026 7:40 PM

ಚಾಮರಾಜನಗರ: ಪ್ಲೆಕ್ಸ್ ಗಳಲ್ಲಿ ಪ್ರಚಾರಕ್ಕಿಳಿದ್ರಾ ಜಿಲ್ಲಾ ಮಟ್ಟದ ಅಧಿಕಾರಿಗಳು.!?

21/03/2026 7:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.