ಚಿಕ್ಕಮಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಬಗ್ಗೆ ಎನ್ಐಎಯಿಂದ ತನಿಖೆ ತೀವ್ರಗೊಂಡಿದೆ. ಈ ಬೆನ್ನಲ್ಲೇ ಶಾಕಿಂಗ್ ನ್ಯೂಸ್ ಎನ್ನುವ ಮಾಹಿತಿಯೊಂದು ಹೊರ ಬಿದ್ದಿದೆ. ಅದೇ ಕೆಫೆ ಬಾಂಬ್ ಸಂಚುಕೋರನ ತಾಯಿಗೆ ಮನೆ ಕೊಡಿಸಿದ್ದೇ ಚಿಕ್ಕಮಗಳೂರು ಸಿಪಿಐ ಎಂಬುದಾಗಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಪ್ರಮುಖ ಸಂಚುಕೋರ ಮುಜಮಿಲ್ ಶರೀಫ್ ಮೂಲತಹ ಚಿಕ್ಕಮಗಳೂರು ಜಿಲ್ಲೆಯ ಕಳಸದವನಾಗಿದ್ದಾನೆ. ಮುಜಮಿಲ್ ತನ್ನ ತಾಯಿಯನ್ನು ಚಿಕ್ಕಮಗಳೂರಿಗೆ ಕರೆತಂದು ಬಾಡಿಗೆ ಮನೆಯಲ್ಲಿರಿಸಲು ಸಹಾಯ ಮಾಡಿದ್ದು, ಇಲ್ಲಿನ ಪೊಲೀಸ್ ಇನ್ಸ್ ಪೆಕ್ಟರ್ ಎಂದು ಹೇಳಲಾಗುತ್ತಿದೆ.
ದುಬೈ ನಗರದಲ್ಲಿ ಮುಜಮಿಲ್ ಗೆ ಇನ್ಸ್ ಸ್ಪೆಕ್ಟರ್ ಬಾಡಿಗೆ ಮನೆ ಹುಡುಕಿಕೊಟ್ಟಿದ್ದರು. ಆ ಮನೆಯಲ್ಲಿ ಮುಜಮಿಲ್ ನ ತಾಯಿ ವಾಸವಾಗಿದ್ದರು. ಹೀಗಾಗಿ ಮುಜಮಿಲ್ ಗೂ ಸಿಪಿಐಗೂ ಆತ್ಮೀಯತೆ ಇತ್ತಾ ಎಂಬ ಸಂಶಯ ಹುಟ್ಟಿಕೊಂಡಿದೆ. ಇದೇ ಕಾರಣಕ್ಕೆ ಸಿಪಿಐಗೆ ಎನ್ಐಎ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
‘ಟರ್ಕಿ ಸ್ಥಳೀಯ ಚುನಾವಣೆ’ಯಲ್ಲಿ ‘ಅಧ್ಯಕ್ಷ ಎರ್ಡೊಗನ್’ಗೆ ಮುಖಭಂಗ: ‘ಪ್ರತಿಪಕ್ಷ’ಗಳು ಭರ್ಜರಿ ಗೆಲುವು
ತಿಂಗಳ ಮೊದಲ ದಿನವೇ `ಗ್ರಾಹಕರಿಗೆ ಗುಡ್ ನ್ಯೂಸ್’ : ‘LPG’ ವಾಣಿಜ್ಯ ಸಿಲಿಂಡರ್ ಬೆಲೆ 32 ರೂ. ಇಳಿಕೆ