ಬೆಂಗಳೂರು: ಅಸ್ಥಿರ ಸರ್ಕಾರದ ಜೊತೆಗೆ ಕೆಟ್ಟ ಆಡಳಿತವನ್ಬು ನೀಡಿ, ಜನರಿಂದ ಛೀಮಾರಿ ಹಾರಿಸಿಕೊಂಡ ಬಿಜೆಪಿ ಪಕ್ಷದವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ವಿಷಯಕ್ಕೆ ತಲೆ ಕೆಡಿಸಿಕೊಂಡಿರುವುದು ಹಾಸ್ಯಾಸ್ಪದ ಬೆಳವಣಿಗೆಯಾಗಿದೆ ಎಂಬುದಾಗಿ ಸಚಿವ ಹೆಚ್.ಸಿ ಮಹದೇವಪ್ಪ ಕಿಡಿಕಾರಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಜನಾದೇಶ ಪಡೆಯದೇ ಆಪರೇಷನ್ ಕಮಲದ ಮೂಲಕ ಸರ್ಕಾರ ರಚಿಸಿ, ಕೊನೆಗೆ ರಚಿಸಿದ ಸರ್ಕಾರದಲ್ಲಿ ನಾಲ್ಕೈದು ಮಂದಿ ಮುಖ್ಯಮಂತ್ರಿಗಳನ್ನು ಬದಲಿಸಿ, ಅಸ್ಥಿರ ಸರ್ಕಾರದ ಜೊತೆಗೆ ಕೆಟ್ಟ ಆಡಳಿತವನ್ಬು ನೀಡಿ, ಜನರಿಂದ ಛೀಮಾರಿ ಹಾರಿಸಿಕೊಂಡ ಬಿಜೆಪಿ ಪಕ್ಷದವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ವಿಷಯಕ್ಕೆ ತಲೆ ಕೆಡಿಸಿಕೊಂಡಿರುವುದು ಹಾಸ್ಯಾಸ್ಪದ ಬೆಳವಣಿಗೆ ಎಂದಿದ್ದಾರೆ.
ಪಕ್ಷ ಏರ್ಪಡಿಸುವ ಸಭೆ, ಸಮಾರಂಭ ಮತ್ತು ಹೋರಾಟಗಳಿಗೆ ಸ್ವಪಕ್ಷೀಯರನ್ನೇ ಕರೆಸಲು ಸಾಧ್ಯವಾಗದ ವಿಜಯೇಂದ್ರ ಹಾಗೂ ಯತ್ನಾಳ್ ಅವರು ನಿಜವಾದ ವಿಪಕ್ಷ ನಾಯಕ ನಾನು ರೀ.. ಎಂದು ಸದನದಲ್ಲೇ ಹೇಳುತ್ತಿದ್ದರೂ, ವಿಪಕ್ಷ ನಾಯಕ ನಾನು ಎಂದು ಗಟ್ಟಿಯಾಗಿ ಹೇಳಲು ದನಿಯಿಲ್ಲದ ಆರ್.ಅಶೋಕ್ ಅಂತವರು ಕಾಂಗ್ರೆಸ್ ಪಕ್ಷದ ವಿಷಯಗಳ ಬಗ್ಗೆ ಮಾತನಾಡುವುದನ್ನು ಕೇಳುತ್ತಿದ್ದರೆ ಇವರ ಪಕ್ಷ ಎಂಥಾ ದುರ್ಗತಿ ತಲುಪಿದೆ ಎಂಬುದನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.
ಬೆಂಗಳೂರಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ
‘ಡಿಜಿಟಲ್ ಅರೆಸ್ಟ್’ ವಂಚನೆ: 1 ಕೋಟಿ ರೂ. ಕಳೆದುಕೊಂಡ 82 ವರ್ಷದ ವ್ಯಕ್ತಿ | Digital arrest scam








