ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಜೊತೆಗೆ ಲಾರಿ ಮಾಲೀಕರ ಸಂಘ ನಡೆಸಿದಂತ ಸಭೆ ವಿಫಲವಾಗಿದೆ. ಲಾರೀ ಮಾಲೀಕರ ಬೇಡಿಕೆ ಈಡೇರಿಸೋ ಸಂಬಂಧ ನಡೆದಂತ ಸಭೆಯಲ್ಲಿ ಒಮ್ಮತದ ನಿರ್ಧಾರ ವ್ಯಕ್ತವಾಗಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಲಾರಿ ಮುಷ್ಕರದಿಂದ ಹಿಂದೆ ಸರಿಯಲ್ಲ. ನಾಳೆಯಿಂದ ಅನಿರ್ದಿಷ್ಟಾವಧಿವರೆಗೆ ಉಗ್ರ ಹೋರಾಟ ಮಾಡುವುದಾಗಿ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.
ಇಂದು ಸಿಎಂ ಸಿದ್ಧರಾಮಯ್ಯ ಜೊತೆಗಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾವು ಯಾವುದೇ ಕಾರಣಕ್ಕೂ ಮುಷ್ಕರದಿಂದ ಹಿಂದೆ ಸರಿಯಲ್ಲ. ನಾವು ತೀರ್ಮಾನ ಮಾಡಿಯಾಗಿದೆ ಎಂದರು.
ಸಿಎಂ ಮುಷ್ಕರ ಹಿಂಪಡೆಯಲು ಹೇಳಿದ್ರು ಆದ್ರೇ, ಆಗಲ್ಲ. ನಾಳೆಯಿಂದ ಅನಿರ್ದಿಷ್ಟಾವಧಿ ಉಗ್ರ ಹೋರಾಟ ಮಾಡುತ್ತೇವೆ ಎಂಬುದಾಗಿ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.
ಆಟೋ, ರಿಕ್ಷಾದವರಂತೆ ನಮಗೂ ಬಾಡಿಗೆ ಫಿಕ್ಸ್ ಮಾಡಿ. ಲಾರಿ ಮಾಲೀಕರಿಗೂ ಬಾಡಿಗೆ ದರ ಫಿಕ್ಸ್ ಮಾಡಬೇಕು. ಡೀಸೆಲ್ ದರ ಎಷ್ಟಾದರೂ ಏರಿಸಿ, ರೇಟ್ ಫಿಕ್ಸ್ ಮಾಡಿ. ಸಿಎಂ ಸಿದ್ಧರಾಮಯ್ಯನವರಿಗೆ ಡೈರೆಕ್ಟಾಗಿಯೇ ಹೇಳಿದ್ದೇವ ಎಂದರು.
BREAKING: ಲಾರಿ ಮಾಲೀಕರ ಜೊತೆಗಿನ ಸಿಎಂ ಸಿದ್ಧರಾಮಯ್ಯ ಸಂಧಾನ ಸಭೆ ವಿಫಲ: ಮುಷ್ಕರ ಮುಂದುವರಿಕೆ
ವಾರಾಂತ್ಯದಲ್ಲಿ UPI ಕೆಲವು ಗಂಟೆಗಳ ಕಾಲ ಸ್ಥಗಿತವೇಕೆ ಗೊತ್ತಾ? ಇಲ್ಲಿದೆ ಕಾರಣ