ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ/ಅರೆ ಸರ್ಕಾರಿ/ಸೇವಾ ಸಂಸ್ಥೆಗಳ ಕಟ್ಟಡಗಳ ಮೇಲೂ ಮಕ್ಕಳ ಸಹಾಯವಾಣಿ 1098 ಅನ್ನು ಕಡ್ಡಾಯವಾಗಿ ಬರೆಸಲು ಸರ್ಕಾರ ಸುತ್ತೋಲೆ ಹೊರಡಿಸಿದೆ.
ರಾಜ್ಯದ ಎಲ್ಲಾ ಸರ್ಕಾರಿ/ಅರೆ ಸರ್ಕಾರಿ/ಸೇವಾ ಸಂಸ್ಥೆಗಳ ಕಟ್ಟಡಗಳ ಮೇಲೂ ಮಕ್ಕಳ ಸಹಾಯವಾಣಿ 1098 ಅನ್ನು ಕಡ್ಡಾಯವಾಗಿ ಬರೆಸಲು ಡಾ|| ತಿಪ್ಪೇಸ್ವಾಮಿ ಕೆ.ಜೆ. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರುರವರ ಪತ್ರವನ್ನು ರವಾನಿಸುವೆ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ.
ಉಲ್ಲೇಖದ ಸರ್ಕಾರದ ಪತ್ರಕ್ಕೆ ಲಗತ್ತಿಸಿರುವ ಡಾ|| ತಿಪ್ಪೇಸ್ವಾಮಿ ಕೆ.ಟಿ.ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರುರವರ ಪತ್ರವನ್ನು ಕಾರಾಗೃಹಗಳ ಉಪ ಮಹಾನಿರೀಕ್ಷಕರುಗಳ ಕಛೇರಿಗಳಿಗೆ, ನಿರ್ದೇಶಕರು ಕರ್ನಾಟಕ ಕಾರಾಗೃಹಗಳ ಅಕಾಡೆಮಿ, ರಾಜ್ಯದ ಎಲ್ಲಾ ಕಾರಾಗೃಹಗಳಿಗೆ, ಪ್ರಾಚಾರ್ಯರು ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆ, ಮೈಸೂರುರವರಿಗೆ ಮತ್ತು ಪ್ರಧಾನ ಕಛೇರಿಯ ಫಾರಮ್ ಶಾಖೆಗೆ ಲಗತ್ತಿಸುತ್ತಾ, ಸದರಿ ಪತ್ರದಲ್ಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.









