ಬೆಂಗಳೂರು: ಪಾಕಿಸ್ತಾನ ಭಯೋತ್ಪಾದಕರ ನಾಡು ಎಂಬುದನ್ನು ಈಗಾಗಲೇ ಸಾಬೀತುಪಡಿಸಲಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕÀ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯÀ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತವು ಬಹುಕಾಲದಿಂದ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತ ಬಂದಿದೆ. ಇನ್ನೊಂದೆಡೆ ಪಾಕಿಸ್ತಾನವು, ತಮಗೂ ಭಯೋತ್ಪಾದಕರಿಗೂ ಸಂಬಂಧ ಇಲ್ಲ; ಅವರು ನಮ್ಮ ನೆಲದಲ್ಲಿ ಇಲ್ಲವೆಂದು ಅನೇಕ ಬಾರಿ ಹೇಳಿತ್ತು. ಆದರೆ, ಈಗ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದೆ. ಭಯೋತ್ಪಾದಕರ ನೆಲೆಗಳನ್ನು ಧ್ವಂಸ ಮಾಡಿದಾಗ ಯಾವ ಉಗ್ರರು ಸತ್ತು ಬಿದ್ದರೋ ಅವರನ್ನು ಅಲ್ಲಿನ ಸರಕಾರ ಮತ್ತು ಮಿಲಿಟರಿ ಎರಡೂ ಸೇರಿ ಗೌರವ ಕೊಡುವ ರೀತಿಯಲ್ಲಿ ಅಂತ್ಯಕ್ರಿಯೆಯನ್ನು ಮಾಡಿದ್ದು ಇಡೀ ಪ್ರಪಂಚ ನೋಡಿದೆ ಎಂದು ವಿವರಿಸಿದರು.
ಇದಾದ ಬಳಿಕ ಪಾಕಿಸ್ತಾನ ನಮ್ಮ ಮೇಲೆ ಯುದ್ಧ ಮಾಡಲು ಪ್ರಾರಂಭಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ನಮ್ಮ ಸೈನಿಕರು ಕೂಡ ಅವರ ಮೇಲೆ ಯುದ್ಧ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಅವರು ಬಿಟ್ಟಿದ್ದ ಕ್ಷಿಪಣಿಗಳನ್ನು ನಮ್ಮ ಸೈನಿಕರು ಹೊಡೆದು ಉರುಳಿಸಿದ್ದರು. ಸುಮಾರು 8-9 ವಿಮಾನನಿಲ್ದಾಣಗಳನ್ನು ಛಿದ್ರಗೊಳಿಸಿದ ಮೇಲೆ ಯಾವುದೇ ಕಾರಣಕ್ಕೆ ನಮಗೆ ಯುದ್ಧ ಬೇಡವೆಂದು ಅವರ ಸಂಸದರು ಕಣ್ಣೀರು ಹಾಕಿ ಕೇಳಿಕೊಂಡದ್ದು, ಅವರ ಕಾರ್ಯದರ್ಶಿಗಳು ಕೇಳಿಕೊಂಡ ಮೇಲೆ ಕದನವಿರಾಮ ಘೋಷಿಸುವ ಅನಿವಾರ್ಯತೆ ಬಂದಿದೆ ಎಂದು ವಿಶ್ಲೇಷಿಸಿದರು.
ಪಾಕಿಸ್ತಾನದ ವಿರುದ್ಧವಾಗಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತ ದೇಶದ ಕ್ಷಿಪಣಿ ದಾಳಿ ಮಾಡಿ ಅವರ ಅಡಗುದಾಣ ನೆಲಸಮ ಮಾಡುವಲ್ಲಿ ಯಶಸ್ಸು ಲಭಿಸಿದೆ. 9 ಅಡಗುದಾಣಗಳನ್ನು ಛಿದ್ರಗೊಳಿಸಿದ ಬಳಿಕ ಪಾಕಿಸ್ತಾನವು ಭಾರತ ದೇಶದ ಜೊತೆ ಕೈಜೋಡಿಸಬೇಕಿತ್ತು ಎಂದರು.
ಜನಸಾಮಾನ್ಯರ ಮೇಲೆ, ಪಾಕಿಸ್ತಾನದ ಮೇಲಾಗಲೀ ನಮ್ಮ ಹೋರಾಟ ಇಲ್ಲ. ನಮ್ಮ ಹೋರಾಟ ಕೇವಲ ಭಯೋತ್ಪಾದಕರ ನೆಲೆಗಳ ಮೇಲೆ ಇತ್ತು. ಏ.22ರಂದು ಕಾರಣವೇ ಇಲ್ಲದೇ 26 ಜನ ಭಾರತೀಯರನ್ನು ಗುಂಡು ಹಾರಿಸಿ ಕೊಲೆ ಮಾಡಲು ಭಯೋತ್ಪಾದಕರು ಯಶಸ್ವಿಯಾಗಿದ್ದರು ಎಂದು ಟೀಕಿಸಿದರು.
ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ಹೀಗಿವೆ ಕರ್ನಾಟಕದ ಸೈಬರ್ ಪೊಲೀಸ್ ಠಾಣೆಗೆ ದೂರವಾಣಿ ಸಂಖ್ಯೆ
BREAKING: ಪಾಕ್ ಹೈಕಮಿಷನ್ ಅಧಿಕಾರಿಗೆ ‘ಪರ್ಸನಾ ನಾನ್ ಗ್ರಾಟಾ’ ಘೋಷಿಸಿದ ಭಾರತ: 24 ಗಂಟೆಗಳಲ್ಲಿ ದೇಶ ತೊರೆಯಲು ಆದೇಶ
ಆಪರೇಷನ್ ಕೆಲ್ಲರ್: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯ ಎನ್ ಕೌಂಟರ್ ಗೆ ಮೂವರು ಉಗ್ರರು ಬಲಿ