ಬೆಂಗಳೂರು: ಕಾವೇರಿ 2.0 ತಂತ್ರಾಂಶದಲ್ಲಿ ಬರುವಂತ ಸಮಸ್ಯೆಗಳನ್ನು ಕಾಲಕಾಲಕ್ಕೆ ಪರಿಹರಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ ಚಿದಾನಂದ್ ಎಂ. ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾವೇರಿ 2.0 ತಂತ್ರಂಶದಲ್ಲಿ ಸಿಟಿಜನ್ ಲಾಗಿನ್ ನಲ್ಲಿ ಸ್ವತ್ತು ಹಾಗೂ ಪಕ್ಷಕಾರರು ವಿವರಗಳನ್ನು ನಮೂದಿಸಿ ಸಂಬಂಧಿಸಿದ ದಾಖಲೆಗಳನ್ನು ಅಪ್ ಲೊಡ್ ಮಾಡಿ ಸಲ್ಲಿಸಬೇಕಾಗಿರುತ್ತದೆ. ಈ ಸಮಯದಲ್ಲಿ ಪಕ್ಷಕಾರರ ಪೋಟೋ ಅಪ್ ಲೋಡ್ ಮಾಡುವ ಅವಶ್ವಕತೆ ಇರುವುದಿಲ್ಲ. ವಿವಿರಗಳ ನಮೂದು ಸಮಯದಲ್ಲಿ ಸೆಷನ್ ಔಟ್ ಆದಲ್ಲಿ ಮತ್ತೊಮ್ಮೆ ಲಾಗಿನ್ ಆಗಿ ಮುಂದುವರೆಯಬಹುದಾಗಿದೆ. ಹಿಂದೆ ನಮೂದಿಸಲಾದ ಮಾಹಿತಿ ಸೇವ್ ಆಗಿರುತ್ತದೆ ಮತ್ತು ಹೊಸದಾಗಿ ಮಾಹಿತಿಯನ್ನು ನಮೂದಿಸುವ ಅವಶ್ಯಕತೆ ಇರುವುದಿಲ್ಲ.
ಸಿಟಿಜನ್ ಲಾಗ್ ಇನ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಯಾವುದೇ ಸಮಸ್ಯೆಗಳಿರುವುದಿಲ್ಲ. ತಪ್ಪಾದ ಪಾಸ್ ವರ್ಡ್ ನಮೂದಿಸಿ ಲಾಗಿನ್ ವಿಫಲವಾದಲ್ಲಿ ಪಾಸ್ ವರ್ಡ್ ನ್ನು ರಿಸೆಟ್ ಮಾಡಿ ಲಾಗಿನ್ ಆಗಲು ಅವಕಾಶ ಕಲ್ಪಿಸಲಾಗಿರುತ್ತದೆ. ಕಾವೇರಿ 2.0 ತಂತ್ರಂಶದಲ್ಲಿ ನೀಡಲಾಗಿರುವ ಋಣಭಾರ ಪ್ರಮಾಣ ಪತ್ರವನ್ನು ಪಡೆಯಲು ಪ್ರಸ್ತುತ ಯಾವುದೇ ತಾಂತ್ರಿಕ ಸಮಸ್ಯೆಗಳಿರುವುದಿಲ್ಲ ಎಂದು ತಿಳಿಸಿದರು.
ಕಾವೇರಿ 2.0 ತಂತ್ರಂಶವು ನೂತನ ತಂತ್ರಂಶವಾಗಿದ್ದು, ಇದನ್ನು ಜೂನ್ 2023ರ ಅಂತ್ಯಕ್ಕೆ ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿಗಳಲ್ಲಿ ಅಳವಡಿಸಲಾಗಿರುತ್ತದೆ. ಈ ತಂತ್ರಾಂಶದಲ್ಲಿ Public Interface ಇರುವುದರಿಂದ ಸಾರ್ವಜನಿಕರು ಆನ್ ಲೈನ್ ಮುಖಾಂತರ ದಸ್ತಾವೇಜಿನ ನೋಂದಣಿಗೆ ಸಂಬಂಧಿಸಿದ ಶೇಕಡ 90ರಷ್ಟು ಕೆಲಸವನ್ನು ಪೂರ್ಣಗೊಳಿಸಿರುತ್ತಾರೆ. ತಂತ್ರಾಂಶದ ಕಾರ್ಯಾಚರಣೆಯಲ್ಲಿ ಸಾರ್ವಜನಿಕರ ಪಾತ್ರ ಹೆಚ್ಚಾಗಿರುವುದರಿಂದ ಪ್ರಾರಂಭದ ದಿನಗಳಲ್ಲಿ ತಂತ್ರಾಂಶವನ್ನು ಉಪಯೋಗಿಸುವಲ್ಲಿ ಸಾರ್ವಜನಿಕರಿಗೆ ಕೆಲವು ಸಮಸ್ಯೆಗಳು ಕಂಡು ಬಂದಿದ್ದು, ಅವುಗಳನ್ನು ಕಾಲಕ್ರಮೇಣ ಪರಿಹರಿಸಲಾಗಿರುತ್ತದೆ. ತಂತ್ರಾಂಶ ಬಳಕೆಯಲ್ಲಿ ಎದುರಿಸುವ ಸಮಸ್ಯೆ ಹಾಗೂ ಗೊಂದಲಗಳಿಗೆ ತಕ್ಷಣ ಪರಿಹಾರ ಒದಗಿಸಲು ಇಲಾಖೆಯು ಸಹಾಯವಾಣಿ : 080-68265316 ನ್ನು ಪ್ರಾರಂಭಿಸಿರುತ್ತದೆ. ಅದೇ ರೀತಿ ಟಿಕೇಟಿಂಗ್ ಟೂಲ್, ಸರ್ವೀಸ್ ಡೆಸ್ಕ್, ಅಪ್ಲೀಕೇಷನ್ ಸರ್ಪೋಟ್ ಇಂಜಿನಿಯರ್ ಹಾಗೂ ಸಿಸ್ಟಂ ಅಡ್ಮಿನ್, ಕಾವೇರಿ ಯೋಜನಾ ಉಸ್ತುವಾರಿ ಘಟಕ, ಯುಟ್ಯೂಬ್ ಚಾನಲ್, ಪೋಸ್ಟರ್, ತರಬೇತಿ ಇತ್ಯಾದಿಗಳನ್ನು ಕ್ರಮಗಳನ್ನು ಕೈಗೊಂಡಿರುತ್ತದೆ ಎಂದು ತಿಳಿಸಿದರು.