ನವದೆಹಲಿ:ಬಾಹ್ಯಾಕಾಶದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಯೋಜನೆಗಳ ಭಾಗವಾಗಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದೇಶದ ಮೊದಲ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಕೆಲಸವನ್ನು ಪ್ರಾರಂಭಿಸಿದೆ.
ಕೆಫೆ ಸ್ಫೋಟವನ್ನು ರಾಜಕೀಯಗೊಳಿಸಿ ರಾಜ್ಯಕ್ಕೆ ಕಳಂಕ ತರಲಾಗುತ್ತಿದೆ: ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ
ಮುಂದಿನ ಕೆಲವು ವರ್ಷಗಳಲ್ಲಿ ಬಾಹ್ಯಾಕಾಶ ನಿಲ್ದಾಣದ ಮೊದಲ ಮಾಡ್ಯೂಲ್ಗಳನ್ನು ಪ್ರಾರಂಭಿಸಬಹುದು ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆ.
2035ರ ವೇಳೆಗೆ ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣ ಇಸ್ರೋವನ್ನು ಸ್ಥಾಪಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಇಸ್ರೋ ಈಗಾಗಲೇ ಬಾಹ್ಯಾಕಾಶ ನಿಲ್ದಾಣಕ್ಕಾಗಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದೆ. ಬಾಹ್ಯಾಕಾಶ ನಿಲ್ದಾಣವನ್ನು ಭೂಮಿಯ ಕೆಳ ಕಕ್ಷೆಯಲ್ಲಿ ಇರಿಸಲಾಗುವುದು. ಭಾರತೀಯ ಅಂತರಿಕ್ಷ ನಿಲ್ದಾಣವು ಬಾಹ್ಯಾಕಾಶದಲ್ಲಿ 2 ರಿಂದ 4 ಗಗನಯಾತ್ರಿಗಳಿಗೆ ಸ್ಥಳಾವಕಾಶ ಕಲ್ಪಿಸಬಹುದು. ರಷ್ಯಾ, ಯುಎಸ್ ಮತ್ತು ಚೀನಾ ಮಾತ್ರ ಬಾಹ್ಯಾಕಾಶ ನಿಲ್ದಾಣಗಳನ್ನು ಕಕ್ಷೆಗೆ ಕಳುಹಿಸಿವೆ. ಬಾಹ್ಯಾಕಾಶದಲ್ಲಿ ಸ್ವತಂತ್ರ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಿರುವ ನಾಲ್ಕನೇ ದೇಶ ಭಾರತವಾಗಬಹುದು.
ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ.ಉನ್ನಿಕೃಷ್ಣನ್ ನಾಯರ್ ಮಾತನಾಡಿ, ಭಾರತದ ಅತಿ ಭಾರದ ರಾಕೆಟ್ ಬಾಹುಬಲಿ ಅಥವಾ ಉಡಾವಣಾ ವಾಹನ ಮಾರ್ಕ್ 3 ಅನ್ನು ಬಳಸಿಕೊಂಡು ಘಟಕಗಳನ್ನು ಭೂಮಿಯಿಂದ ಸುಮಾರು 400 ಕಿ.ಮೀ ಕಕ್ಷೆಗೆ ಏರಿಸುವ ಯೋಜನೆ ಇದೆ ಎಂದರು.