ನವದೆಹಲಿ: ಇಂದು ಇಸ್ರೋದಿಂದ ಬೇಹುಗಾರಿಕೆ ಉಪಗ್ರಹ ಇಓಎಸ್-09 ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಆದರೇ ಈ ಉಡಾವಣೆ ವಿಫಲವಾಗಿರುವುದಾಗಿ ತಿಳಿದು ಬಂದಿದೆ.
ಇಸ್ರೋದಿಂದ ಇಂದು ಇಓಎಸ್-09 ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಪಾಕಿಸ್ತಾನ, ಚೀನಾ ಗಡಿಯ ಮೇಲೆ ನಿರಂತರ ಕಣ್ಗಾವಲು ಇರಿಸೋದು ಇದರ ಉದ್ದೇಶವಾಗಿತ್ತು. ಆದರೇ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ಇಓಎಸ್-09 ಉಪಗ್ರಹ ಉಡಾವಣೆ ವಿಫಲವಾಗಿದೆ.
ಇಓಎಸ್-09 ಉಪಗ್ರಹದ ಮೊದಲ ಹಂತ, 2ನೇ ಹಂತದ ಉಡಾವಣೆ ಯಶಸ್ವಿಯಾಗಿತ್ತು. ಆದರೇ 3ನೇ ಹಂತದಲ್ಲಿ ಸಂಪರ್ಕವನ್ನು ಕಳೆದುಕೊಂಡಿತು. ಈ ಮೂಲಕ ಮೂರನೇ ಹಂತದಲ್ಲಿ ತಾಂತ್ರಿಕ ಸಮಸ್ಯೆಯಿಂದ ಇಸ್ರೋ ಉಡಾವಣೆ ಮಾಡಿದಂತ ಇಒಎಸ್-09 ಉಪಗ್ರಹದ ಉಡಾವಣೆ ವಿಫಲಗೊಂಡೆತೆ ಆಗಿದೆ.
ಪಾಕಿಸ್ತಾನದ ಮೇಲೆ 11 ಹೊಸ ಷರತ್ತು ವಿಧಿಸಿದ IMF: ಆಪರೇಷನ್ ಸಿಂಧೂರ್ ಬಳಿಕ ಭಾರತಕ್ಕೂ ಎಚ್ಚರಿಕೆ
ಆಪರೇಷನ್ ಸಿಂಧೂರ್: ಪಾಕ್ ಭಯೋತ್ಪಾದಕ ಲಾಂಚ್ ಪ್ಯಾಡ್ ಮೇಲಿನ ದಾಳಿಯ ವೀಡಿಯೋ ಬಿಡುಗಡೆ ಮಾಡಿದ ಭಾರತೀಯ ಸೇನೆ