ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಜನ, ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾದರೆ ಸಹಾಯ ಮಾಡಬೇಕು. ಅದು ಮಾನವೀಯತೆ. ಆದರೆ ಇಂದಿನ ಕಾಲಘಟ್ಟದಲ್ಲಿ ಇತರರಿಗೆ ಮಾನವೀಯತೆ ತೋರಿ ಕಷ್ಟಕಾಲದಲ್ಲಿ ಸಹಾಯ ಮಾಡುವವರು ತೀರಾ ವಿರಳ. ಸಹಾಯ ಬೇಕಾದರೆ ಅಲ್ಲಿಂದ ಓಡಿ ಹೋಗುವವರನ್ನು ಅಥವಾ ಸಹಾಯ ಕೇಳಿದವರನ್ನ ಓಡಿಸುವವರನ್ನ ನಾವು ನೋಡುತ್ತಲೇ ಇರುತ್ತೇವೆ. ಆದರೆ ಕೆಲವು ಜನರಲ್ಲಿ ಒಳ್ಳೆಯ ಮಾನವೀಯತೆ ಇರುತ್ತದೆ. ಅವರು ಖಂಡಿತವಾಗಿಯೂ ತಮ್ಮ ಬಲಿಪಶುಗಳಿಗೆ ಯಾವುದೇ ಪರಿಸ್ಥಿತಿಯಲ್ಲಿ ಸಹಾಯ ಮಾಡುತ್ತಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದವರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಸಂತೋಷ ವ್ಯಕ್ತ ಪಡೆಸುತ್ತಿದ್ರೆ, ಇತರರು ಕೋಪಗೊಂಡಿದ್ದಾರೆ.
ಈ ವೈರಲ್ ವೀಡಿಯೊದಲ್ಲಿ, ವ್ಯಕ್ತಿಯೊಬ್ಬರು ಸಾಮಾಜಿಕ ಪ್ರಯೋಗವನ್ನ ಮಾಡುತ್ತಿದ್ದಾರೆ. ಆತನ ಬಳಿ ಸಾಕಷ್ಟು ಹಣವಿದೆ. ಆದ್ರೆ, ತನ್ನ ಬಳಿ ಹಣವಿಲ್ಲ, ಶೂ ಪಾಲಿಶ್ ಮಾಡುತ್ತೀರಾ.? ಎಂದು ಬೂಟ್ ಪಾಲಿಶ್ ಮಾಡುವವರನ್ನ ಕೇಳುತ್ತಾನೆ. ಆದ್ರೆ, ತಮ್ಮ ಬಳಿಗೆ ಬಂದ ಗ್ರಾಹಕನ ಬಳಿ ಹಣವಿಲ್ಲ ಎಂಬ ಮಾತು ಕೇಳಿದ ಅವ್ರು ಶೂ ಪಾಲಿಶ್ ಮಾಡಲು ಮುಂದಾಗಲಿಲ್ಲ.
ಎರಡು-ಮೂರು ಜನರ ಬಳಿ ಹೋದ ಬಳಿಕ ಬೂಟು ಪಾಲಿಶ್ ಮಾಡುತ್ತಿದ್ದ ಮತ್ತೊಬ್ಬನ ಬಳಿ ಹೋಗಿ ಅದೇ ರೀತಿ ಹೇಳಿಕೊಂಡ, ನಂತ್ರ ಆ ವ್ಯಕ್ತಿ ಹಣವಿಲ್ಲದಿದ್ರು ಗ್ರಾಹಕರ ಬೂಟುಗಳನ್ನ ಪಾಲಿಶ್ ಮಾಡಲು ಒಪ್ಪಿಕೊಂಡರು. ಒಂದು ಶೂ ಪಾಲಿಶ್ ಮಾಡಿದ ನಂತ್ರ ತುಂಬಾ ಹಣವಿರುವ ಇನ್ನೊಂದು ಶೂ ಕೊಡುತ್ತಾನೆ. ಆಗ ತಾನು ಸಾಮಾಜಿಕ ಪ್ರಯೋಗ ಮಾಡುತ್ತಿದ್ದು, ಅದರಲ್ಲಿ ನೀವು ಗೆದ್ದಿರಿ ಎಂದು ಹೇಳಿದ. ಇದಲ್ಲದೇ, ಆತ ತನ್ನ ಎರಡನೇ ಶೂನಲ್ಲಿಟ್ಟ ಎಲ್ಲಾ ಹಣವನ್ನ ಆತನಿಗೆ ಕೊಟ್ಟನು. ಇಷ್ಟು ದೊಡ್ಡ ಮೊತ್ತದ ಹಣವನ್ನ ಪಡೆದ ಬೂಟ್ ಪಾಲಿಶ್ ಮಾಡುವವ ಸಂತೋಷದಿಂದ ಅಳಲು ಪ್ರಾರಂಭಿಸಿದ.
ಈ ಭಾವನಾತ್ಮಕ ವೀಡಿಯೊವನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್’ನಲ್ಲಿ @TheFigen_ ಐಡಿ ಹಂಚಿಕೊಂಡಿದೆ ಮತ್ತು ಎರಡು ನಿಮಿಷಗಳ 43 ಸೆಕೆಂಡುಗಳ ವೀಡಿಯೊವನ್ನ 8.7 ಮಿಲಿಯನ್ ಅಂದರೆ 87 ಲಕ್ಷ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಈ ವಿಡಿಯೋವನ್ನ ಲೈಕ್ ಮಾಡಿದ್ದಾರೆ ಮತ್ತು ವಿವಿಧ ಪ್ರತಿಕ್ರಿಯೆಗಳನ್ನ ನೀಡಿದ್ದಾರೆ. ದಯೆ ಬಹಳ ಸುಂದರವಾದ ಭಾವನೆ…ಕೊನೆಗೆ ಒಬ್ಬರು ಗೆಲ್ಲುತ್ತಾರೆ’ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ‘ಈ ದೃಶ್ಯ ನೋಡಿ ನನಗೆ ಅಳು ತಡೆದುಕೊಳ್ಳಲು ಆಗಲಿಲ್ಲ’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
Kindness won!
I have no money, can you shine my shoes?
An unusual experiment to identify kindness in people. pic.twitter.com/2lSmK4Yr1U— Figen (@TheFigen_) March 28, 2024
ಈ ವಸ್ತುಗಳನ್ನು ನಿಮ್ಮ ‘ಪರ್ಸ್’ನಲ್ಲಿ ಇಟ್ಟುಕೊಂಡರೆ ‘ಹಣಕಾಸಿನ ಸಮಸ್ಯೆ’ ಬರುವುದೇ ಇಲ್ಲ | Money Vastu Tips:
BREAKING: ಚಿತ್ರದುರ್ಗದಲ್ಲಿ ‘SSLC ಪರೀಕ್ಷೆ’ಯಲ್ಲಿ ನಕಲಿಗೆ ಅವಕಾಶ ನೀಡಿದ ‘ನಾಲ್ವರು ಶಿಕ್ಷಕ’ರು ಅಮಾನತು