ಕೇರಳ: ಅಯ್ಯೋ ನನ್ನ ಸಾವು ಕಣ್ಣೆದುರೇ ಪಾಸ್ ಆದಂತೆ ಆಯ್ತು. ಆ ಘಟನೆಯಿಂದ ನಾನು ಬದುಕಿ ಬಂದಿದ್ದೇ ಪವಾಡ ಹಾಗೆ ಹೀಗೆ ಅಂತ ಹೇಳೋದನ್ನು ಕೇಳಿದ್ದೀರಿ. ಆದ್ರೇ ಇಲ್ಲೊಬ್ಬ ಸಾವಿನಿಂದ ಜಸ್ಟ್ ಮಿಸ್ ಆಗಿದ್ದಾರೆ. ಕಂಡೆಕ್ಟರ್ ಸಹಾಯದಿಂದ ಬದುಕಿ ಬಂದ ಬಡಜೀವದ ಬಗ್ಗೆ ಮುಂದೆ ಓದಿ.
ಕೇರಳದ ಮಲಬಾರ್ ಬಸ್ ನಲ್ಲಿ ವ್ಯಕ್ತಿಯೊಬ್ಬ ಪ್ರಯಾಣಿಸುತ್ತಿದ್ದನು. ಬಸ್ಸಿನ ಡೋರ್ ಬಳಿಯಲ್ಲೇ ನಿಂತು, ಟಿಕೆಟ್ ಖರೀದಿಸಲು ಮುಂದಾಗಿದ್ದಾನೆ. ಬಸ್ ಕಂಡಕ್ಟರ್ ತನ್ನ ಪಾಡಿಗೆ ತಾನು ಡೋರ್ ಸಮೀಪವೇ ನಿಂತಿದ್ದಂತ ವ್ಯಕ್ತಿಗೆ ಟಿಕೆಟ್ ಕೊಡೋದಕ್ಕೆ ಮುಂದಾಗಿದ್ದಾನೆ.
ತಲೆ ತಗ್ಗಿಸಿ ಟಿಕೆಟ್ ಮಿಷನ್ ನಿಂದ ಟಿಕೆಟ್ ಹರಿಯುತ್ತಿದ್ದಂತ ಆತ ಬಸ್ ಡೋರ್ ಬಳಿಯ ವ್ಯಕ್ತಿ ಕೆಳಗೆ ಆಯತಪ್ಪಿ ಬೀಳೋದನ್ನು ಗಮನಿಸಿದ್ದೇ ಅಲರ್ಟ್ ಆಗಿದ್ದಾರೆ. ಇನ್ನೇನು ಬಸ್ ಡೋರಿನಿಂದ ಕೆಳಗೆ ಬಿದ್ದೇ ಬಿಟ್ಟ ಎನ್ನುವಂತ ಪ್ರಯಾಣಿಕನ ಕೈಯನ್ನು ಹಿಡಿದು ಒಳಗೆ ಎಳೆದುಕೊಂಡಿದ್ದಾರೆ. ಈ ಎಲ್ಲಾ ದೃಶ್ಯಾವಳಿ ಬಸ್ಸಿನಲ್ಲಿದ್ದಂತ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Kerala bus conductor with 25th Sense saves a guy from Falling Down from Bus
pic.twitter.com/HNdijketbQ— Ghar Ke Kalesh (@gharkekalesh) June 7, 2024
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತ ವೀಡಿಯೋವನ್ನು ಕಂಡಂತ ನೆಟ್ಟಿಗರು, ಕಂಡಕ್ಟರ್ ಸಮಯ ಪ್ರಜ್ಞೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.