ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮಳೆಗಾಲ ಬಂತೆಂದರೆ ಮನೆಯಲ್ಲಿ ನೊಣಗಳ ಕಾಟ ಜಾಸ್ತಿ ಆಗುತ್ತೆ. ಅಡುಗೆ ಮನೆ, ಸ್ನಾನಗೃಹ, ಹಾಲ್ ಎಲ್ಲೆಂದರಲ್ಲಿ ನೊಣಗಳು ಕಾಣಸಿಗುತ್ತವೆ. ಆಹಾರದ ಮೇಲೆ ಕುಳಿತು ಕಿರಿಕಿರಿ ಉಂಟು ಮಾಡುತ್ವೆ, ನೊಣಗಳಿರುವ ಆಹಾರವನ್ನ ಸೇವಿಸುವುದರಿಂದ ಕಾಲರಾ ಮತ್ತು ಭೇದಿಯಂತಹ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಆದ್ರೆ, ಕೆಲವರು ಈ ನೊಣಗಳನ್ನ ಹಿಮ್ಮೆಟ್ಟಿಸಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಸ್ಪ್ರೇಗಳನ್ನ ಬಳಸುತ್ತಾರೆ. ಆದ್ರೆ, ನೆನಪಿರಲಿ, ಅತಿಯಾದ ಕೆಮಿಕಲ್ ಸ್ಪ್ರೇ ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಹೆಚ್ಚು ಆರೋಗ್ಯ ಸಮಸ್ಯೆಗಳನ್ನ ಉಂಟು ಮಾಡುತ್ತದೆ. ಆದ್ದರಿಂದ, ನೀವು ಮನೆಯಲ್ಲಿ ಲಭ್ಯವಿರುವ ನೈಸರ್ಗಿಕ ಉತ್ಪನ್ನಗಳೊಂದಿಗೆ ನೊಣಗಳು ಮತ್ತು ಸೊಳ್ಳೆಗಳನ್ನ ಸುಲಭವಾಗಿ ತೊಡೆದು ಹಾಕಬಹುದು. ಹೇಗೆ.? ಎಂಬುದನ್ನ ಇಲ್ಲಿ ತಿಳಿದುಕೊಳ್ಳೋಣ.

ಉಪ್ಪು ನೀರು : ಸ್ಪ್ರೇ ಬಾಟಲಿಯನ್ನ ನೀರಿನಿಂದ ತುಂಬಿಸಿ ಮತ್ತು ಎರಡು ಚಮಚ ಉಪ್ಪು ಸೇರಿಸಿ. ನೊಣಗಳು ಇರುವಲ್ಲಿ ಈ ದ್ರವವನ್ನ ಸಿಂಪಡಿಸಿ. ನೆಲ ಸ್ವಚ್ಛಗೊಳಿಸುವಾಗ ಉಪ್ಪು ನೀರಿನಿಂದ ನೆಲವನ್ನ ಒರೆಸುವುದು ಉತ್ತಮ ಫಲಿತಾಂಶವನ್ನ ನೀಡುತ್ತದೆ.

ಕರ್ಪೂರದ ಪುಡಿ : ಆರತಿಗೆ ಬಳಸುವ ಕರ್ಪೂರದ ಉಂಡೆಗಳನ್ನ ತೆಗೆದುಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಈ ಪುಡಿಯನ್ನ ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಯಲ್ಲಿ ತುಂಬಿಸಬೇಕು. ನೊಣಗಳು ಕಂಡುಬಂದಲ್ಲಿ ಸಿಂಪಡಿಸಿ. ಹೀಗೆ ಮಾಡಿದರೆ ಒಂದೇ ಒಂದು ನೊಣವೂ ಕಾಣಿಸುವುದಿಲ್ಲ.

2013ರಲ್ಲಿ ‘ಜರ್ನಲ್ ಆಫ್ ಎಂಟಮಾಲಜಿ’ಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಕರ್ಪೂರವು ನೊಣಗಳನ್ನ ಹಿಮ್ಮೆಟ್ಟಿಸುವಲ್ಲಿ ಪರಿಣಾಮಕಾರಿ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅಲ್ಲದೆ, ಕರ್ಪೂರದ ಪುಡಿ ಎರಚುವ ಜಾಗದಲ್ಲಿ ನೊಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕರೂ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.

ತುಳಸಿ ಎಲೆಯ ಪೇಸ್ಟ್ : ಸ್ವಲ್ಪ ತುಳಸಿ ಎಲೆಗಳನ್ನ ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ಮಾಡಿ. ಈ ಪೇಸ್ಟ್ ನೀರಿನೊಂದಿಗೆ ಮಿಶ್ರಣ ಮಾಡಿ. ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಮನೆಯಲ್ಲಿ ನೊಣಗಳು ಹೆಚ್ಚಾಗಿ ಕಂಡುಬರುವ ಸ್ಥಳಗಳಲ್ಲಿ ದಿನಕ್ಕೆ ಎರಡು ಬಾರಿ ಸಿಂಪಡಿಸಿ. ಹೀಗೆ ಮಾಡಿದರೆ ನೊಣಗಳು ಬರುವುದಿಲ್ಲ.

ದಾಲ್ಚಿನ್ನಿ ಪುಡಿ: ದಾಲ್ಚಿನ್ನಿ ನೊಣಗಳನ್ನ ಹಿಮ್ಮೆಟ್ಟಿಸಲು ತುಂಬಾ ಉಪಯುಕ್ತವಾಗಿದೆ. ಮೊದಲು ಕೆಲವು ದಾಲ್ಚಿನ್ನಿ ತುಂಡುಗಳನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನೊಣಗಳು ಹೆಚ್ಚಾಗಿ ಕಂಡುಬರುವ ಸ್ಥಳಗಳಲ್ಲಿ ಈ ಪುಡಿಯನ್ನ ಸ್ವಲ್ಪ ಸಿಂಪಡಿಸಿ.

ವಿನೆಗರ್ : ಒಂದು ಬಟ್ಟಲಿನಲ್ಲಿ ಆಪಲ್ ಸೈಡರ್ ವಿನೆಗರ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ನೀಲಗಿರಿ ಎಣ್ಣೆಯನ್ನ ಸೇರಿಸಿ. ನಂತರ ಈ ದ್ರವವನ್ನ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮತ್ತು ನೊಣಗಳು ಹೆಚ್ಚಾಗಿ ಇರುವಲ್ಲಿ ಸಿಂಪಡಿಸಿ. ನೊಣಗಳನ್ನ ದೂರವಿಡಲು ದಿನಕ್ಕೆ ಎರಡು ಬಾರಿ ಸಿಂಪಡಿಸಿ.

ಬಿರಿಯಾನಿ ಎಲೆ : ಮನೆಯಲ್ಲಿ ನೊಣಗಳು ಜಾಸ್ತಿ ಇದ್ದಾಗ ಎರಡು ಬಿರಿಯಾನಿ ಎಲೆಗಳನ್ನ ಸುಟ್ಟು ಹಾಕಿ. ಈ ಎಲೆಗಳ ಹೊಗೆಯಿಂದ ನೊಣಗಳೂ ಓಡಿಹೋಗುತ್ತವೆ.

 

 

BIG BREAKING: ಡೆಂಗ್ಯೂ ಪತ್ತೆ ಪರೀಕ್ಷೆಗೆ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ | Dengue Test Price

ಮೋದಿ ಹೇಳಿದನ್ನೆಲ್ಲ ಹಿಂದೂಗಳು ಕೇಳಬೇಕಾ? ಹಿಂದಿನಿಂದಲೂ ಹಿಂದೂ ಧರ್ಮ ಉಳಿದಿಲ್ವಾ? : ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಮೋದಿ ಹೇಳಿದನ್ನೆಲ್ಲ ಹಿಂದೂಗಳು ಕೇಳಬೇಕಾ? ಹಿಂದಿನಿಂದಲೂ ಹಿಂದೂ ಧರ್ಮ ಉಳಿದಿಲ್ವಾ? : ಪ್ರಿಯಾಂಕ್ ಖರ್ಗೆ ವಾಗ್ದಾಳಿ

Share.
Exit mobile version