ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಆರ್ಭಟ ಹೆಚ್ಚಾಗಿದೆ. ಈ ಬೆನ್ನಲ್ಲೇ ಪರೀಕ್ಷೆಯನ್ನು ಹೆಚ್ಚು ಮಾಡುವಂತೆಯೂ ಆರೋಗ್ಯ ಇಲಾಖೆ ಸೂಚಿಸಿತ್ತು. ಈ ನಂತ್ರ ಈಗ ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.

ಇಂದು ಈ ಕುರಿತಂತೆ ರಾಜ್ಯ ಸರ್ಕಾರ ನಡವಳಿಯನ್ನು ಹೊರಡಿಸಿದ್ದು, ರಾಜ್ಯದಲ್ಲಿ ಡೆಂಗ್ಯೂ ಜ್ವರ ಪತ್ತೆ ಹ್ಚಚುವ ಪರೀಕ್ಷೆಗಳಾದ ಎಲಿಸಾ ಹಾಗೂ ರಾಪಿಡ್ ಟೆಸ್ಟ್ ಗಳ ದರವನ್ನು ನಿಗದಿಗೊಳಿಸಲಾಗಿತ್ತು. ಖಾಸಗಿ ಆಸ್ಪತ್ರೆಗಳು ಹಾಗೂ ಖಾಸಗಿ ಪ್ರಯೋಗ ಶಾಲೆಗಳ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗಳು ಡೆಂಗ್ಯೂ ಜ್ವರ ಪತ್ತೆ ಹಚ್ಚುವ ಪರೀಕ್ಷೆಗಳಿಗೆ ವಿವಿಧ ದರಗಳನ್ನು ವಿಧಿಸಲಾಗುತ್ತಿದೆ ಎಂದಿದೆ.

ಪ್ರಸ್ತುತ ರಾಜ್ಯದಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಡೆಂಗ್ಯೂ ಪತ್ತೆ ಹಚ್ಚುವ ಪರೀಕ್ಷೆಗಳಾದಂತ ಎಲಿಸಾ, ರಾಪಿಡ್ ಟೆಸ್ಟ್ ಗಳಿಗೆ ಈ ಕೆಳಕಗಿನಂತೆ ದರ ನಿಗದಿಪಡಿಸಿದೆ.

ಹೀಗಿದೆ ಡೆಂಗ್ಯೂ ಪತ್ತೆ ಪರೀಕ್ಷೆಯ ದರ ಪಟ್ಟಿ

  • ಡೆಂಗ್ಯೂ ಎಲಿಸಾ ಎನ್ಎಸ್1- ರೂ.300
  • ಡೆಂಗ್ಯೂ ಎಲಿಸಾ ಐಜಿಎಂ – ರೂ.300
  • ಸ್ಕ್ರೀನ್ ಟೆಸ್ಟ್ ರಾಪಿಡ್ ಕಾರ್ಡ್ ಎನ್ಎಸ್1, ಐಜಿಎಂ ಮತ್ತು ಐಜಿಜಿ – ಒಟ್ಟು ರೂ.250

ಈ ಮೇಲ್ಕಂಡ ದರಗಳನ್ನು ವಿಧಿಸಬೇಕು. ಇದರ ಹೊರತಾಗಿ ಹೆಚ್ಚುವರಿ ದರ ವಸೂಲಿ ಮಾಡಿದ್ರೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮದಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಅಂತ ಲ್ಯಾಬ್ ಗಳಿಗೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

UPDATE: ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

‘ರೈತ’ರಿಗೆ ಬಹುಮುಖ್ಯ ಮಾಹಿತಿ: ಹವಾಮಾನ ಆಧಾರಿತ ‘ಬೆಳೆ ವಿಮೆ ನೋಂದಣಿ’ಗೆ ಅರ್ಜಿ ಆಹ್ವಾನ

Share.
Exit mobile version