ನವದೆಹಲಿ : ಸಾಮಾಜಿಕ ಮಾಧ್ಯಮದಲ್ಲಿ ಸಧ್ಯದ ಮಟ್ಟಿಗೆ ಅತ್ಯಂತ ಜನಪ್ರಿಯ ವೇದಿಕೆ. ಆದಾಗ್ಯೂ, ಅನೇಕ ಜನರು ಈ ವೇದಿಕೆಯನ್ನ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಅಂತಹ ಒಂದು ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಓಡಾಡಲಾಗುತ್ತಿದೆ. ಹಣಕಾಸು ಸಚಿವಾಲಯವು ಹೊಸ ಯೋಜನೆಯನ್ನ ಪ್ರಾರಂಭಿಸಿದೆ ಎಂದು ಇದ್ರಲ್ಲಿ ಬರೆಯಲಾಗಿದ್ದು, ಇದರಲ್ಲಿ ಭಾರತದ ನಾಗರಿಕರಿಗೆ 46,715 ರೂಪಾಯಿ ನೀಡಲಾಗುತ್ತೆ ಎಂದಿದೆ. ಸಧ್ಯ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಈ ಸುದ್ದಿಯನ್ನ ಸಂಪೂರ್ಣವಾಗಿ ಸುಳ್ಳು ಎಂದು ಕರೆದಿದೆ. ಅಂತಹ ಯಾವುದೇ ಯೋಜನೆಯನ್ನ ಭಾರತ ಸರ್ಕಾರ ನಡೆಸುತ್ತಿಲ್ಲ ಎಂದು ಹೇಳಿದೆ. ಇಂತಹ ಹೇಳಿಕೆಗಳ ಬಗ್ಗೆ ಜನರು ಜಾಗರೂಕರಾಗಿರಬೇಕು.
ಹಣಕಾಸು ಸಚಿವಾಲಯವು ಅಂತಹ ಯಾವುದೇ ಯೋಜನೆ ನಡೆಸುತ್ತಿಲ್ಲ.!
ಹಣಕಾಸು ಸಚಿವಾಲಯವು ಬಡವರಿಗೆ 46,715 ರೂ.ಗಳ ಆರ್ಥಿಕ ನೆರವು ನೀಡುತ್ತಿದೆ ಎಂಬ ಸಂದೇಶವನ್ನ ವಾಟ್ಸಾಪ್ ಮೂಲಕ ಹರಡಲಾಗುತ್ತಿದೆ ಎಂದು ಪಿಐಬಿ ಫ್ಯಾಕ್ಟ್ ಚೆಕ್’ನಲ್ಲಿ ಮಾಹಿತಿ ನೀಡಿದೆ. ಈ ಯೋಜನೆಯ ಲಾಭ ಪಡೆಯಲು, ಜನರನ್ನ ಅವರ ವೈಯಕ್ತಿಕ ಮಾಹಿತಿಯನ್ನ ಕೇಳಲಾಗುತ್ತಿತ್ತು. ಪಿಐಬಿ ಪ್ರಕಾರ, ಇದು ನಕಲಿ. ಹಣಕಾಸು ಸಚಿವಾಲಯವು ಅಂತಹ ಯಾವುದೇ ಯೋಜನೆಯನ್ನ ನಡೆಸುತ್ತಿಲ್ಲ. ಈ ಸಂದೇಶವನ್ನ ವಂಚಕರು ಹರಡುತ್ತಿದ್ದಾರೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನ ಸಂಗ್ರಹಿಸುವ ಮೂಲಕ ಅವರು ನಿಮಗೆ ಹಾನಿ ಮಾಡಬಹುದು.
A #WhatsApp message with a link claims to offer financial aid of ₹46, 715 to the poor class in the name of the Ministry of Finance and, is further seeking the recipient's personal details#PIBFactCheck
✔️This message is #FAKE
✔️@FinMinIndia has announced no such aid! pic.twitter.com/rFrYeBsbfd
— PIB Fact Check (@PIBFactCheck) August 25, 2024
ಈ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಅನೇಕ ನಕಲಿ ಸುದ್ದಿಗಳನ್ನ ಹರಿಡಲಾಗುತ್ತೆ. ಇಂತಹ ನಕಲಿ ಯೋಜನೆಗಳ ಸಂದೇಶಗಳನ್ನ ಕಳುಹಿಸುವ ಮೂಲಕ, ಸೈಬರ್ ಅಪರಾಧಿಗಳು ಮೋಸಹೋಗುವ ಜನರನ್ನು ತಮ್ಮ ಬಲೆಗೆ ಬೀಳಿಸುತ್ತಾರೆ. ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಬ್ಯಾಂಕ್ ಖಾತೆಯಂತಹ ವೈಯಕ್ತಿಕ ಮಾಹಿತಿಯನ್ನ ಒದಗಿಸುವಂತೆ ಕೇಳಲಾಗುತ್ತದೆ. ಒಮ್ಮೆ ಅಂತಹ ಪ್ರಮುಖ ಮಾಹಿತಿಯು ಈ ಆನ್ಲೈನ್ ವಂಚಕರ ಕೈಯಲ್ಲಿದ್ದರೆ, ಅವರು ಯಾವುದೇ ಸಮಯದಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು. ಇಂತಹ ಅನೇಕ ಪ್ರಕರಣಗಳು ಈಗಾಗಲೇ ದೇಶದಲ್ಲಿ ನಡೆದಿವೆ. ಹಾಗಾಗಿ ಅಂತಹ ಯಾವುದೇ ಪ್ರಚೋದನಕಾರಿ ಯೋಜನೆಯ ಬಗ್ಗೆ ಮೊದಲು ಸಮಗ್ರ ತನಿಖೆ ನಡೆಸಿ.
BREAKING : ಭಾರತದಲ್ಲಿ ‘ಟೆಲಿಗ್ರಾಮ್’ ಬ್ಯಾನ್ ಸಾಧ್ಯತೆ : ವರದಿ |Telegram Ban
ಮುಳುಗುತ್ತಿದ್ದ ಹಡಗಿನಲ್ಲಿದ್ದ 11 ಮಂದಿಯನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್ | Watch Video
‘UPI’ ಆಯ್ತು ಈಗ ‘ULI’ : ಇನ್ಮುಂದೆ ‘ಬ್ಯಾಂಕ್’ನಿಂದ ‘ಸಾಲ’ ತೆಗೆದುಕೊಳ್ಳೋದು ತುಂಬಾ ಸುಲಭ