ಪೋಷಕರು ತಮ್ಮ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬೆಳವಣಿಗೆಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಮಾಡುತ್ತಿರುತ್ತಾರೆ, ಭವಿಷ್ಯದಲ್ಲಿ ಉನ್ನತಿ ಹೊಂದಲಿ ಎಂದು ಬಯಸುತ್ತಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು ಪದೇಪದೇ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದರಿಂದ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇದಕ್ಕಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದಲ್ಲಿ ತಿಳಿಸಿರುವ ಸ್ವರ್ಣ ಪ್ರಾಶನ ಸಂಸ್ಕಾರ ಉತ್ತಮ ಆಯ್ಕೆಯಾಗಿದೆ.
ಸ್ವರ್ಣಪ್ರಾಶನ ಎಂದರೇನು?
ಸ್ವರ್ಣಪ್ರಾಶನವು ಆಯುರ್ವೇದದಲ್ಲಿ ವಿವರಿಸಲಾದ 16 ಸಂಸ್ಕಾರಗಳಲ್ಲಿ ಒಂದಾಗಿದೆ. ಅದು ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಶುದ್ಧೀಕರಿಸಿದ ಸ್ವರ್ಣವನ್ನು(ಚಿನ್ನ) ಇತರೆ ಔಷದ ದ್ರವ್ಯಗಳೊಂದಿಗೆ ಸೇವನೆಯೋಗ್ಯವಾದ ರೂಪದಲ್ಲಿ ತಯಾರಿಸಿ, ನಿರ್ದಿಷ್ಟ ದಿನದಂದು (ಪುಷ್ಯ ನಕ್ಷತ್ರ) ಅಥವಾ ನಿತ್ಯವೂ ಸೇವಿಸುವುದರಿಂದ ಮಕ್ಕಳ ದೈಹಿಕ ಮಾನಸಿಕ ಮತ್ತು ಬೌದ್ಧಿಕ ಆರೋಗ್ಯವನ್ನು ಉತ್ತಮಗೊಳಿಸಬಹುದಾಗಿದೆ.
ಸ್ವರ್ಣ ಪ್ರಾಶನದಿಂದ ಆಗುವ ಪ್ರಯೋಜನಗಳು
ಮಕ್ಕಳ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಸೋಂಕುಗಳನ್ನು ತಡೆಗಟ್ಟುತ್ತದೆ – ಪದೇ ಪದೇ ಕಾಡುವ ಶೀತ, ಕೆಮ್ಮು, ಅಲರ್ಜಿ, ಅಸ್ತಮಾ ಇವುಗಳನ್ನು ಹತೋಟಿಯಲ್ಲಿಡಬಹುದು.
ಮಕ್ಕಳ ಗ್ರಹಣ ಶಕ್ತಿ ಮತ್ತು ಆಲೋಚನೆ ಶಕ್ತಿಯನ್ನು ಹೆಚ್ಚಿಸುತ್ತದೆ.
ನರಗಳಿಗೆ ಶಕ್ತಿ ನೀಡುತ್ತದೆ – ವಾಕ್ ದೋಷ ಶ್ರವಣದೋಷ, ಶಯ್ಯಾ ಮೂತ್ರ ಹಾಗೂ ಮುಂತಾದ ತೊಂದರೆಗಳನ್ನು ಶಮನಗೊಳಿಸುತ್ತದೆ.
ಒಟ್ಟಾರೆಯಾಗಿ ಸ್ವರ್ಣ ಪ್ರಾಶನವು ಮಕ್ಕಳ ದೈಹಿಕ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿದೆ.
ಸ್ವರ್ಣ ಪ್ರಾಶನವನ್ನು ಯಾರಿಗೆ ಕೊಡಬೇಕು?
ನವಜಾತ ಶಿಶುವಿನಿಂದ 16 ವರ್ಷದವರೆಗೆ ಸ್ವರ್ಣ ಪ್ರಾಶನವನ್ನು ನೀಡಬಹುದು. ಪುಷ್ಯ ನಕ್ಷತ್ರದಂದು ಕೊಡಿಸುವುದಾದರೆ ಸತತವಾಗಿ 21 ತಿಂಗಳವರೆಗೆ ಕೊಡಿಸುವುದು ಪ್ರಯೋಜನಕಾರಿ ಅಥವಾ ಸತತವಾಗಿ ಪ್ರತಿದಿನ ಆರು ತಿಂಗಳವರೆಗೆ ಕೊಡಿಸುವುದು ಕೂಡ ಉಪಯುಕ್ತ.
ಸಾಮಾನ್ಯ ಮಾಹಿತಿ
ಸಣ್ಣ ಜ್ವರ, ಶೀತ, ನೆಗಡಿ, ಕೆಮ್ಮು ಇತ್ಯಾದಿ ಸ್ವರ್ಣ ಪ್ರಾಶನಕ್ಕೆ ಅಡ್ಡಿಯಾಗುವುದಿಲ್ಲ. ಆಯುರ್ವೇದದಲ್ಲಿ ತಿಳಿಸಿರುವ ರೀತಿಯಲ್ಲಿ ಶೋಧಿತ ಸ್ವರ್ಣವನ್ನು ಉಪಯೋಗಿಸಿ ತಯಾರಿಸಿದ ಸ್ವರ್ಣ ಪ್ರಾಶನದಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಆಯುರ್ವೇದ ವೈದ್ದರಿಂದ ತೆಗೆದುಕೊಳ್ಳುವುದು ಉತ್ತಮ ಆಯ್ಕೆ. ಹೆಚ್ಚು ದಿನಗಳ ವರೆಗೆ ಹಾಕಿದಲ್ಲಿ ಹೆಚ್ಚು ಪರಿಣಾಮಕಾರಿ.
ಸ್ವರ್ಣ ಪ್ರಾಶನವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಕುವುದು ಉತ್ತಮ. ಹಾಕಿದ 15 ನಿಮಿಷಗಳ ನಂತರ ಆಹಾರವನ್ನು ಕೊಡಬಹುದು. ಸಾಮಾನ್ಯವಾಗಿ ಎಣ್ಣೆ ಪದಾರ್ಥ ಬೇಕರಿ ಪದಾರ್ಥ, ಚಾಟ್ಸ್, ಚಾಕಲೇಟ್ ಮುಂತಾದ ಪಚನಕ್ರಿಯೆಯನ್ನು ದುರ್ಬಲಗೊಳಿಸುವ ಆಹಾರವನ್ನು ಕೊಡಬಾರದು. ಸ್ವರ್ಣ ಪ್ರಾಶನ ವಿಧಾನವು ಸಂಪೂರ್ಣವಾಗಿ ಸುರಕ್ಷಿತವಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಿ.
ಸ್ವರ್ಣ ಪ್ರಾಶನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಬೇಕಿದ್ದಲ್ಲಿ ಸಂಪರ್ಕಿಸಿ – 8660885793. ದೈನಂದಿನ ಆರೋಗ್ಯದ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಲು 8660885793 ಮೇಸೆಜ್ ಮಾಡಿ.
ಲೇಖಕರು: ಡಾ. ಪ್ರವೀಣ್ ಕುಮಾರ್ BAMS, MD, ಆಯುರ್ವೇದ ವೈದ್ಯರು.
BIG UPDATE : ಕಾರು ಅಪಘಾತ ಪ್ರಕರಣ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿನ `L1, L4′ ಮೂಳೆ ಮುರಿತ.!