ಬೆಂಗಳೂರು: ಶಾಲೆಗೆ ವಿದ್ಯಾರ್ಥಿನಿಯೊಬ್ಬಳು ರಜೆ ಹಾಕಿದ ಕಾರಣಕ್ಕಾಗಿ ಮುಖ್ಯ ಶಿಕ್ಷಕಿಯೊಬ್ಬರು ಮನಸೋ ಇಚ್ಛೆ ಬಾಸುಂಡೆ ಬರುವಂತೆ ಹೊಡೆದಿರುವಂತ ರಾಕ್ಷಸಿ ಕೃತ್ಯ ನಡೆಸಿದಂತ ಆರೋಪ ಕೇಳಿ ಬಂದಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ತಮ್ಮೇನಹಳ್ಳಿಯ ಶಾಲೆಯಲ್ಲಿ ಈ ಘಟನೆ ನಡೆದಿದೆ. ಐದನೇ ತರಗತಿ ವಿದ್ಯಾರ್ಥಿನಿ ಯಮುನಾ ಶಾಲೆಗೆ ರಜೆ ಹಾಕಿದ್ದಕ್ಕಾಗಿ ಮುಖ್ಯ ಶಿಕ್ಷಕಿ ಚಂದ್ರಕಲಾ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಎಂಬುದಾಗಿ ಪೋಷಕರು ಆರೋಪಿಸಿದ್ದಾರೆ.
ಐದನೇ ತರಗತಿ ವಿದ್ಯಾರ್ಥಿನಿ ಯಮುನಾ ಕ್ಲಾಸ್ ಟೀಚರ್ ಗೆ ಹೇಳಿ ರಜೆ ಹಾಕಿದ್ದರಂತೆ. ಮರು ದಿನ ಶಾಲೆಗೆ ಬಂದಾಗ ಮುಖ್ಯ ಶಿಕ್ಷಕಿ ಚಂದ್ರಕಲಾ ಪ್ರಶ್ನಿಸಿದ್ದಾರೆ. ಈ ವೇಳೆ ಶಾಲೆಗೆ ಚಕ್ಕರ್ ಹಾಕಿದಂತ ವಿದ್ಯಾರ್ಥಿನಿ ಯಮುನಾಗೆ ಕೋಲಿನಿಂದ ಮುಖ್ಯ ಶಿಕ್ಷಕಿ ಥಳಿಸಿದಂತ ಆರೋಪ ಕೇಳಿ ಬಂದಿದೆ.
ಬಾಸುಂಡೆ ಬರುವಂತೆ ಹೊಡೆತ ನೀಡಿದಂತ ಮುಖ್ಯ ಶಿಕ್ಷಕಿ ಚಂದ್ರಕಲಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ. ಅಲ್ಲದೇ ಬಾಸುಂಡೆ ನೋವಿನಿಂದ ಜ್ವರದಿಂದ ಮಗಳು ನರಳುತ್ತಿರುವುದನ್ನು ಕಂಡು ಮಮ್ಮಲ ಮರುಗಿದ್ದಾರೆ.
BREAKING: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ: ಲಾರಿ-ಕಾರಿನ ನಡುವೆ ಡಿಕ್ಕಿಯಾಗಿ ನಾಲ್ವರು ದುರ್ಮರಣ