ಬೆಂಗಳೂರು: ಹೆಸರೆತ್ತಿದರೇ ಸಾಕು ಬಿಜೆಪಿಯವರು ಸಿಬಿಐ ತನಿಖೆಗೆ ಕೊಡಿ ಅಂತಾರೆ. ಈಶ್ವರಪ್ಪ ಕೇಸಲ್ಲಿ ಡೆತ್ ನೋಟ್ ನಲ್ಲಿ ಗುತ್ತಿಗೆದಾರ ಅವರ ಹೆಸರನ್ನು ಉಲ್ಲೇಖಿಸಿದ್ದರು. ಅದರೇ ಗುತ್ತಿಗೆದಾರ ಸಚಿನ್ ಡೆತ್ ನೋಟ್ ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಇದ್ಯಾ.? ಅವರು ಯಾಕೆ ರಾಜೀನಾಮೆ ಕೊಡಬೇಕು ಅಂತ ಸಿಎಂ ಸಿದ್ಧರಾಮಯ್ಯ ಪ್ರಶ್ನಿಸಿದರು.
ಇಂದು ವಿಧಾನಸೌಧದ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೆ ಮುನ್ನಾ ಬರೆದಿರುವಂತ ಡೆತ್ ನೋಟ್ ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ಎಲ್ಲಿಯಾದರೂ ಉಲ್ಲೇಖಿಸಿದ್ದಾರಾ? ಅವರ ಹೆಸರು ಎಲ್ಲಿಯೂ ಡೆತ್ ನೋಟಿನಲ್ಲಿ ಇಲ್ಲ ಅಲ್ವ. ಅವರು ಯಾಕೆ ಹೀಗೆ ಇರದೇ ಇದ್ದರೂ ರಾಜೀನಾಮೆ ಕೊಡಬೇಕು ಅಂತ ಕೇಳಿದರು.
ಈಶ್ವರಪ್ಪ ಕೇಸಲ್ಲಿ ಡೆತ್ ನೋಟ್ ನಲ್ಲಿ ಈಶ್ವರಪ್ಪ ಅವರ ಹೆಸರಿತ್ತು. ಸಚಿನ್ ಆತ್ಮಹತ್ಯೆ ಕೇಸಲ್ಲಿ ಪ್ರಿಯಾಂಕ್ ಹೆಸರು ಎಲ್ಲೂ ಇಲ್ಲ. ಪ್ರಿಯಾಂಕ್ ಖರ್ಗೆ ಯಾವುದೇ ತನಿಖೆಗೂ ಸಿದ್ಧ ಅಂತ ಹೇಳಿದ್ದಾರೆ. ನಾವೀಗ ದೂರು ದಾಖಲಿಸಿಕೊಂಡು ಸಿಐಡಿ ತನಿಖೆಗೆ ಕೊಟ್ಟಿದ್ದೇವೆ ಎಂದರು.
ಬಿಜೆಪಿಯವರು ಯಾವ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರೆ.? ಬಿಜೆಪಿಯವರಿಗೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ವ? ಅವರು ಅಧಿಕಾರದಲ್ಲಿ ಇದ್ದಾಗ ಒಂದೇ ಒಂದು ಕೇಸ್ ಆದರೂ ಸಿಬಿಐಗೆ ಕೊಟ್ರಾ? ಅವರಿಗೆ ಯಾವ ನೈತಿಕತೆ ಇದೆ ಸಿಬಿಐ ತನಿಖೆಗೆ ವಹಿಸೋದಕ್ಕೆ ಒತ್ತಾಯಿಸಲು ಅಂತ ಆಕ್ರೋಶ ವ್ಯಕ್ತ ಪಡಿಸಿದ್ದರು.
ತಾಯಿ ,ನಾಲ್ವರು ಸಹೋದರಿಯರ ಹತ್ಯೆ ಪ್ರಕರಣ: ‘ಹಿಂದೂ’ ಆಗಲು ಬಯಸಿದ್ದ ಆರೋಪಿ ಅರ್ಷದ್