ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಗಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ವಿಪಕ್ಷಗಳ ನಾಯಕರು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದಾರೆ. ಆದರೇ ಅಸಲಿಗೆ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಗಿದ್ಯಾ.? ಆ ಬಗ್ಗೆ ಮುಂದೆ ಓದಿ.
ನಿನ್ನೆ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬುದಾಗಿ ಘೋಷಣೆ ಕೂಗಲಾಗಿದೆ. ಇದು ರಾಜ್ಯದ ಶಕ್ತಿ ಸೌಧದಲ್ಲೇ ಕೂಗಿದ್ದು ಅಕ್ಷಮ್ಯ ಅಪರಾಧವಾಗಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಪಕ್ಷಗಳು ಒತ್ತಾಯಿಸಿದ್ದವು.
ದೇಶದ್ರೋಹಿಗಳನ್ನು ಬಂಧಿಸುವವರೆಗೂ ಬಿಜೆಪಿಯಿಂದ ಹೋರಾಟ – ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ
ಪಾಕಿಸ್ತಾನಕ್ಕೆ ಜೈಕಾರ ಹಾಕಿದ ದೇಶದ್ರೋಹಿಗಳನ್ನು ಬಂಧಿಸುವವರೆಗೂ ಬಿಜೆಪಿಯ ಹೋರಾಟ ಮುಂದುವರಿಯಲಿದೆ. ಇದು ಕಾಂಗ್ರೆಸ್ ಗೆ ನಾಚಿಕೆಗೇಡಿನ ವಿಚಾರವಾಗಿದ್ದು, ಇದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದ ಒಳಗೆ ದೇಶದ್ರೋಹದ ಚಟುವಟಿಕೆ ನಡೆದಿದೆ. ಪಾಕಿಸ್ತಾನ ಜಿಂದಾಬಾದ್ ಎಂದು ಜೈಕಾರ ಹಾಕಲಾಗಿದೆ. ಗೃಹ ಸಚಿವರಿಗೆ ಬೇರೆ ದೇಶಗಳಿಂದಲೂ ಜನರು ಕರೆ ಮಾಡಿ ಈ ಬಗ್ಗೆ ವಿಚಾರಿಸುತ್ತಿದ್ದಾರೆ. ಇಂದು ಅಂತಾರಾಷ್ಟ್ರೀಯ ಸುದ್ದಿಯಾದರೂ ಕಾಂಗ್ರೆಸ್ ಮಾತ್ರ ಇದನ್ನು ನಂಬುತ್ತಿಲ್ಲ. ಇದು ಮಾಧ್ಯಮಗಳ ಸೃಷ್ಟಿ ಎಂದು ಹೇಳಲಾಗುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರಂತೂ ಮಾಧ್ಯಮಗಳಿಗೆ ಬೆದರಿಕೆ ಹಾಕಿದ್ದಾರೆ ಎಂದರು.
ಈ ಘಟನೆ ನಡೆದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಸಚಿವ ಸಂಪುಟ ಸಭೆ ನಡೆಸಿ ಖಂಡಿಸಿ, ಪಾತಕಿಗಳನ್ನು ಹೆಡೆಮುರಿ ಕಟ್ಟಿ ತರುತ್ತೇವೆ ಎಂದು ಪ್ರಕಟಿಸಬೇಕಿತ್ತು. ಆದರೆ ಸಂಪುಟ ಸಭೆ ನಡೆಸಿಲ್ಲ, ಒಬ್ಬ ಸಚಿವರು ಕೂಡ ಘಟನಾ ಸ್ಥಳಕ್ಕೆ ಬಂದಿಲ್ಲ. ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಮಾಧ್ಯಮಗಳನ್ನೇ ನಿಂದಿಸಿದ್ದಾರೆ. ಇದು ಎಲ್ಲೋ ದೂರದ ಹಳ್ಳಿಯಲ್ಲಿ ನಡೆದಿಲ್ಲ. ವಿಧಾನಸೌಧದಲ್ಲೇ ನಡೆದಿರುವ ಘಟನೆಗೆ ಸಾಕ್ಷಿ ಕೇಳುತ್ತಿದ್ದಾರೆ. 24 ಗಂಟೆಯಾದರೂ ಯಾರನ್ನೂ ಬಂಧಿಸಿಲ್ಲ, ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.
ಅಸಲಿಗೆ ವಿಧಾನಸೌಧದಲ್ಲಿ ಕೂಗಿದ್ದೇನು.?
ಆದರೇ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ನಾಸೀರ್ ಹುಸೇನ್ ಅವರು ಗೆದ್ದ ಸಂದರ್ಭದಲ್ಲಿ ಬೆಂಬಲಿಗರ ಗುಂಪಿನಿಂದ ಕೂಗಿದ್ದು “ನಾಸೀರ್ ಸಾಬ್ ಜಿಂದಾಬಾದ್” ಎಂಬುದಾಗಿದೆ. “ಪಾಕಿಸ್ತಾನ್ ಜಿಂದಾಬಾದ್” ಅಲ್ಲ ಅಂತ ಎಎನ್ಐ ಸುದ್ಧಿ ಸಂಸ್ಥೆಯ ಪತ್ರಕರ್ತ ಎಂ.ಮಧು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನಾನು ರಾಜ್ಯಸಭಾ ಚುನಾವಣೆ ಫಲಿತಾಂಶದ ನಂತ್ರ ಸುದ್ದಿಗಾಗಿ ಸ್ಥಳದಲ್ಲೇ ಇದ್ದೆನು. ಅಲ್ಲಿ ಕೂಗಿದ್ದು ನಾಸೀರ್ ಸಾಬ್ ಜಿಂದಾಬಾದ್ ಎಂದಾಗಿದೆ. ಅದರ ಹೊರತಾಗಿ ಪಾಕಿಸ್ತಾನ್ ಜಿಂದಾಬಾದ್ ಎಂಬುದಾಗಿ ಅಲ್ಲ. ಆದ್ರೇ ಇದನ್ನು ಮಾಧ್ಯಮಗಳು ತಿರುಚಿ ಸುದ್ದಿ ಮಾಡಿದ್ದಾವೆ. ಇದು ಉದ್ದೇಶ ಪೂರ್ವಕ ಪ್ರಚೋದನೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
This was @INCIndia @NasirHussainINC MP. His supporters were raising "Nasir saab zindabad, Nasir Saab Zindabad, syed Saab zindabad" after #RajyasabhaElection win. And "some" kannada channels misinterpreted it as "Pakistan zindabad.
Such a intentional pathetic blunder. pic.twitter.com/Asd7GEeYAc
— Madhu M (@MadhunaikBunty) February 27, 2024
ವಿಧಾನಸೌಧದಲ್ಲಿ ಕೂಗಿದ್ದು ಪಾಕಿಸ್ತಾನ್ ಜಿಂದಾಬಾದ್ ಅಲ್ಲ, ನಾಸೀರ್ ಸಾಬ್ ಜಿಂದಾಬಾದ್
ಸೋ ವಿಧಾನಸೌಧದಲ್ಲಿ ವಿಪಕ್ಷಗಳ ನಾಯಕರು ಹೇಳುವಂತೆ, ಆರೋಪಿಸುವಂತೆ ಕಾಂಗ್ರೆಸ್ ನ ನಾಸೀರ್ ಹುಸೇನ್ ಕೂಗಿರೋದು ಪಾಕಿಸ್ತಾನ್ ಜಿಂದಾಬಾದ್ ಅಲ್ಲ. ಬದಲಾಗಿ ನಾಸೀರ್ ಸಾಬ್ ಜಿಂದಾಬಾದ್ ಎಂದಾಗಿದೆ. ಇದನ್ನೇ ತಿರುಚಿ ಪಾಕಿಸ್ತಾನ್ ಜಿಂದಾಬಾದ್ ಎಂಬುದಾಗಿ ಹೇಳಲಾಗುತ್ತಿದೆ. ಸೋ ಇದು ವಿಧಾನಸೌಧದಲ್ಲಿ ನಡೆದಿರೋ ಸತ್ಯ ಘಟನೆಯಾಗಿದೆ.
BREAKING: ಕಾಶ್ಮೀರದಲ್ಲಿ ‘ಉಗ್ರರೊಂದಿಗೆ ಸಂಪರ್ಕ’: ಮತ್ತೊಂದು ‘ಮುಸ್ಲಿಂ ಸಂಘಟನೆ’ಯನ್ನು ‘ಕೇಂದ್ರ ಸರ್ಕಾರ’ ನಿಷೇಧ
ಮೆಟ್ರೋದಲ್ಲಿ ‘ರೈತ’ನಿಗೆ ಅವಮಾನ ಪ್ರಕರಣ: ರಾಜ್ಯ ‘ಮಾನವಹಕ್ಕುಗಳ ಆಯೋಗ’ದಿಂದ ‘BMRCL’ಗೆ ನೋಟಿಸ್ ಜಾರಿ