ಬೆಂಗಳೂರು: ಬಿಪಿಎಲ್, ಎಪಿಎಲ್ ಕಾರ್ಡ್ ನಲ್ಲಿನ ತಪ್ಪುಗಳ ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆ ಸೇರಿದಂತೆ ಇತರೆ ತಿದ್ದುಪಡಿಗಾಗಿ ಜನವರಿ.31, 2025ರವರೆಗೆ ಮಾತ್ರವೇ ಅವಕಾಶ ನೀಡಲಾಗಿದೆ. ಆ ನಂತರ ಅವಕಾಶವಿಲ್ಲ ಎಂಬುದಾಗಿ ಸುದ್ದಿಯೊಂದು ವೈರಲ್ ಆಗಿದೆ. ಈ ಕಾರಣಕ್ಕೆ ಓನ್ ಕೇಂದ್ರಗಳ ಬಳಿಯಲ್ಲಿ ಜನರು ಸಾಲುಗಟ್ಟಿಯೂ ಕೆಲವೆಡೆ ನಿಂತಿದ್ದಾರೆ. ಆದರೇ ವೈರಲ್ ಸುದ್ದಿ ಹಿಂದಿನ ಅಸಲಿ ಸತ್ಯವೇನು ಅಂತ ಮುಂದೆ ಓದಿ.
ಬೆಂಗಳೂರಿನ ರಾಜಾಜಿನಗರ ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ಜನವರಿ.31 ರೇಷನ್ ಕಾರ್ಡ್ ನಲ್ಲಿನ ತಪ್ಪುಗಳನ್ನು ತಿದ್ದುಪಡಿ ಮಾಡೋದಕ್ಕೆ ಕೊನೆಯ ದಿನ. ಅಂದಿನ ಟೋಕನ್ ಇಂದೇ ಕೊಡ್ತೀದ್ದಾರೆ. ತಿದ್ದುಪಡಿ ಮಾಡ್ತಿದ್ದಾರೆ ಎನ್ನುವ ವದಂತಿಯಿಂದಾಗಿ ಜನರು ಕ್ಯೂ ನಿಂತು, ಸರಿ ಪಡಿಸಿಕೊಳ್ಳೋದಕ್ಕೆ ಮುಂದಾಗಿದ್ದಾರೆ. ಆದರೇ ಆಹಾರ ಇಲಾಖೆಯಿಂದ ಪಡಿತರ ಚೀಟಿಯಲ್ಲಿನ ತಪ್ಪುಗಳ ತಿದ್ದುಪಡಿಗೆ ಮಾತ್ರ ಯಾವುದೇ ಕಾಲಮಿತಿಯನ್ನು ನಿಗದಿ ಪಡಿಸಿಲ್ಲ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವಂತ ಆಹಾರ ಇಲಾಖೆಯು, ರೇಷನ್ ಕಾರ್ಡ್ ತಿದ್ದುಪಡಿಗಾಗಿ ಜನವರಿ.31, 2025 ಕೊನೆಯ ದಿನ ಎಂಬುದು ಸುಳ್ಳು. ಇಲಾಖೆಯಿಂದ ಯಾವುದೇ ಕಾಲಮಿತಿಯನ್ನು ನಿಗದಿ ಪಡಿಸಿಲ್ಲ. ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಬೆಂಗಳೂರು ಓನ್, ಗ್ರಾಮ ಓನ್, ಕರ್ನಾಟಕ ಓನ್ ಕೇಂದ್ರಗಳಲ್ಲಿ ರೇಷನ್ ಕಾರ್ಡ್ ನಲ್ಲಿನ ತಪ್ಪುಗಳ ತಿದ್ದುಪಡಿಯನ್ನು ಮಾಡಿಸಬಹುದು ಎಂಬುದಾಗಿ ಸ್ಪಷ್ಟ ಪಡಿಸಿದೆ.
ನಿಮ್ಗೆ ಮನೆ ಕಟ್ಟೋಕೆ ‘ನಿವೇಶನ’ ಇಲ್ವ? ಹೀಗೆ ರಾಜ್ಯ ಸರ್ಕಾರದಿಂದ ‘ಸೈಟ್’ ಪಡೆಯಲು ಅರ್ಜಿ ಸಲ್ಲಿಸಿ
BREAKING : ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ನಟ ‘ಸೈಫ್ ಅಲಿಖಾನ್’ ಡಿಸ್ಚಾರ್ಜ್ : ಫೋಟೋ ವೈರಲ್ | Saif Ali Khan