ಬೆಂಗಳೂರು: ಬಿಬಿಎಂಪಿ ವತೊಯಿಂದ ಪೌರಕಾರ್ಮಿಕರಿಗೆ ನಿವೇಶನ ನೀಡಲಾಗುವುದೆಂದು ಸುದ್ದಿ ಹರಿದಾಡುತ್ತಿತ್ತು. ಅದು ಎಷ್ಟು ನಿಜ.? ಎಷ್ಟು ಸುಳ್ಳು ಎನ್ನುವ ಬಗ್ಗೆ ಬಿಬಿಎಂಪಿಯ ಸ್ಪಷ್ಟೀಕರಣ ಮುಂದೆ ಓದಿ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ನಿವೇಶನ ದೊರಕಿಸಿಕೊಡುವುದಾಗಿ ಅನಾಮಧೇಯ ವ್ಯಕ್ತಿಗಳು ಅಪಪ್ರಚಾರ ಮಾಡಿ ಮುಗ್ಧ ವ್ಯಕ್ತಿಗಳಿಂದ ಹಣವನ್ನು ವಸೂಲಿ ಮಾಡುತ್ತಿರುವುದು ಹಾಗೂ ಪಾಲಿಕೆಯ ಹೆಸರನ್ನು ಬಳಸಿ ದುರ್ಬಳಕೆ ಮಾಡಿರುವ ಬಗ್ಗೆ ಪಾಲಿಕೆಗೆ ದೂರುಗಳು ಬರುತ್ತಿರುತ್ತವೆ.
ಈ ವಿಷಯದ ಕುರಿತು ಬಿಬಿಎಂಪಿಯು ಸ್ಪಷ್ಟ ಪಡಿಸುವುದೇನೆಂದರೆ, ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ಯಾವುದೇ ನಿವೇಶನಗಳನ್ನು ನೀಡುವ ಯೋಜನೆಯನ್ನು ಪ್ರಸ್ತುತ ಕೈಗೆತ್ತಿಕೊಂಡಿರುವುದಿಲ್ಲ ಹಾಗೂ ನಿವೇಶನ ಹಂಚಿಕೆ ಕುರಿತು ಯಾವುದೇ ಅಧಿಕೃತವಾಗಿ ಪಾಲಿಕೆಯಿಂದ ಅಧಿಸೂಚನೆ ಹೊರಡಿಸಲಾಗಿರುವುದಿಲ್ಲ ಅಥವಾ ಕ್ರಮವಹಿಸಿರುವುದಿಲ್ಲ. ಆದ್ದರಿಂದ ಇಂತಹ ಯಾವುದೇ ಆಮಿಷಗಳಿಗೆ/ಸುಳ್ಳು ವದಂತಿಗಳಿಗೆ ಮೋಸ ಹೋಗಬಾರದೆಂದು ಪೌರಕಾರ್ಮಿಕರು/ಸಾರ್ವಜನಿಕರಲ್ಲಿ ವಿನಂತಿಸಿದೆ.
ಮುಂದುವರಿದು, ಒಂದು ವೇಳೆ ಅನಾಮಧೇಯ ವ್ಯಕ್ತಿಗಳ ಮಾತುಗಳು ಕೇಳಿ ಮೋಸ ಹೋದರೆ ಪಾಲಿಕೆಯು ಜವಾಬ್ದಾರಿಯಾಗಿರುವುದಿಲ್ಲವೆಂದು ಜಂಟಿ ಆಯುಕ್ತರು(ಘತ್ಯಾನಿ) ರವರು ಈ ಸಾರ್ವಜನಿಕ ಪ್ರಕಟಣೆಯ ಮೂಲಕ ಸ್ಪಷ್ಟಿಕರಿಣ ನೀಡಿರುತ್ತಾರೆ.
SC, ST ಮೀಸಲಾತಿ ಹೆಚ್ಚಳ ಸಂವಿಧಾನದ ಶೆಡ್ಯುಲ್ 9ಗೆ ಸೇರಿಸಲು ಕೇಂದ್ರಕ್ಕೆ ಒತ್ತಾಯ – ಬೊಮ್ಮಾಯಿ
“ನಿಮಗೊಂದು ಶಿಕ್ಷೆ ನೀಡ್ತೀನಿ” : ಕ್ಯಾಂಟೀನ್’ನಲ್ಲಿ ವಿವಿಧ ಪಕ್ಷಗಳ ‘8 ಸಂಸದ’ರೊಂದಿಗೆ ‘ಪ್ರಧಾನಿ ಮೋದಿ’ ಭೋಜನಕೂಟ