ಕೆಎನ್ಎನ್ ಡಿಜಿಟಲ್ ಡೆಸ್ಕ್: ಆಯುರ್ವೇದ ವೈದ್ಯಕೀಯ ಪದ್ಧತಿಯು ಅತ್ಯಂತ ಪ್ರಾಚೀನವಾದ ವೈದ್ಯಕೀಯ ಶಾಸ್ತ್ರವಾದರೂ, ವೈಜ್ಞಾನಿಕ ನೆಲೆಯಿಂದ ಕೂಡಿದೆ. ಹಾಗಾದ್ರೆ ಆಯುರ್ವೇದ ಚಿಕಿತ್ಸೆ ನಿಧಾನವೋ ಅಥವಾ ವರದಾನವೋ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಮುಂದಿದೆ ಓದಿ.
ರೋಗಸ್ತು ದೋಷ ವೈಷಮ್ಯಂ ದೋಷ ಸಾಮ್ಯಂ ಅರೋಗತಃ ||
ಅಂದರೆ ದೇಹದಲ್ಲಿ functional elements ಗಳಾದ ತ್ರಿದೋಷಗಳು ವಾತ, ಪಿತ್ತ, ಕಫ ಮತ್ತು ಸಪ್ತ ಧಾತುಗಳ (tissues) ಅಸಮತೋಲನೆಯಿಂದ ರೋಗದ ಉದ್ಭವವು ಹಾಗೂ ಅವುಗಳ ಸಮತೋಲನ ಕಾರ್ಯದಿಂದ ಆರೋಗ್ಯವು. ಈ ನಿಟ್ಟಿನಲ್ಲಿ ದೋಷಗಳ ಮತ್ತು ಸಪ್ತ ಧಾತುಗಳ ಸಮಸ್ಥಿತಿಯೇ ಆಯುರ್ವೇದ ಚಿಕಿತ್ಸೆಯ ಮೂಲ ಮಂತ್ರ.
ಅನ್ಯ ವೈದ್ಯಕೀಯ ಪದ್ಧತಿಗಳ ಆಕರ್ಷಣೆಯಿಂದಾಗಿ, ಪ್ರಾಚೀನ ಆಯುರ್ವೇದ ವೈದ್ಯಕೀಯ ಶಾಸ್ತ್ರದ ಕಡೆಗೆ ಜನರ ಒಲವು ಕಡಿಮೆಯಾಗಿದೆ ಮತ್ತು ಹಲವು ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಆ ಸಂದೇಹಗಳ ಪರಿಹಾರಕ್ಕಾಗಿ ಈ ಲೇಖನ.
1.ಆಯುರ್ವೇದ ಚಿಕಿತ್ಸೆಯು ನಿಧಾನ.
ಈ ತಪ್ಪು ಕಲ್ಪನೆಯು ಎಲ್ಲಾ ಸಮಯದಲ್ಲೂ ಅಥವಾ ಎಲ್ಲಾ ರೋಗಿಗಳಿಗೆ ಅನ್ವಯಿಸುವುದಿಲ್ಲ ಏಕೆಂದರೆ ಆಯುರ್ವೇದವು ರೋಗದ ಬಲ ಮತ್ತು ರೋಗಿಯ ಬಲಕ್ಕೆ ಅನುಗುಣವಾಗಿ ಚಿಕಿತ್ಸಾ ಕ್ರಮಗಳನ್ನು ತಿಳಿಸುತ್ತದೆ. ಇದಲ್ಲದೆ ರೋಗಗಳ ಬಗ್ಗೆ ತಿಳಿಸುವಾಗ ಆ ರೋಗವನ್ನು ಯಾವ ಹಂತದಲ್ಲಿ ಸುಲಭವಾಗಿ ಗುಣಪಡಿಸಬಹುದು, ಕಷ್ಟದಿಂದ ಗುಣಪಡಿಸುವಂಥದ್ದು ಹಾಗೂ ಗುಣಪಡಿಸಲು ಅಸಾಧ್ಯವೆಂದು ತಿಳಿಸಿದೆ.
ರೋಗಿಗಳು ಆಯುರ್ವೇದವನ್ನು ಕೊನೆಯ ಆಯ್ಕೆಯನ್ನಾಗಿರಿಸಿಕೊಂಡಿದ್ದಾರೆ.ಈ ಹಂತದಲ್ಲಿರುವಾಗ ರೋಗದ ಬಲವು ಬಲಿಷ್ಠವಾಗಿಯೂ ಮತ್ತು ರೋಗಿಯ ಬಲವು ಕನಿಷ್ಠವಾಗಿರುವುದರಿಂದ ಚಿಕಿತ್ಸೆಯ ಫಲಿತಾಂಶವು ನಿಧಾನವಾಗಬಹುದು. ಆದ್ದರಿಂದ ಆಯುರ್ವೇದವು ರೋಗಿಯ ಮೊದಲ ಆಯ್ಕೆಯಾಗಿದಲ್ಲಿ ತ್ವರಿತವಾದ ಫಲಿತಾಂಶವನ್ನು ಕಾಣಬಹುದು.
2.ಆಯುರ್ವೇದ ಔಷಧಿಗಳನ್ನು ಅನ್ಯ ಪದ್ದತಿ ಔಷಧಿಗಳ ಜೊತೆಗೆ ತೆಗೆದುಕೊಳ್ಳಬಹುದೇ?
ಜನರು ಅವರ ರೋಗಗಳ ನಿವಾರಣೆಗೆ ಅನ್ಯ ವೈದ್ಯಕೀಯ ಪದ್ಧತಿಗಳ ಔಷಧಿಗಳ ಅಥವಾ ಚಿಕಿತ್ಸೆಯ ಮೊರೆ ಹೋಗುತ್ತಾರೆ.ಇದರಿಂದಾಗಿ ಆಯಾ ಚಿಕಿತ್ಸಾ ಪದ್ಧತಿಯ ಸಿದ್ಧಾಂತಗಳು ವಿಭಿನ್ನವಾಗಿರುತ್ತವೆ ಮತ್ತು ಕೆಲವು ಬಾರಿ ಔಷಧಿಗಳನ್ನು ತಡೆಯಿಲ್ಲದೆ (Suddenly) ನಿಲ್ಲಿಸುವುದರಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು. ಆದ್ದರಿಂದ ನುರಿತ ನೊಂದಾಯಿತ(registeted) ಆಯುರ್ವೇದ ವೈದ್ಯರ ಸಲಹೆ ಮೇರೆಗೆ ನೀವು ಉಪಯೋಗಿಸುತ್ತಿರುವ ಅನ್ಯ ಚಿಕಿತ್ಸಾ ಪದ್ಧತಿಯ ಔಷಧಿಗಳನ್ನು ವೈದ್ಯರೊಂದಿಗೆ ಸಮಾಲೋಚಿಸಿ ತೆಗೆದುಕೊಳ್ಳುವುದು ಉತ್ತಮ.
3.ಆಯುರ್ವೇದವೆಂದರೆ ಬರೀ ಪಥ್ಯ.
ಇತ್ತೀಚಿನ ದಿನಗಳಲ್ಲಿ ಜನರು ಆಹಾರ ಪದಾರ್ಥವು ಆರೋಗ್ಯಕರವೋ ಅಥವಾ ಅನಾರೋಗ್ಯಕರವೋ ಎಂಬುದನ್ನು ನೋಡುವುದರ ಬದಲಾಗಿ, ಕೇವಲ ನಾಲಿಗೆ ರುಚಿಯುಳ್ಳದ್ದು ಎಂದು ಸೇವಿಸುವುದರಿಂದ ಎಷ್ಟೋ ರೋಗಗಳು ಉದ್ಭವಗೊಂಡಿವೆ.ಅದಕ್ಕೆ ಅಲ್ಲವೇ “ಊಟ ಬಲ್ಲವನಿಗೆ ರೋಗವಿಲ್ಲ”ವೆಂದು ಹೇಳಿರುವುದು.
ಆಯುರ್ವೇದದಲ್ಲಿ ಪ್ರತಿಯೊಂದು ರೋಗದ ಬಗ್ಗೆ ತಿಳಿಸುವಾಗ ಆಹಾರಜ( dietary causes) , ವಿಹಾರಜ(activity related causes) ಮತ್ತು ಮಾನಸಿಕ ನಿದಾನ(Psychological factors) ಅಂದರೆ ರೋಗದ ಕಾರಣಗಳನ್ನು ವಿಸ್ತಾರವಾಗಿ ವಿವರಿಸಿದೆ. “ಚಿಕಿತ್ಸಾ ತತ್ರ ನಿಧಾನ ಪರಿವರ್ಜನಂ” “ರೋಗದ ಮೂಲ ಕಾರಣವನ್ನು ತ್ಯಜಿಸುವುದೇ ಮೊದಲ ಚಿಕಿತ್ಸೆ.” ಈ ದೃಷ್ಟಿಯಿಂದಾಗಿ ಆಯುರ್ವೇದ ವೈದ್ಯರುಗಳು ಆಯಾ ರೋಗಗಳಿಗೆ ತಕ್ಕಂತೆ ರೋಗಕ್ಕೆ ಕಾರಣವಾದ ಆಹಾರಗಳನ್ನು ನಿರ್ದಿಷ್ಟ ಅವಧಿಗಳಿಗೆ ತ್ಯಜಿಸಬೇಕೆಂದು ತಿಳಿಸುತ್ತಾರೆ. ಇದರಿಂದಾಗಿ ರೋಗದ ನಿವಾರಣೆ ತ್ವರಿತಗತಿಯಲ್ಲಿ ಆಗುವುದಲ್ಲದೇ, ರೋಗವು ಮರುಕಳಿಸುವ ಸಾಧ್ಯತೆಗಳು ಕಡಿಮೆ.
4.ಆಯುರ್ವೇದ ಔಷಧಿಗಳು ಅಡ್ಡ ಪರಿಣಾಮ ರಹಿತ
ಯಾವುದೇ ವೈದ್ಯಕೀಯ ಪದ್ಧತಿಗಳ ಔಷಧಿಗಳು ಅದರದೇ ಆದ ಪರಿಣಾಮ ಮತ್ತು ಅಡ್ಡ ಪರಿಣಾಮಗಳನ್ನು ಹೊಂದಿರುತ್ತವೆ. ಆದ್ದರಿಂದ ರೋಗಿಗಳು ನುರಿತ ವೈದ್ಯರೊಂದಿಗೆ ಸಂದರ್ಶಿಸಿದ ನಂತರವೇ ಔಷಧಿಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯಕ.
ಇತ್ತೀಚಿನ ದಿನಗಳಲ್ಲಿ ಆಯುರ್ವೇದದ ಹೆಸರಿನ ನಕಲಿ ಔಷಧಿಗಳ ಹಾವಳಿ ಜೋರಾಗಿದೆ. ಹೀಗಿರುವಾಗ ಜನರು ಜಾಹೀರಾತುಗಳನ್ನು ನೋಡಿ ಆಯುರ್ವೇದ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು.
ಆಯುರ್ವೇದವು ನಿಧಾನವಲ್ಲ ಸರಿಯಾದ ಸಮಯದಲ್ಲಿ, ಸರಿಯಾದ ಹಂತದಲ್ಲಿ ಆಯುರ್ವೇದ ಚಿಕಿತ್ಸೆಯನ್ನು ಅನುಸರಿಸಿದರೆ ನಿಜಕ್ಕೂ ಇದು ರೋಗಿಗೆ ವರದಾನ.
ನಿಮ್ಮ ದೈನಂದಿನ ಆರೋಗ್ಯದ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಲು 8660885793 ಗೆ ಮೇಸೆಜ್ ಮಾಡಿ.
ಲೇಖನ: ಡಾ. ಪ್ರವೀಣ್ ಕುಮಾರ್ BAMS, MD(ayu), ಆಯುರ್ವೇದ ವೈದ್ಯ, ಹಗರಿಬೊಮ್ಮನಹಳ್ಳಿ.
ಇನ್ಮುಂದೆ ಬೆಂಗಳೂರಿನಲ್ಲಿ ಕಸಕ್ಕೂ ಸರ್ವಿಸ್ ಚಾರ್ಜ್ ಫಿಕ್ಸ್: ಏಪ್ರಿಲ್.1 ರಿಂದ ಜಾರಿ
BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮೋಟಾರ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ತಗುಲಿ ಯುವತಿ ಸಾವು!