ಇರಾನ್ನ ಪ್ರಬಲ ಸೇನಾ ಪಡೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ವಿರುದ್ಧ ತನ್ನ ಆಕ್ರಮಣವನ್ನು ದಾಖಲೆ ಮಟ್ಟಕ್ಕೆ ಹೆಚ್ಚಿಸಿದೆ. ಅಮೆರಿಕದ ಸೇನಾ ಜಮಾವಣೆಗೆ ಪ್ರತಿಯಾಗಿ ಇರಾನ್ ಈಗ ’70ನೇ ಹಂತದ’ (70th Wave) ಪ್ರತಿ ದಾಳಿಯನ್ನು ಆರಂಭಿಸಿದ್ದು, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ 5 ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಲಾಗಿದೆ ಎಂದು ಘೋಷಿಸಿದೆ.
ಇರಾನ್ ಸೇನೆಯು ಅಲ್ಪಾವಧಿಯಲ್ಲಿಯೇ 70 ಬಾರಿ ಸರಣಿ ದಾಳಿಗಳನ್ನು ನಡೆಸುವ ಮೂಲಕ ಅಮೆರಿಕಕ್ಕೆ ಭಾರಿ ಪೆಟ್ಟು ನೀಡಿದೆ. ಇದು ಈವರೆಗಿನ ಅತ್ಯಂತ ದೊಡ್ಡ ಮಟ್ಟದ ಕೌಂಟರ್ ಅಟ್ಯಾಕ್ ಎಂದು ಹೇಳಲಾಗುತ್ತಿದೆ.
ಇರಾಕ್ ಮತ್ತು ಸಿರಿಯಾದಲ್ಲಿರುವ ಅಮೆರಿಕದ ಅತ್ಯಂತ ಆಯಕಟ್ಟಿನ 5 ಮಿಲಿಟರಿ ನೆಲೆಗಳ ಮೇಲೆ ಇರಾನ್ನ ಸುಧಾರಿತ ಕ್ಷಿಪಣಿಗಳು ಅಪ್ಪಳಿಸಿವೆ. ಈ ದಾಳಿಯಿಂದ ಅಮೆರಿಕದ ಸೇನಾ ಸೌಲಭ್ಯಗಳಿಗೆ ಭಾರಿ ಹಾನಿಯಾಗಿದೆ ಎಂದು ವರದಿಯಾಗಿದೆ.
“ಅಮೆರಿಕದ ಪ್ರತಿಯೊಂದು ದಾಳಿಗೂ ನಾವು ನೂರು ಪಟ್ಟು ಹೆಚ್ಚಿನ ಶಕ್ತಿಯೊಂದಿಗೆ ಉತ್ತರಿಸುತ್ತೇವೆ. ನಮ್ಮ ಭೂಪ್ರದೇಶದ ಸಮೀಪವಿರುವ ಯಾವುದೇ ಅಮೆರಿಕನ್ ನೆಲೆಗಳು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ,” ಎಂದು ಐಆರ್ಜಿಸಿ ಕಮಾಂಡರ್ಗಳು ಗುಡುಗಿದ್ದಾರೆ.ಈ ಭೀಕರ ದಾಳಿಯಲ್ಲಿ ಅಮೆರಿಕದ ಸೈನಿಕರು ಸಾವು-ನೋವಿಗೀಡಾಗಿರುವ ಸಾಧ್ಯತೆಯಿದ್ದು, ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್) ಇನ್ನು ಅಧಿಕೃತ ಮಾಹಿತಿ ನೀಡಿಲ್ಲ.








