ನವದೆಹಲಿ : ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್-ಹಸ್ಸಾಮ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ ಇರಾನ್ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ. ಇರಾನ್’ನ ಈ ವೈಮಾನಿಕ ದಾಳಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ. ಪಾಕಿಸ್ತಾನದ ಮೇಲಿನ ಇರಾನ್ ದಾಳಿಯ ಹಿಂದೆ ಭಾರತವಿದೆ ಎಂದು ಕೆಲವರು ಹೇಳುತ್ತಾರೆ. ಈ ದಾಳಿಯಲ್ಲಿ ಭಾರತದ ಹೆಸರು ಏಕೆ ಬರುತ್ತಿದೆ ಗೊತ್ತಾ?
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಎರಡು ದಿನಗಳ ಇರಾನ್ ಪ್ರವಾಸ ಕೈಗೊಂಡಿದ್ದರು. ಅವರು ಸೋಮವಾರ ಇರಾನ್ ಅಧ್ಯಕ್ಷ ಮತ್ತು ವಿದೇಶಾಂಗ ಸಚಿವರನ್ನ ಭೇಟಿಯಾದರು ಮತ್ತು ಒಂದು ದಿನದ ನಂತರ ಪಾಕಿಸ್ತಾನವು ದಾಳಿಗೆ ಒಳಗಾಯಿತು. ಜೈಶಂಕರ್ ಅವರ ಭೇಟಿಯ ನಂತರವೇ ಇರಾನ್ ಬಲೂಚಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿಗಳನ್ನ ಹಾರಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ.
विदेश मंत्री एस जयशंकर का ईरान दौरा।
अगले दिन ईरान ने पाकिस्तान पर हमला बोल दिया।
मिसाइल दागी तोप से गोले बरसाए 🚀🔥खेला होबे🤩#airbnb #AirStrike #Iran #Pakistan #India pic.twitter.com/VsupBXZcUV
— Er. Aman Kumar (@Er_Aman_Kumar) January 17, 2024
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಭೇಟಿಯ ಒಂದು ದಿನದ ನಂತ್ರ ಇರಾನ್ ಪಾಕಿಸ್ತಾನದ ಮೇಲೆ ವಾಯು ದಾಳಿ ನಡೆಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚಿಸಲಾಗಿದೆ. ಬಲೂಚಿಸ್ತಾನದಲ್ಲಿ ಕ್ಷಿಪಣಿಗಳನ್ನ ಹಾರಿಸಲಾಯಿತು ಮತ್ತು ಫಿರಂಗಿ ಶೆಲ್’ಗಳನ್ನ ಹಾರಿಸಲಾಯಿತು. ಆದಾಗ್ಯೂ, ವಾಸ್ತವದಲ್ಲಿ, ಇರಾನ್ನ ವಾಯು ದಾಳಿಯಲ್ಲಿ ಭಾರತದ ಕೈವಾಡವಿಲ್ಲ. ಈ ಬಗ್ಗೆ ಭಾರತ ಯಾವುದೇ ಹೇಳಿಕೆ ನೀಡಿಲ್ಲ.
ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ, ಇದರಿಂದಾಗಿ ಅದನ್ನು ಮತ್ತೆ ಮತ್ತೆ ಹೊಡೆಯಲಾಗುತ್ತಿದೆ. ಇರಾನ್ ಕ್ರಮದ ಹಿಂದಿನ ಕಾರಣ ಭಯೋತ್ಪಾದಕರು ಮಾತ್ರ. ಭಯೋತ್ಪಾದಕ ಗುಂಪು ಜೈಶ್ ಅಲ್-ಅದ್ಲ್’ನ ಅಡಗುತಾಣಗಳನ್ನು ಇರಾನ್ ಗುರಿಯಾಗಿಸಿಕೊಂಡಿದೆ, ಇದರಲ್ಲಿ ಇಬ್ಬರು ಮುಗ್ಧ ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಮೂವರು ಬಾಲಕಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಈ ದಾಳಿಯನ್ನ ಸ್ವತಃ ಪಾಕಿಸ್ತಾನವೇ ದೃಢಪಡಿಸಿದೆ.
ಷೇರುಪೇಟೆಯಲ್ಲಿ ಕೋಲಾಹಲ : ಸೆನ್ಸೆಕ್ಸ್, ನಿಫ್ಟಿ ತೀವ್ರ ಕುಸಿತ, ಹೂಡಿಕೆದಾರರಿಗೆ ₹3.4 ಲಕ್ಷ ಕೋಟಿ ನಷ್ಟ
BIGG NEWS : ‘ಪ್ರಧಾನಿ ಮೋದಿ’ಗೆ ಸಂದ ‘ಸನಾತನ ಶಿರೋಮಣಿ’ ಪುರಸ್ಕಾರ ; ‘ಅಖಾರ ಪರಿಷತ್’ ಘೋಷಣೆ
BREAKING : ರಾಯಣ್ಣ ಶಾಲೆಯಲ್ಲಿ ಕನ್ನಡ ಮಕ್ಕಳಿಗೆ ‘ಶೇ.65 ರಷ್ಟು’ ಮೀಸಲು : ಸಿಎಂ ಸಿದ್ದರಾಮಯ್ಯ ಘೋಷಣೆ