ತೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬುಧವಾರ ಇರಾನ್ ಉಡಾಯಿಸಿದ ಕ್ಷಿಪಣಿಯೊಂದು ಇಸ್ರೇಲ್ನ ಅತ್ಯಂತ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಡಿಮೋನಾ (Dimona) ನಗರಕ್ಕೆ ನೇರವಾಗಿ ಅಪ್ಪಳಿಸಿದೆ. ಇಸ್ರೇಲ್ನ ಪ್ರಮುಖ ಪರಮಾಣು ಸಂಶೋಧನಾ ಕೇಂದ್ರ ಮತ್ತು ರಿಯಾಕ್ಟರ್ ಈ ನಗರದ ಹತ್ತಿರದಲ್ಲೇ ಇರುವುದರಿಂದ ಈ ದಾಳಿಯು ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿದೆ.
ಇಸ್ರೇಲ್ನ ಅತ್ಯಾಧುನಿಕ ‘ಐರನ್ ಡೋಮ್’ ಸೇರಿದಂತೆ ಇತರೆ ವಾಯು ರಕ್ಷಣಾ ವ್ಯವಸ್ಥೆಗಳನ್ನು (Air Defense Systems) ಚಾಣಾಕ್ಷತನದಿಂದ ಭೇದಿಸಿದ ಇರಾನ್ ಕ್ಷಿಪಣಿಯು ನಗರದ ಜನವಸತಿ ಪ್ರದೇಶದ ಸಮೀಪ ಬಿದ್ದಿದೆ.ಬುಧವಾರ ಮಧ್ಯಾಹ್ನ ಡಿಮೋನಾ ನಗರದಲ್ಲಿ ಸತತವಾಗಿ ವಾಯುದಾಳಿಯ ಸೈರನ್ಗಳು ಮೊಳಗಿದ್ದು, ಜನರು ಪ್ರಾಣಭೀತಿಯಿಂದ ಬಂಕರ್ಗಳತ್ತ ಓಡಿದ್ದಾರೆ.
ಅದೃಷ್ಟವಶಾತ್, ಕ್ಷಿಪಣಿಯು ಪರಮಾಣು ರಿಯಾಕ್ಟರ್ನಿಂದ ಸುಮಾರು 13 ಕಿ.ಮೀ ದೂರದಲ್ಲಿ ಬಿದ್ದಿದೆ. ಈ ಘಟನೆಯಿಂದ ರಿಯಾಕ್ಟರ್ಗೆ ಯಾವುದೇ ಹಾನಿಯಾಗಿಲ್ಲ ಮತ್ತು ವಿಕಿರಣ ಸೋರಿಕೆಯಾದ ವರದಿಯಾಗಿಲ್ಲ ಎಂದು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ಖಚಿತಪಡಿಸಿದೆ.








