ಟೆಹ್ರಾನ್:ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ‘ಶಾಂತಿ ಸಂಧಾನಕಾರ’ ಎಂದು ಕರೆಸಿಕೊಳ್ಳಲು ಹವಣಿಸುತ್ತಿದ್ದ ಪಾಕಿಸ್ತಾನಕ್ಕೆ ಇರಾನ್ ಭಾರಿ ಮುಖಭಂಗ ಮಾಡಿದೆ. ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಶಮನಗೊಳಿಸಲು ಪಾಕಿಸ್ತಾನ ನಡೆಸಿದ್ದ ಸಂಧಾನದ ಪ್ರಯತ್ನವನ್ನು ಇರಾನ್ ಸಾರಾಸಗಟಾಗಿ ತಿರಸ್ಕರಿಸಿದೆ. ಅಷ್ಟೇ ಅಲ್ಲದೆ, ಇಸ್ಲಾಮಾಬಾದ್‌ನಲ್ಲಿ ಅಮೆರಿಕದ ಅಧಿಕಾರಿಗಳನ್ನು ಭೇಟಿಯಾಗಲು ಸಹ ಇರಾನ್ ನಿರಾಕರಿಸಿದೆ.
ಇರಾನ್ ಮತ್ತು ಅಮೆರಿಕ ನಡುವೆ ಮಧ್ಯಸ್ಥಿಕೆ ವಹಿಸಿ ಜಾಗತಿಕ ಮಟ್ಟದಲ್ಲಿ ಹೀರೋ ಆಗಲು ಪಾಕಿಸ್ತಾನ ಬಯಸಿತ್ತು. ಆದರೆ ಇರಾನ್, “ನಮ್ಮ ಮತ್ತು ಅಮೆರಿಕದ ನಡುವಿನ ವಿಷಯದಲ್ಲಿ ಪಾಕಿಸ್ತಾನದ ಹಸ್ತಕ್ಷೇಪ ಬೇಡ” ಎಂದು ಕಠಿಣ ಸಂದೇಶ ರವಾನಿಸಿದೆ.
ಅಮೆರಿಕದ ಹಿರಿಯ ಅಧಿಕಾರಿಗಳು ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರೊಂದಿಗೆ ಮಾತುಕತೆ ನಡೆಸುವಂತೆ ಪಾಕಿಸ್ತಾನ ಇರಾನ್‌ಗೆ ಮನವಿ ಮಾಡಿತ್ತು. ಆದರೆ ಈ ಪ್ರಸ್ತಾವನೆಯನ್ನು ಇರಾನ್ ಅಧಿಕಾರಿಗಳು ತಿರಸ್ಕರಿಸುವ ಮೂಲಕ ಪಾಕಿಸ್ತಾನದ ಆತಿಥ್ಯಕ್ಕೆ ಬೆಲೆ ನೀಡದಂತಾಗಿದೆ.
ಪಾಕಿಸ್ತಾನವು ಅಮೆರಿಕದ ಆಪ್ತ ಮಿತ್ರ ರಾಷ್ಟ್ರವಾಗಿರುವುದರಿಂದ, ಪಾಕ್ ಮೂಲಕ ನಡೆಯುವ ಯಾವುದೇ ಸಂಧಾನವು ತನಗೆ ಪೂರಕವಾಗಿರುವುದಿಲ್ಲ ಎಂಬುದು ಇರಾನ್‌ನ ಸ್ಪಷ್ಟ ನಿಲುವು.ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನವು ಈ ಸಂಧಾನದ ಮೂಲಕ ಅಮೆರಿಕದಿಂದ ಆರ್ಥಿಕ ನೆರವು ಪಡೆಯುವ ನಿರೀಕ್ಷೆಯಲ್ಲಿತ್ತು. ಆದರೆ ಇರಾನ್‌ನ ಈ ಕಠಿಣ ನಿಲುವು ಪಾಕಿಸ್ತಾನದ ರಾಜತಾಂತ್ರಿಕ ತಂತ್ರಗಾರಿಕೆಯನ್ನು ವಿಫಲಗೊಳಿಸಿದೆ.








