ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ಹಸ್ತಕ್ಷೇಪದ ವಿರುದ್ಧ ಕೆಂಡಾಮಂಡಲವಾಗಿರುವ ಇರಾನ್, ಈಗ ಅಮೆರಿಕದ ಪ್ರಬಲ ತಂತ್ರಜ್ಞಾನ ಸಂಸ್ಥೆಗಳ ವಿರುದ್ಧ ಯುದ್ಧ ಸಾರಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಪಶ್ಚಿಮ ಏಷ್ಯಾದಲ್ಲಿ ಕಾರ್ಯಾಚರಿಸುತ್ತಿರುವ ಗೂಗಲ್ (Google), ಮೈಕ್ರೋಸಾಫ್ಟ್ (Microsoft), ಮತ್ತು ಆಪಲ್ (Apple) ಸೇರಿದಂತೆ ಒಟ್ಟು 18 ಅಮೆರಿಕನ್ ಕಂಪನಿಗಳನ್ನು ಗುರಿಯಾಗಿಸುವುದಾಗಿ ಇರಾನ್ ಘೋಷಿಸಿದೆ.
“ನಮ್ಮ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿರುವ ಅಮೆರಿಕದ ಈ ತಂತ್ರಜ್ಞಾನ ಸಂಸ್ಥೆಗಳು ಇನ್ಮುಂದೆ ವಿನಾಶವನ್ನು ಎದುರಿಸಲಿವೆ (Expect Destruction)” ಎಂದು ಇರಾನ್‌ನ ಸೈಬರ್ ಸೆಕ್ಯೂರಿಟಿ ವಿಭಾಗ ಎಚ್ಚರಿಸಿದೆ. ಈ ಕಂಪನಿಗಳ ಮೂಲಸೌಕರ್ಯ, ಡೇಟಾ ಸೆಂಟರ್ ಮತ್ತು ಡಿಜಿಟಲ್ ಸೇವೆಗಳ ಮೇಲೆ ದಾಳಿ ನಡೆಸುವ ಮುನ್ಸೂಚನೆ ನೀಡಲಾಗಿದೆ.
ಇರಾನ್ ಬಿಡುಗಡೆ ಮಾಡಿರುವ 18 ಕಂಪನಿಗಳ ಪಟ್ಟಿಯಲ್ಲಿ ಗೂಗಲ್, ಮೈಕ್ರೋಸಾಫ್ಟ್, ಆಪಲ್ ಮಾತ್ರವಲ್ಲದೆ ಅಮೆಜಾನ್, ಮೆಟಾ (ಫೇಸ್‌ಬುಕ್/ಇನ್‌ಸ್ಟಾಗ್ರಾಮ್) ಮತ್ತು ಕೆಲವು ಪ್ರಮುಖ ಅಮೆರಿಕನ್ ಬ್ಯಾಂಕಿಂಗ್ ಸಂಸ್ಥೆಗಳೂ ಸೇರಿವೆ ಎಂದು ವರದಿಯಾಗಿದೆ.
ಈ ಕಂಪನಿಗಳು ಅಮೆರಿಕದ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ನೀಡುತ್ತಿವೆ ಮತ್ತು ಇರಾನ್ ವಿರುದ್ಧದ ನಿರ್ಬಂಧಗಳಿಗೆ ಸಹಕರಿಸುತ್ತಿವೆ ಎಂಬುದು ಇರಾನ್‌ನ ಪ್ರಮುಖ ಆರೋಪವಾಗಿದೆ.ತಜ್ಞರ ಪ್ರಕಾರ, ಇರಾನ್ ಭೌತಿಕ ದಾಳಿಗಿಂತ ಹೆಚ್ಚಾಗಿ ಈ ಕಂಪನಿಗಳ ಸರ್ವರ್‌ಗಳ ಮೇಲೆ ಬೃಹತ್ ಪ್ರಮಾಣದ ಸೈಬರ್ ದಾಳಿ (Cyber Attack) ನಡೆಸುವ ಸಾಧ್ಯತೆಯಿದೆ. ಇದು ಇಡೀ ಪಶ್ಚಿಮ ಏಷ್ಯಾದ ಡಿಜಿಟಲ್ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಬಹುದು.








