ಇರಾನ್-ಇಸ್ರೇಲ್ ಸಂಘರ್ಷದ ದೃಷ್ಟಿಯಿಂದ, ವಿದೇಶಾಂಗ ಸಚಿವಾಲಯ (ಎಂಇಎ) ಮಂಗಳವಾರ ನವದೆಹಲಿಯಲ್ಲಿ 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಟೆಹ್ರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ಪ್ರಜೆಗಳಿಗೆ ಸಹಾಯ ಮಾಡಲು ತುರ್ತು ಸಹಾಯವಾಣಿ ಸಂಖ್ಯೆಯನ್ನು ಸ್ಥಾಪಿಸಿದೆ.
ಇರಾನ್ ಮತ್ತು ಇಸ್ರೇಲ್ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ವಿದೇಶಾಂಗ ಸಚಿವಾಲಯದಲ್ಲಿ 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಟ್ವೀಟ್ ಮಾಡಿದ್ದಾರೆ.
ನಿಯಂತ್ರಣ ಕೊಠಡಿಯ ಸಂಪರ್ಕ ವಿವರಗಳು ಈ ಕೆಳಗಿನಂತಿವೆ:
1800118797 (ಟೋಲ್ ಫ್ರೀ)
+91-11-23012113
+91-11-23014104
+91-11-23017905
+91-9968291988 (ವಾಟ್ಸಾಪ್)
situationroom@mea.gov.in
ಇದಲ್ಲದೆ, ಇರಾನ್ನ ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಕೆಳಗಿನ ಸಂಪರ್ಕ ವಿವರಗಳೊಂದಿಗೆ 24 / 7 ತುರ್ತು ಸಹಾಯವಾಣಿಯನ್ನು ಸ್ಥಾಪಿಸಿದೆ:
ಕರೆಗಾಗಿ ಮಾತ್ರ:
1. +98 9128109115, +98 9128109109
WhatsApp ಗಾಗಿ:
2. +98 901044557, +98 9015993320, +91 8086871709.
3. ಬಂದರ್ ಅಬ್ಬಾಸ್: +98 9177699036
4. ಜಹೇದಾನ್: +98 9396356649
cons.tehran@mea.gov.in