ತೆಲ್ ಅವಿವ್: ಇರಾನ್‌ನ ಕ್ಷಿಪಣಿ ತಂತ್ರಜ್ಞಾನವು ಕೇವಲ ಮಧ್ಯಪ್ರಾಚ್ಯಕ್ಕೆ ಸೀಮಿತವಾಗಿಲ್ಲ, ಅದು ಯುರೋಪ್, ಏಷ್ಯಾ ಮತ್ತು ಆಫ್ರಿಕಾ ಖಂಡದ ಪ್ರಮುಖ ನಗರಗಳ ಮೇಲೆ ದಾಳಿ ಮಾಡುವ ಬೃಹತ್ ಸಾಮರ್ಥ್ಯವನ್ನು ಹೊಂದಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ಗಂಭೀರ ಎಚ್ಚರಿಕೆ ನೀಡಿದೆ.
ಶನಿವಾರ ಇರಾನ್ ಉಡಾಯಿಸಿದ ಸುಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿಯೊಂದು ಸುಮಾರು 4,000 ಕಿಲೋಮೀಟರ್ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ ಎಂದು ಐಡಿಎಫ್ ಪತ್ತೆಹಚ್ಚಿದೆ. ಇದು ಇರಾನ್ ಇತಿಹಾಸದಲ್ಲೇ ಅತ್ಯಂತ ದೀರ್ಘ ವ್ಯಾಪ್ತಿಯ ಕ್ಷಿಪಣಿ ಪ್ರಯೋಗವಾಗಿದೆ.
ಲಂಡನ್, ಪ್ಯಾರಿಸ್ ಈಗ ಟಾರ್ಗೆಟ್: ಈ ಹೊಸ ತಂತ್ರಜ್ಞಾನದ ಮೂಲಕ ಇರಾನ್ ಈಗ ಲಂಡನ್, ಪ್ಯಾರಿಸ್, ಬರ್ಲಿನ್ ಮತ್ತು ರೋಮ್‌ನಂತಹ ಯುರೋಪಿಯನ್ ರಾಜಧಾನಿಗಳನ್ನು ನೇರವಾಗಿ ಗುರಿಯಾಗಿಸಬಲ್ಲದು. ಇದು ಇಡೀ ಜಗತ್ತಿಗೆ ಇರುವ ಅಪಾಯ ಎಂದು ಇಸ್ರೇಲ್ ಹೇಳಿದೆ.
ಹಿಂದೂ ಮಹಾಸಾಗರದಲ್ಲಿರುವ ಅಮೆರಿಕ ಮತ್ತು ಬ್ರಿಟನ್‌ನ ಜಂಟಿ ಮಿಲಿಟರಿ ತಳವಾದ ‘ಡೈಗೊ ಗಾರ್ಸಿಯಾ’ (Diego Garcia) ಮೇಲೆ ಇರಾನ್ ಇತ್ತೀಚೆಗೆ ನಡೆಸಿದ ಕ್ಷಿಪಣಿ ದಾಳಿಯು ಅದರ ವಿಸ್ತರಿತ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
“ಇರಾನ್ ಕೇವಲ ಇಸ್ರೇಲ್‌ನ ಶತ್ರುವಲ್ಲ, ಅದು ಜಾಗತಿಕ ಭಯೋತ್ಪಾದಕ ಆಡಳಿತವಾಗಿದೆ. ಈಗಾಗಲೇ 12 ರಾಷ್ಟ್ರಗಳ ಮೇಲೆ ದಾಳಿ ನಡೆಸಿರುವ ಇರಾನ್, ಈಗ ಮೂರು ಖಂಡಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ,” ಎಂದು ಐಡಿಎಫ್ ವಕ್ತಾರರು ಎಚ್ಚರಿಸಿದ್ದಾರೆ.








