Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

2025ನೇ ಸಾಲಿನ `ಮುಖ್ಯಮಂತ್ರಿ ಪದಕ’ ಪ್ರಕಟ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಸುಮನ್ ಪನ್ನೇಕರ್‌ ಸೇರಿ ರಾಜ್ಯದ 153 ಅಧಿಕಾರಿ, ಸಿಬ್ಬಂದಿಗೆ ಗೌರವ !

29/03/2026 5:52 AM

IPL 2026 : ಚಿನ್ನಸ್ವಾಮಿಯಲ್ಲಿ ` ಕೊಹ್ಲಿ-ಪಡಿಕ್ಕಲ್’ ಅಬ್ಬರ : SRH ವಿರುದ್ಧ RCBಗೆ 6 ವಿಕೆಟ್‌ಗಳ ಭರ್ಜರಿ ಜಯ | WATCH VIDEO

29/03/2026 5:47 AM

ರಾಜ್ಯದ ಜನರೇ ಗಮನಿಸಿ : ಏ.1 ರಿಂದ ‘ಸ್ವಯಂ-ಗಣತಿ’ ಆರಂಭ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಮಾಹಿತಿ ಸಲ್ಲಿಸಿ!

29/03/2026 5:34 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » IPL 2026 : ಚಿನ್ನಸ್ವಾಮಿಯಲ್ಲಿ ` ಕೊಹ್ಲಿ-ಪಡಿಕ್ಕಲ್’ ಅಬ್ಬರ : SRH ವಿರುದ್ಧ RCBಗೆ 6 ವಿಕೆಟ್‌ಗಳ ಭರ್ಜರಿ ಜಯ | WATCH VIDEO
KARNATAKA

IPL 2026 : ಚಿನ್ನಸ್ವಾಮಿಯಲ್ಲಿ ` ಕೊಹ್ಲಿ-ಪಡಿಕ್ಕಲ್’ ಅಬ್ಬರ : SRH ವಿರುದ್ಧ RCBಗೆ 6 ವಿಕೆಟ್‌ಗಳ ಭರ್ಜರಿ ಜಯ | WATCH VIDEO

By kannadanewsnow5729/03/2026 5:47 AM

ಬೆಂಗಳೂರು: ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ತವರು ಮೈದಾನ ಚಿನ್ನಸ್ವಾಮಿಯಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ ಸರ್ವತೋಮುಖ ಪ್ರದರ್ಶನ ನೀಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಅಭಿಷೇಕ್ ಶರ್ಮಾ (7), ಟ್ರಾವಿಸ್ ಹೆಡ್ (11) ಮತ್ತು ನಿತಿಶ್ ಕುಮಾರ್ ರೆಡ್ಡಿ (1) ಬೇಗನೇ ವಿಕೆಟ್ ಒಪ್ಪಿಸಿದ್ದರಿಂದ ತಂಡ 29 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ ಜೊತೆಯಾದ ನಾಯಕ ಇಶಾನ್ ಕಿಶನ್ (80 ರನ್, 38 ಎಸೆತ, 8 ಬೌಂಡರಿ, 5 ಸಿಕ್ಸರ್) ಮತ್ತು ಹೆನ್ರಿಚ್ ಕ್ಲಾಸೆನ್ (31) 97 ರನ್‌ಗಳ ಅಮೂಘ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಕಿಶನ್ ಔಟ್ ಆದ ಬಳಿಕ ಅನಿಕೇತ್ ವರ್ಮಾ ಕೇವಲ 18 ಎಸೆತಗಳಲ್ಲಿ 43 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅಂತಿಮವಾಗಿ ಹೈದರಾಬಾದ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿತು.

ಆರ್‌ಸಿಬಿ ಪರ ಜೇಕಬ್ ಡಫಿ ಮತ್ತು ರೊಮಾರಿಯೊ ಶೆಫರ್ಡ್ ತಲಾ 3 ವಿಕೆಟ್ ಪಡೆದು ಮಿಂಚಿದರು.

ಆರ್‌ಸಿಬಿ ಬ್ಯಾಟಿಂಗ್ ಅಬ್ಬರ: ಕೊಹ್ಲಿ-ಪಡಿಕ್ಕಲ್ ಜುಗಲ್‌ಬಂದಿ

202 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಫಿಲ್ ಸಾಲ್ಟ್ (8) ಬೇಗನೇ ಔಟ್ ಆಗುವ ಮೂಲಕ ಆಘಾತ ನೀಡಿದರು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಇಂಪ್ಯಾಕ್ಟ್ ಪ್ಲೇಯರ್ ದೇವದತ್ ಪಡಿಕ್ಕಲ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು.

ದೇವದತ್ ಪಡಿಕ್ಕಲ್: 26 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಹಿತ 61 ರನ್ ಸಿಡಿಸಿ ಔಟ್ ಆದರು.

ವಿರಾಟ್ ಕೊಹ್ಲಿ: ಆರಂಭದಿಂದ ಅಂತ್ಯದವರೆಗೆ ಅಜೇಯವಾಗಿ ಉಳಿದ ಕೊಹ್ಲಿ, 38 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 69 ರನ್ ಬಾರಿಸಿ ಜಯದ ರೂವಾರಿಯಾದರು.

ನಾಯಕ ರಜತ್ ಪಾಟಿದಾರ್ ಕೇವಲ 12 ಎಸೆತಗಳಲ್ಲಿ 31 ರನ್ ಬಾರಿಸಿ ಗೆಲುವನ್ನು ಸುಲಭಗೊಳಿಸಿದರು. ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿ ಗುರಿ ತಲುಪಿತು.

ಪಂದ್ಯದ ಸಂಕ್ಷಿಪ್ತ ಸ್ಕೋರ್:
ಸನ್‌ರೈಸರ್ಸ್ ಹೈದರಾಬಾದ್: 201/9 (20 ಓವರ್) – ಇಶಾನ್ ಕಿಶನ್ 80, ಅನಿಕೇತ್ ವರ್ಮಾ 43; ಜೇಕಬ್ ಡಫಿ 3/22.

ರಾಯಲ್ ಚಾಲೆಂಜರ್ಸ್ ಬೆಂಗಳೂರು: 203/4 (15.4 ಓವರ್) – ವಿರಾಟ್ ಕೊಹ್ಲಿ 69*, ದೇವದತ್ ಪಡಿಕ್ಕಲ್ 61; ಡೇವಿಡ್ ಪೇಯ್ನ್ 2/35.

Khoobsoorat Batter 👌

pic.twitter.com/fq1PqA7GoY

— Royal Challengers Bengaluru (@RCBTweets) March 28, 2026

Hold. The. Pose.
Hold. The. Pose.
Hold. The. Pose.

pic.twitter.com/GdlPkxyjpk

— Royal Challengers Bengaluru (@RCBTweets) March 28, 2026

Peak Kohliaesthetics 🤌

pic.twitter.com/nfrwb0hDsH

— Royal Challengers Bengaluru (@RCBTweets) March 28, 2026

Wrists of GOLD.

pic.twitter.com/03qabohKFi

— Royal Challengers Bengaluru (@RCBTweets) March 28, 2026

🎬🍿

pic.twitter.com/YxZriuACbL

— Royal Challengers Bengaluru (@RCBTweets) March 28, 2026

IPL 2026: 'Kohli-Padikkal' din at Chinnaswamy: RCB beats SRH by 6 wickets | WATCH VIDEO
Share. Facebook Twitter LinkedIn WhatsApp Email

Related Posts

2025ನೇ ಸಾಲಿನ `ಮುಖ್ಯಮಂತ್ರಿ ಪದಕ’ ಪ್ರಕಟ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಸುಮನ್ ಪನ್ನೇಕರ್‌ ಸೇರಿ ರಾಜ್ಯದ 153 ಅಧಿಕಾರಿ, ಸಿಬ್ಬಂದಿಗೆ ಗೌರವ !

29/03/2026 5:52 AM2 Mins Read

ರಾಜ್ಯದ ಜನರೇ ಗಮನಿಸಿ : ಏ.1 ರಿಂದ ‘ಸ್ವಯಂ-ಗಣತಿ’ ಆರಂಭ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಮಾಹಿತಿ ಸಲ್ಲಿಸಿ!

29/03/2026 5:34 AM1 Min Read

ಸೋಲಿಸಲು ಬಂದವರ ನಡುವೆ ಸದ್ದಿಲ್ಲದೇ ಗೆದ್ದು ಮಾರಿಗುಡಿ ಖಜಾಂಚಿಯಾದ ವಿ.ಶಂಕರ್; ಸಾಗರ ಜನರ ಪ್ರೀತಿಯೇ ನನ್ನ ಶ್ರೀರಕ್ಷೆ ಎಂದು ಕೃತಜ್ಞತೆ

29/03/2026 12:06 AM2 Mins Read
Recent News

2025ನೇ ಸಾಲಿನ `ಮುಖ್ಯಮಂತ್ರಿ ಪದಕ’ ಪ್ರಕಟ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಸುಮನ್ ಪನ್ನೇಕರ್‌ ಸೇರಿ ರಾಜ್ಯದ 153 ಅಧಿಕಾರಿ, ಸಿಬ್ಬಂದಿಗೆ ಗೌರವ !

29/03/2026 5:52 AM

IPL 2026 : ಚಿನ್ನಸ್ವಾಮಿಯಲ್ಲಿ ` ಕೊಹ್ಲಿ-ಪಡಿಕ್ಕಲ್’ ಅಬ್ಬರ : SRH ವಿರುದ್ಧ RCBಗೆ 6 ವಿಕೆಟ್‌ಗಳ ಭರ್ಜರಿ ಜಯ | WATCH VIDEO

29/03/2026 5:47 AM

ರಾಜ್ಯದ ಜನರೇ ಗಮನಿಸಿ : ಏ.1 ರಿಂದ ‘ಸ್ವಯಂ-ಗಣತಿ’ ಆರಂಭ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಮಾಹಿತಿ ಸಲ್ಲಿಸಿ!

29/03/2026 5:34 AM

ಸೋಲಿಸಲು ಬಂದವರ ನಡುವೆ ಸದ್ದಿಲ್ಲದೇ ಗೆದ್ದು ಮಾರಿಗುಡಿ ಖಜಾಂಚಿಯಾದ ವಿ.ಶಂಕರ್; ಸಾಗರ ಜನರ ಪ್ರೀತಿಯೇ ನನ್ನ ಶ್ರೀರಕ್ಷೆ ಎಂದು ಕೃತಜ್ಞತೆ

29/03/2026 12:06 AM
State News
KARNATAKA

2025ನೇ ಸಾಲಿನ `ಮುಖ್ಯಮಂತ್ರಿ ಪದಕ’ ಪ್ರಕಟ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಸುಮನ್ ಪನ್ನೇಕರ್‌ ಸೇರಿ ರಾಜ್ಯದ 153 ಅಧಿಕಾರಿ, ಸಿಬ್ಬಂದಿಗೆ ಗೌರವ !

By kannadanewsnow5729/03/2026 5:52 AM KARNATAKA 2 Mins Read

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 153 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2025ನೇ ಸಾಲಿನ ಪ್ರತಿಷ್ಠಿತ…

IPL 2026 : ಚಿನ್ನಸ್ವಾಮಿಯಲ್ಲಿ ` ಕೊಹ್ಲಿ-ಪಡಿಕ್ಕಲ್’ ಅಬ್ಬರ : SRH ವಿರುದ್ಧ RCBಗೆ 6 ವಿಕೆಟ್‌ಗಳ ಭರ್ಜರಿ ಜಯ | WATCH VIDEO

29/03/2026 5:47 AM

ರಾಜ್ಯದ ಜನರೇ ಗಮನಿಸಿ : ಏ.1 ರಿಂದ ‘ಸ್ವಯಂ-ಗಣತಿ’ ಆರಂಭ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಮಾಹಿತಿ ಸಲ್ಲಿಸಿ!

29/03/2026 5:34 AM

ಸೋಲಿಸಲು ಬಂದವರ ನಡುವೆ ಸದ್ದಿಲ್ಲದೇ ಗೆದ್ದು ಮಾರಿಗುಡಿ ಖಜಾಂಚಿಯಾದ ವಿ.ಶಂಕರ್; ಸಾಗರ ಜನರ ಪ್ರೀತಿಯೇ ನನ್ನ ಶ್ರೀರಕ್ಷೆ ಎಂದು ಕೃತಜ್ಞತೆ

29/03/2026 12:06 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.