ಬೆಂಗಳೂರು: ದಿನಾಂಕ 02.04.2025, 10.04.2025, 18.04.2025, 24.04.2025, 03.05.2025,13.05.2025 ಹಾಗೂ 17.05.2025 ಗಳಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ TATA Indian Premier League 2025-IPL T20 ಕ್ರಿಕೆಟ್ ಪಂದ್ಯಾವಳಿಗಳ ವೀಕ್ಷಣೆಗೆ ಬಂದು ಹೋಗುವ ಸಾರ್ವಜನಿಕ ಪ್ರಯಾಣಿಕರಿಗೆ ಬಿಎಂಟಿಸಿ ಸಾರಿಗೆ ಸೌಲಭ್ಯ ಒದಗಿಸುತ್ತಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ.
ದಿನಾಂಕ 02.04.2025, 10.04.2025, 18.04.2025, 24.04.2025, 03.05.2025, 13.05.2025 ಹಾಗೂ 17.05.2025 ಗಳಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ TATA Indian Premier League 2025-IPL T20 ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿದ್ದು, ಸದರಿ ಕ್ರಿಕೆಟ್ ಪಂದ್ಯಾವಳಿಗೆ ಬಂದು-ಹೋಗುವ ವೀಕ್ಷಕರಿಗೆ ಬೇಡಿಕೆಗನುಗುಣವಾಗಿ ಬೆಂ.ಮ.ಸಾ.ಸಂಸ್ಥೆಯಿಂದ ಸಾರಿಗೆಗಳನ್ನು ಕಾರ್ಯಾಚರಿಸಲು ಕ್ರಮ ಕೈಗೊಳ್ಳಲಾಗಿದೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ವಿವಿಧ ಪ್ರದೇಶಗಳಿಗೆ ನಡುವೆ ಕಾರ್ಯಾಚರಿಸಲಾಗುವ ಸಾರಿಗೆಗಳ ವಿವರ ಕೆಳಕಂಡಂತಿದೆ:
ಕ್ರ ಸಂ. | ಮಾರ್ಗ ಸಂಖ್ಯೆ | ಎಲ್ಲಿಂದ | ಎಲ್ಲಿಗೆ |
1 | ಎಸ್.ಬಿ. ಎಸ್-1ಕೆ | ಎಂ. ಚಿನ್ನಸ್ವಾಮಿ ಕ್ರೀಡಾಂಗಣ | ಕಾಡುಗೋಡಿಬಸ್ ನಿಲ್ದಾಣ (ಹೆಚ್.ಎ.ಎಲ್‌ರಸ್ತೆ) |
2 | ಜಿ-2 | ಸರ್ಜಾಪುರ | |
3 | ಜಿ-3 | ಎಲೆಕ್ಟ್ರಾನಿಕ್ ಸಿಟಿ (ಹೊಸೂರುರಸ್ತೆ) | |
4 | ಜಿ-4 | ಬನ್ನೇರುಘಟ್ಟಮೃಗಾಲಯ | |
5 | ಜಿ-7 | ಜನಪ್ರಿಯ ಟೌನ್‌ಷಿಪ್ (ಮಾಗಡಿ ರಸ್ತೆ) | |
6 | ಜಿ-10 | ಆರ್.ಕೆ. ಹೆಗಡೆ ನಗರ ಯಲಹಂಕ (ನಾಗವಾರ, ಟ್ಯಾನರಿ ರಸ್ತೆ) | |
7 | 317 ಜಿ | ಹೊಸಕೋಟೆ | |
8 | 13 | ಬನಶಂಕರಿ |
BIG NEWS: ಶೀಘ್ರವೇ ರಾಜ್ಯದಲ್ಲಿ ‘6ನೇ ಗ್ಯಾರಂಟಿ’ ಜಾರಿ: ಯಾರಿಗೆ ಗೊತ್ತಾ? | Guarantee Scheme
BREAKING NEWS: ಹಾಸನದಲ್ಲಿ ತೀವ್ರ ಉಪಟಳ ನೀಡ್ತಿದ್ದ ಮೂರು ಪುಂಡಾನೆ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು