ಮುಂಬೈ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೂಪರ್ ಕಿಂಗ್ಸ್ 20 ರನ್ಗಳ ಭರ್ಜರಿ ಜಯ ಸಾಧಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಮೂರನೇ ಗೆಲುವಿಗಾಗಿ 207 ರನ್ಗಳ ಗುರಿಯನ್ನು ಬೆನ್ನಟ್ಟಿದ ಆತಿಥೇಯರು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಶಕ್ತರಾದರು.
ರೋಹಿತ್ ಶರ್ಮಾ 105 ರನ್ ಗಳಿಸಿದರೂ ಫ್ರಾಂಚೈಸಿಯನ್ನು ಗೆಲುವಿನತ್ತ ಮುನ್ನಡೆಸಲು ಸಾಧ್ಯವಾಗಲಿಲ್ಲ. ಚೆನ್ನೈ ಪರ ಮಥೀಶಾ ಪಥಿರಾನಾ 4 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಋತುರಾಜ್ ಗಾಯಕ್ವಾಡ್ (40 ಎಸೆತಗಳಲ್ಲಿ 69 ರನ್), ಶಿವಂ ದುಬೆ (38 ಎಸೆತಗಳಲ್ಲಿ 66 ರನ್) ಮತ್ತು ಎಂಎಸ್ ಧೋನಿ (4 ಎಸೆತಗಳಲ್ಲಿ 20 ರನ್) ಸಿಎಸ್ಕೆ ತಂಡವನ್ನು 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ಗಳಿಗೆ ಕೊಂಡೊಯ್ದರು.