ನವದೆಹಲಿ : ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಅಧ್ಯಕ್ಷೆ ಪಿ.ಟಿ ಉಷಾ ಅವರಿಗೆ ಭಾರತೀಯ ಕ್ರೀಡಾ ಪತ್ರಕರ್ತರ ಒಕ್ಕೂಟ (SJFI) ಮತ್ತು ದೆಹಲಿ ಸ್ಪೋರ್ಟ್ಸ್ ಜರ್ನಲಿಸ್ಟ್ಸ್ ಅಸೋಸಿಯೇಷನ್ (DSJA) ಭಾನುವಾರ ‘ಜೀವಮಾನ ಸಾಧನೆ’ ಪ್ರಶಸ್ತಿಯನ್ನ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಪ್ರದಾನ ಮಾಡಿದವು.
ಉಷಾ ಅವರ ಕ್ರೀಡಾ ವೃತ್ತಿಜೀವನವನ್ನ ಗೌರವಿಸಲು ಈ ಸಂದರ್ಭದಲ್ಲಿ ಪದಕ, ಪ್ರಶಂಸಾ ಪತ್ರ ಮತ್ತು ಸ್ಮರಣಿಕೆಯನ್ನ ನೀಡಲಾಯಿತು.
ಸಮಾರಂಭದಲ್ಲಿ ಗೌರವಾನ್ವಿತ ಅತಿಥಿ, ರಾಜ್ಯಸಭಾ ಸದಸ್ಯ ಮತ್ತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಭಾರತೀಯ ಶೂಟಿಂಗ್ ದಿಗ್ಗಜ ಜಸ್ಪಾಲ್ ರಾಣಾ ಉಪಸ್ಥಿತರಿದ್ದರು.
ಟೆನಿಸ್ ದಂತಕಥೆ ವಿಜಯ್ ಅಮೃತ್ರಾಜ್, ಮಾಜಿ ಬ್ಯಾಡ್ಮಿಂಟನ್ ಐಕಾನ್ ಪ್ರಕಾಶ್ ಪಡುಕೋಣೆ, ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮತ್ತು ಮಾಜಿ ಓಟಗಾರ ಮಿಲ್ಖಾ ಸಿಂಗ್ ನಂತ್ರ ಎಸ್ಜೆಎಫ್ಐ ಮತ್ತು ಡಿಎಸ್ಜೆಎ ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಭಾಜನರಾದ ಐದನೇ ವ್ಯಕ್ತಿ ಉಷಾ. 1977 ಮತ್ತು 2000 ರ ನಡುವಿನ ತಮ್ಮ ಸ್ಮರಣೀಯ ವೃತ್ತಿಜೀವನದುದ್ದಕ್ಕೂ ಉಷಾ ಭಾರತಕ್ಕಾಗಿ 103 ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ. ಅವರು ಏಷ್ಯನ್ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನ ಮತ್ತು ಏಳು ಬೆಳ್ಳಿ ಪದಕಗಳನ್ನು ಗೆದ್ದರು ಮತ್ತು ಒಲಿಂಪಿಕ್ಸ್ನ ಮೂರು ಆವೃತ್ತಿಗಳಲ್ಲಿ ಸ್ಪರ್ಧಿಸಿದರು.
BIGG NEWS : ಬ್ರಾಂಡ್ ಗಾರ್ಡಿಯನ್ಶಿಪ್ ಇಂಡೆಕ್ಸ್ 2024 : ಭಾರತೀಯರಲ್ಲಿ ‘ಅಂಬಾನಿ’ಗೆ ಅಗ್ರಸ್ಥಾನ
BREAKING : ಜಮ್ಮು-ಕಾಶ್ಮೀರ ಸೇನಾ ಸಂಕೀರ್ಣದಲ್ಲಿ ಭೀಕರ ಬೆಂಕಿ ಅವಘಡ : 6 ಸೈನಿಕರಿಗೆ ಗಾಯ, 8 ಅಂಗಡಿಗಳು ಭಸ್ಮ
“ರಘುರಾಂ ರಾಜನ್ ಅರ್ಥಶಾಸ್ತ್ರಜ್ಞರೇ ಅಥ್ವಾ ರಾಜಕಾರಣಿಯೇ.?” RBI ಮಾಜಿ ಗವರ್ನರ್ ವಿರುದ್ಧ ‘ವಿತ್ತ ಸಚಿವೆ’ ವಾಗ್ದಾಳಿ